ಜಾನ್ವಿ ಕಪೂರ್ ಹುಟ್ಟಹಬ್ಬದ ಸಪ್ರೈಸ್, NTR30 ಸಿನೆಮಾದ ಮೂಲಕ ಸೌತ್ ಗೆ ಎಂಟ್ರಿಕೊಟ್ಟ ಶ್ರೀದೇವಿ ಪುತ್ರಿ ಜಾನ್ವಿ…!

Follow Us :

ಸೌತ್ ಸಿನಿರಂಗದಲ್ಲಿ ಅನೇಕ ವರ್ಷಗಳ ಕಾಲ ಅನೇಕ ಸ್ಟಾರ್‍ ಗಳ ಜೊತೆಗೆ ನಟಿಸಿ ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಪಡೆದುಕೊಂಡ ದಿವಂಗತ ಶ್ರೀದೇವಿ ಪುತ್ರಿ ಜಾನ್ವಿ ಕಪೂರ್‍ ರವರಿಗೆ ಇಂದು ಹುಟ್ಟುಹಬ್ಬದ ಸಂಭ್ರಮ. ಸೌತ್ ಸಿನಿರಂಗದ ಶ್ರೀದೇವಿ ಅಭಿಮಾನಿಗಳು ಸುಮಾರು ವರ್ಷಗಳಿಂದ ಜಾನ್ವಿ ಕಪೂರ್‍ ರನ್ನು ತೆಲುಗು ಸಿನೆಮಾಗಳಲ್ಲಿ ನೋಡಲು ಕಾತುರದಿಂದ ಕಾಯುತ್ತಿದ್ದರು. ಇದೀಗ ಅವರ ಆಸೆ ಈಡೇರಿದೆ. ನಟಿ ಜಾನ್ವಿ ಕಪೂರ್‍ NTR30 ಸಿನೆಮಾದ ಮೂಲಕ ಸೌತ್ ಸಿನಿಮಾಗಳಲ್ಲಿ ಎಂಟ್ರಿ ಕೊಡುತ್ತಿದ್ದಾರೆ. ಜಾನ್ವಿ ಕಪೂರ್‍ ಹುಟ್ಟುಹಬ್ಬದ ಅಂಗವಾಗಿ NTR30 ಚಿತ್ರತಂಡ ಪೋಸ್ಟರ್‍ ಮೂಲಕ ಅಪ್ಡೇಟ್ ನೀಡಿದ್ದು, ಅಭಿಮಾನಿಗಳು ಪುಲ್ ಖುಷಿಯಾಗಿದ್ದಾರೆ.

ಬಾಲಿವುಡ್ ಯಂಗ್ ಬ್ಯೂಟಿ ಜಾನ್ವಿ ಕಪೂರ್‍ ಈಗಾಗಲೇ ಸಿನೆಮಾಗಳಲ್ಲಿ ಎಂಟ್ರಿ ಕೊಟ್ಟಿದ್ದಾರೆ. ದಿವಂಗತ ಶ್ರೀದೇವಿ ಪುತ್ರಿಯಾಗಿ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಸ್ಟಾರ್‍ ಕಿಡ್ ಆಗಿ ಬಾಲಿವುಡ್ ಸಿನೆಮಾಗಳಲ್ಲಿ ಎಂಟ್ರಿ ಕೊಟ್ಟ ಜಾನ್ವಿ ಇನ್ನೂ ಸಕ್ಸಸ್ ಕಂಡುಕೊಂಡಿಲ್ಲ ಎಂದೇ ಹೇಳಬಹುದು. ಆದರೂ ಸಹ ಬ್ಯಾಕ್ ಟು ಬ್ಯಾಕ್ ಹಿಂದಿ ಸಿನೆಮಾಗಳ ಮೂಲಕ ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಪಡೆದುಕೊಂಡಿದ್ದಾರೆ. ಇನ್ನೂ ಶ್ರೀದೇವಿ ಅಭಿಮಾನಿಗಳು ಜಾನ್ವಿ ಕಪೂರ್‍ ರವರಲ್ಲಿ ಶ್ರೀದೇವಿಯನ್ನು ನೋಡುತ್ತಾರೆ ಎಂಬ ಮಾತುಗಳಿವೆ. ಈ ಹಾದಿಯಲ್ಲೇ ಆಕೆಯನ್ನು ಸೌತ್ ಸಿನೆಮಾಗಳಲ್ಲಿ ನೋಡಲು ತುಂಬಾನೆ ಕಾಯುತ್ತಿದ್ದರು. ಇದೀಗ ಅವರ ಆಸೆ ಈಡೇರಿದೆ. NTR30 ಸಿನೆಮಾದಲ್ಲಿ ಜಾನ್ವಿ ಕಪೂರ್‍ ನಟಿಸುವುದು ಅಧಿಕೃತವಾಗಿದೆ. ಇದೀಗ NTR30 ಚಿತ್ರತಂಡ ಜಾನ್ವಿ ಕಪೂರ್‍ ರವರ ಸ್ಪೇಷಲ್ ಪೋಸ್ಟರ್ ಒಂದನ್ನು ಹಂಚಿಕೊಂಡಿದ್ದಾರೆ.

ಟಾಲಿವುಡ್ ನಿರ್ದೇಶಕ ಕೊರಟಾಲ ಶಿವ ಹಾಗೂ ಯಂಗ್ ಟೈಗರ್‍ ಎನ್.ಟಿ.ಆರ್‍ ಕಾಂಬಿನೇಷನ್ ನಲ್ಲಿ ಸೆಟ್ಟೇರಲಿರುವ NTR30 ಸಿನೆಮಾದಲ್ಲಿ ಜಾನ್ವಿ ಕಪೂರ್‍ ನಟಿಸುತ್ತಿದ್ದಾರೆ. ಈ ಸಿನೆಮಾದಲ್ಲಿ ಜೂನಿಯರ್‍ ಎನ್.ಟಿ.ಆರ್‍ ಗೆ ಜೋಡಿಯಾಗಿ ಬಾಲಿವುಡ್ ಯಂಗ್ ಬ್ಯೂಟಿ ಜಾನ್ವಿ ಕಪೂರ್‍ ನಟಿಸಲಿದ್ದಾರೆ. ಈ ಸುದ್ದಿಯನ್ನು ಜಾನ್ವಿ ಕಪೂರ್‍ ಹುಟ್ಟುಹಬ್ಬದ ಅಂಗವಾಗಿ ