News

ಹಿಂದೂಗಳು ವಿಶಾಲ ಹೃದಯದವರು, ಕೂಡಿ ಬಾಳುವ ಸಂಸ್ಕೃತಿ ನಮಗೆ ಬಂದಿದ್ದು ಹಿಂದೂ ಧರ್ಮದಿಂದ ಎಂದ ಜಾವೇದ್ ಅಖ್ತರ್….!

ಪ್ರಗತಿಪರ ಚಿಂತಕ, ಹಿರಿಯ ಕವಿ, ಗೀತರಚನೆಕಾರ ಜಾವೇದ್ ಅಖ್ತರ್‍ ಹಿಂದೂ ಧರ್ಮವನ್ನು ಕೊಂಡಾಡಿದ್ದಾರೆ. ಭಾರತದಲ್ಲಿ ಹಿಂದೂ ಸಂಸ್ಕೃತಿ ಹಾಗೂ ಸಂಪ್ರದಾಯದಿಂದಲೇ ಪ್ರಜಾಪ್ರಭುತ್ವ ಅಸ್ತಿತ್ವದಲ್ಲಿದೆ. ಹಿಂದೂ ಸಂಸ್ಕೃತಿ ನಮಗೆ ಕೂಡಿ ಬಾಳುವಂತಹ ಸಂಸ್ಕೃತಿಯನ್ನು ಕಲಿಸಿಕೊಟ್ಟಿದೆ ಎಂದು ಹೇಳಿದ್ದಾರೆ.

ಮುಂಬೈನಲ್ಲಿ ಮಹಾರಾಷ್ಟ್ರ ನವ ನಿರ್ಮಾಣ ಸೇನೆ ಆಯೋಜನೆ ಮಾಡಿದ್ದ ದೀಪೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಅನೇಕ ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಸಮಾಜದಲ್ಲಿ ಹೆಚ್ಚಾಗುತ್ತಿರುವ ಅಸಹಿಷ್ಣುತೆ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ. ಹಿಂದೂಗಳು ಸ್ವಚ್ಚ ಮನಸ್ಸಿನವರು. ಕೆಲವರು ಸದಾ ಅಸಹಿಷ್ಣುತೆಯನ್ನು ಹೊಂದಿದ್ದಾರೆ. ಆದರೆ ಹಿಂದೂಗಳು ಆ ರೀತಿಯಲ್ಲ, ಶ್ರೇಷ್ಟ ಗುಣವನ್ನು ಹೊಂದಿದ್ದಾರೆ. ಆದ್ದರಿಂದ ಅದನ್ನು ಯಾವುದೇ ಕಾರಣಕ್ಕೂ ಕಳೆದುಕೊಳ್ಳಬೇಡಿ, ಒಂದು ವೇಳೆ ಕಳೆದುಕೊಂಡರೇ ನೀವು ಸಹ ಬೇರೆಯವರಂತೆ ಆಗುತ್ತೀರಿ ಎಂದಿದ್ದಾರೆ.

ನಾನು ನಾಸ್ತಿಕನಾದರೂ ಸಹ ಭಗವಾನ್ ರಾಮ ಮತ್ತು ಸೀತಾ ದೇವಿಯ ನಾಡಲ್ಲಿ ಹುಟ್ಟಿದ್ದಕ್ಕೆ ಹೆಮ್ಮೆ ಪಡುತ್ತೇನೆ. ಸಮಾರಂಭದಲ್ಲಿ ಜೈ ಶ್ರೀ ರಾಮ್ ಎಂದು ಘೋಷಣೆ ಮಾಡಿದ್ದಾರೆ. ರಾಮಾಯಣ ಭಾರತದ ಸಾಂಸ್ಕೃತಿಕ ಪರಂಪರೆ ಎಂದಿದ್ದಾರೆ. ಇನ್ನೂ ಇತ್ತೀಚಿಗೆ ತೆರೆಕಾಣುತ್ತಿರುವ ಸಿನೆಮಾಗಳು ಇಡೀ ಕುಟುಂಬದ ಜೊತೆಗೆ ಕುಳಿತು ನೋಡಲು ಸಾಧ್ಯವಿಲ್ಲ. ದೇಶದಲ್ಲಿ ಅಭಿವ್ಯಕ್ತಿ ಸ್ವಾತಂತ್ಯ್ರ ಕುಸಿಯುತ್ತಿದೆ. ನಾನು ಮೊದಲಿನಿಂದ ಈ ವಿಚಾರವನ್ನೇ ಹೇಳಿಕೊಂಡು ಬರುತ್ತಿದ್ದೇನೆ. ನಾವು ಭಾರತವನ್ನು ತೊರೆದರೇ ಇಡೀ ಏಷ್ಯಾದಲ್ಲಿ ಅಂತಹ ಒಂದು ಪ್ರಜಾಪ್ರಭುತ್ವ ರಾಷ್ಟ್ರ ನೋಡಲು ಸಾಧ್ಯವಿಲ್ಲ.  ಇಲ್ಲಿ ಮೂರ್ತಿ ಪೂಜೆ ಮಾಡುವವನು, ಮಾಡದವನು, ಒಂದೇ ದೇವರನ್ನು ಪೂಜೆ ಮಾಡುವವನು, 32 ಕೋಟಿ ದೇವರನ್ನು ಪೂಜೆ ಮಾಡುವವನು, ಯಾವುದೇ ದೇವರನ್ನು ಪೂಜೆ ಮಾಡದವನು ಸಹ ಹಿಂದೂ. ಇದು ಹಿಂದೂ ಸಂಸ್ಕೃತಿ ನಮಗೆ ಪ್ರಜಾಪ್ರಭುತ್ವದ ಮೌಲ್ಯಗಳನ್ನು ನೀಡಿದೆ. ಈ ಕಾರಣದಿಂದಲೇ ನಾವು ಇಲ್ಲಿ ಬದುಕಿದ್ದೇವೆ ಎಂದು ಜಾವೇದ್ ಅಖ್ತರ್‍ ಹಿಂದೂ ಧರ್ಮವನ್ನು ಕೊಂಡಾಡಿದ್ದಾರೆ.

Most Popular

To Top