ಚಾಲೆಂಜಿಂಗ್ ಸ್ಟಾರ್ ದರ್ಶನ್ ಎಡಗೈಗೆ ಆಪರೇಷನ್, ಒಂದು ತಿಂಗಳು ರೆಸ್ಟ್ ಅಗತ್ಯ ಎಂದ ವೈದ್ಯರು….!

Follow Us :

ಸ್ಯಾಂಡಲ್ ವುಡ್ ನ ಸ್ಟಾರ್‍ ನಟ ಚಾಲೆಂಜಿಂಗ್ ಸ್ಟಾರ್‍ ದರ್ಶðನ್ ರವರು ಇತ್ತೀಚಿಗೆ ತಮ್ಮ ಎಡಗೈಗೆ ಪೆಟ್ಟು ಮಾಡಿಕೊಂಡಿದ್ದರು. ಕಾಟೇರಾ ಸಿನೆಮಾದ ಮೂಲಕ ಬ್ಲಾಕ್ ಬ್ಲಸ್ಟರ್‍ ಹಿಟ್ ಪಡೆದುಕೊಂಡ ದರ್ಶನ್ ಸದ್ಯ ಡೆವಿಲ್ ಎಂಬ ಸಿನೆಮಾದ ಶೂಟಿಂಗ್ ನಲ್ಲಿ ಬ್ಯುಸಿಯಾಗಿದ್ದರು. ಈ ಸಿನೆಮಾ ಫಸ್ಟ್ ಲುಕ್ ಸಹ ಇತ್ತೀಚಿಗಷ್ಟೆ ಬಿಡುಗಡೆಯಾಗಿತ್ತು. ಮೊದಲ ಹಂತದ ಶೂಟಿಂಗ್ ಮುಗಿಯುವ ವೇಳೆಗೆ ದರ್ಶನ್ ತಮ್ಮ ಎಡಗೈಗೆ ಪೆಟ್ಟು ಮಾಡಿಕೊಂಡಿದ್ದು, ಆಪರೇಷನ್ ಸಹ ಮಾಡಿಸಿಕೊಂಡಿದ್ದು, ವೈದ್ಯರು ಒಂದು ತಿಂಗಳ ಕಾಲ ರೆಸ್ಟ್ ಮಾಡೋದು ಅಗತ್ಯ ಎಂದು ಹೇಳಿದ್ದಾರೆ ಎಂದು ತಿಳಿದುಬಂದಿದೆ.

ಕನ್ನಡದ ಬಹುನಿರೀಕ್ಷಿತ ಸಿನೆಮಾಗಳಲ್ಲಿ ಒಂದಾದ ಡೆವಿಲ್ ಸಿನೆಮಾದ ಶೂಟಿಂಗ್ ಸಮಯದಲ್ಲಿ ಬಿದ್ದ ದರ್ಶನ್ ರವರಿಗೆ ಮೂಳೆ ಹಾಗೂ ಮಾಂಸ ಖಂಡಕ್ಕೆ ಪೆಟ್ಟು ಬಿದ್ದಿತ್ತು. ಈ ಕಾರಣದಿಂದ ಅವರ ಎಡಗೈಗೆ ಶಸ್ತ್ರ ಚಿಕಿತ್ಸೆ ಮಾಡಲಾಗಿತ್ತು. ಶಸ್ತ್ರ ಚಿಕಿತ್ಸೆ ಮಾಡಿಸಿಕೊಂಡ ಬಳಿಕ ದರ್ಶನ್ ಮನೆಗೆ ಹಿಂತಿರುಗಿದ್ದಾರೆ. ಆಪರೇಷನ್ ಬಳಿಕ ಅವರ ಪೊಟೋಗಳು ಸೋಷಿಯಲ್ ಮಿಡಿಯಾದಲ್ಲಿ ಭಾರಿ ವೈರಲ್ ಆಗಿವೆ. ಇನ್ನೂ ವೈದ್ಯರು ದರ್ಶನ್ ಗೆ ಕೆಲವೊಂದು ಷರತ್ತುಗಳನ್ನು ಹಾಕಿ ಮನೆಗೆ ಕಳುಹಿಸಿದ್ದಾರೆ. ಅಷ್ಟಕ್ಕೂ ದರ್ಶನ್ ರವರಿಗೆ ವೈದ್ಯು ನೀಡಿದ ಸಲಹೆಗಳು ಏನು ಎಂಬ ವಿಚಾರಕ್ಕೆ ಬಂದರೇ, ದರ್ಶನ್ ಸಂಪೂರ್ಣವಾಗಿ ವಿಶ್ರಾಂತಿ ಪಡೆಯಬೇಕೆಂದು ಸಲಹೆ ನೀಡಿದ್ದಾರೆ. ಒಂದು ತಿಂಗಳು ಕಂಪ್ಲೀಟ್ ಆಗಿ ರೆಸ್ಟ್ ಮಾಡಬೇಕೆಂದು ಹೇಳಿದ್ದಾರೆ. ಒಂದು ತಿಂಗಳು ಕಾಲ ಶೂಟಿಂಗ್ ಗೆ ದರ್ಶನ್ ಹೋಗುವುದು ಬಹುತೇಕ ಅನುಮಾನ ಎನ್ನಲಾಗಿದೆ.

