ಪತಿಗೆ ಪ್ರೀತಿಯ ಅಪ್ಪುಗೆ ನೀಡಿದ ಬನ್ನಿ ವೈಫ್, ರೊಮ್ಯಾಂಟಿಕ್ ಕಿಸ್ ಕೊಟ್ಟ ಸ್ನೇಹಾ, ಇಂಟರ್ ನೆಟ್ ಶೇಕ್ ಮಾಡುತ್ತಿರುವ ಪೊಟೋ….!

Follow Us :

ಟಾಲಿವುಡ್ ನಲ್ಲಿ ಕ್ಯೂಟ್ ಜೋಡಿ ಎಂದೇ ಕರೆಯಲಾಗುವ ಅಲ್ಲು ಅರ್ಜುನ್ ಹಾಗೂ ಅಲ್ಲು ಸ್ನೇಹಾ ಆಗಾಗ ವಿದೇಶಗಳನ್ನು ಸುತ್ತಾಡುತ್ತಾ ಎಂಜಾಯ್ ಮಾಡುತ್ತಿರುತ್ತಾರೆ. ಸೋಷಿಯಲ್ ಮಿಡಿಯಾದಲ್ಲಿ ಸದಾ ಆಕ್ಟೀವ್ ಆಗಿರುವ ಅಲ್ಲು ಸ್ನೇಹಾ, ಆಗಾಗ ಕೆಲವೊಂದು ಪೊಟೊಗಳನ್ನು ಹಂಚಿಕೊಳ್ಳುತ್ತಿರುತ್ತಾರೆ. ಇದೀಗ ಪತಿ ಅಲ್ಲು ಅರ್ಜುನ್ ಹಾಗೂ ಸ್ನೇಹಾ ರವರ ರೊಮ್ಯಾಂಟಿಕ್ ಸೆಲ್ಫಿಯೊಂದು ಸೊಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ. ಪ್ರೀತಿಯಿಂದ ಬನ್ನಿಗೆ ಮುತ್ತು ಕೊಟ್ಟಿದ್ದು, ಈ ಪೊಟೋ ಇದಿಗ ಸೋಷಿಯಲ್ ಮಿಡಿಯಾ ಶೇಕ್ ಮಾಡುತ್ತಿದೆ.

ನಟ ಅಲ್ಲು ಅರ್ಜುನ್ ರವರಂತೆ ಆತನ ಪತ್ನಿ ಸ್ನೇಹ ಸಹ ತುಂಬಾನೆ ಫೇಮಸ್ ಆಗಿದ್ದಾರೆ. ಆಕೆಯನ್ನು ಫ್ಯಾಷನ್ ಐಕಾನ್ ಎಂದೂ ಸಹ ಕರೆಯಲಾಗುತ್ತದೆ. ಸ್ನೇಹಾ ಸೋಷಿಯಲ್ ಮಿಡಿಯಾದಲ್ಲಿ ಆಕ್ಟೀವ್ ಆಗಿದ್ದು, ಅನೇಕ ಪೋಸ್ಟ್ ಗಳ ಮೂಲಕ ಹಲ್ ಚಲ್ ಸೃಷ್ಟಿ ಮಾಡುತ್ತಿರುತ್ತಾರೆ. ಆಗಾಗ ಆಕೆ ಕೆಲವೊಂದು ಗ್ಲಾಮರಸ್ ಪೊಟೋಗಳನ್ನು ಸಹ ಹಂಚಿಕೊಂಡು ಎಲ್ಲರನ್ನು ತನ್ನತ್ತ ತಿರುಗಿ ನೋಡುವಂತೆ ಮಾಡುತ್ತಿರುತ್ತಾರೆ. ಸೋಷಿಯಲ್ ಮಿಡಿಯಾದಲ್ಲಿ ಸ್ನೇಹ ಅಲ್ಲು ಅರ್ಜುನ್, ಮಕ್ಕಳ ಬಗ್ಗೆ ಅನೇಕ ವಿಚಾರಗಳನ್ನು ಹಂಚಿಕೊಳ್ಳುತ್ತಿರುತ್ತಾರೆ. ಅದರಲ್ಲೂ ಸಮಯ ಸಿಕ್ಕರೇ ಸಾಕು ಅಲ್ಲು ಅರ್ಜುನ್ ತನ್ನ ಕುಟುಂಬದೊಂದಿಗೆ ವೆಕೇಷನ್ ಗೆ ಹಾರುತ್ತಿರುತ್ತಾರೆ. ಪುಷ್ಪಾ ಸಿನೆಮಾದ ಮೂಲಕ ವರ್ಲ್ಡ್‌ ವೈಡ್ ಫೇಂ ಪಡೆದುಕೊಂಡ ಅಲ್ಲು ಅರ್ಜುನ್ ಅನೇಕ ಅವಾರ್ಡ್‌ ಗಳನ್ನು ಸಹ ಪಡೆದುಕೊಂಡಿದ್ದಾರೆ.

ಇನ್ನೂ ಅಲ್ಲು ಅರ್ಜುನ್ ರವರಂತೆ ಅಲ್ಲು ಸ್ನೇಹಾ ಸಹ ಭಾರಿ ಫೇಂ ಪಡೆದುಕೊಂಡಿದ್ದಾರೆ. ಆಕೆಗೆ ಸೋಷಿಯಲ್ ಮಿಡಿಯಾದಲ್ಲಿ ದೊಡ್ಡ ಅಭಿಮಾನಿ ಬಳಗವೇ ಇದೆ. ಜೊತೆಗೆ ಸ್ನೇಹಾ ಸ್ಟಾರ್‍ ನಟಿಯರಿಗಿಂತಲೂ ಕಡಿಮೆಯಿಲ್ಲ ಎಂಬಂತೆ ಹಾಟ್ ಪೊಟೋಶೂಟ್ಸ್ ಮೂಲಕ ಭಾರಿ ಸದ್ದು ಮಾಡುತ್ತಿರುತ್ತಾರೆ. ಅದೇ ರೀತಿ ಅಲ್ಲು ಅರ್ಜುನ್, ತಮ್ಮ ಮಕ್ಕಳೊಂದಿಗೆ ಇರುವಂತಹ ಸಹ ಪೊಟೋಗಳನ್ನು ಹಂಚಿಕೊಳ್ಳುತ್ತಿರುತ್ತಾರೆ. ಈ ಹಾದಿಯಲ್ಲೆ ಸ್ನೇಹಾ ಇಂಟರ್‍ ನೆಟ್ ಶೇಕ್ ಆಗುವಂತಹ ಪೋಟೊ ಒಂದನ್ನು ಹಂಚಿಕೊಂಡಿದ್ದಾರೆ.  ಈ ಪೊಟೋದಲ್ಲಿ ಸ್ನೇಹಾ ತನ್ನ ಮುದ್ದಿನ ಪತಿ ಅಲ್ಲು ಅರ್ಜುನ್ ರವರಿಗೆ ಪ್ರೀತಿಯ ಅಪ್ಪುಗೆ ನೀಡಿದ್ದಾರೆ, ಜೊತೆಗೆ ಸಿಹಿ ಮುತ್ತೊಂದನ್ನು ಸಹ ನೀಡಿದ್ದಾರೆ. ಈ ಪೊಟೋ ಹಂಚಿಕೊಂಡ ಕಡಿಮೆ ಸಮಯದಲ್ಲೇ ಇಂಟರ್‍ ನೆಟ್ ಶೇಕ್ ಆಗಿದೆ. ಅಭಿಮಾನಿಗಳು ಪುಲ್ ಖುಷಿಯಾಗಿ ರೊಮ್ಯಾಂಟಿಕ್ ಜೋಡಿ ಎಂಬೆಲ್ಲಾ ಕಾಮೆಂಟ್ ಗಳನ್ನು ಹರಿಬಿಡುತ್ತಿದ್ದಾರೆ.