ಇನ್ನೂ ದರ್ಶನ್ ಟೀಂ ನೀಡಿದ ಮಾಹಿತಿಯಂತೆ, ದರ್ಶನ್ ರವರು ಡೆವಿಲ್ ಸಿನೆಮಾದ ಶೂಟಿಂಗ್ ಸಮಯದಲ್ಲಿ ಫೈಟಿಂಗ್ ದೃಶ್ಯ ಶೂಟ್ ಮಾಡುವಾಗ ಸ್ಲಿಪ್ ಆಗಿ ಕೆಳಗೆ ಬಿದಿದ್ದರು. ಅವರ ಎಡಗೈಗೆ ಏಟು ಆಗಿದ್ದು, ಮೂಳೆಗೆ ತಗುಲಿದೆ. ಮಾಂಸ ಖಂಡಕ್ಕೆ ಗಾಯವಾದ ಹಿನ್ನೆಲೆಯಲ್ಲಿ ಅದಕ್ಕೆ ಆಪರೇಷನ್ ಆಗಿದೆ. ವೈದ್ಯರು ಒಂದು ತಿಂಗಳು ರೆಸ್ಟ್ ಮಾಡಬೇಕೆಂದು ಹೇಳಿದ್ದಾರೆ ಎನ್ನಲಾಗಿದೆ. ಜೊತೆಗೆ ಜಿಮ್ ಕಡೆ ಸಹ ಹೋಗಬಾರದೆಂದು ಹೇಳಿದ್ದಾರೆ. ಇದೀಗ ದರ್ಶನ್ ರವರು ಮನೆಗೆ ಹಿಂದುರಿಗಿದ್ದು, ರೆಸ್ಟ್ ನಲ್ಲಿದ್ದಾರಂತೆ. ಈ ಹಿನ್ನೆಲೆಯಲ್ಲಿ ದರ್ಶನ್ ರವರ ಡೆವಿಲ್ ಸಿನೆಮಾ ಮತಷ್ಟು ತಡವಾಗಬಹುದು ಎನ್ನಲಾಗಿದೆ. ಆದರೆ ಡೆವಿಲ್ ಸಿನೆಮಾದ ನಿರ್ದೇಶಕ ಮಿಲನ ಪ್ರಕಾಶ್ ರವರು ಏಪ್ರಿಲ್ ಕೊನೆಯಲ್ಲಿ ಎರಡನೇ ಶೆಡ್ಯೂಲ್ ಶೂಟಿಂಗ್ ಮಾಡಲು ತಿರ್ಮಾನಿಸಿದ್ದಾರೆ ಎಂದು ಹೇಳಲಾಗುತ್ತಿದೆ.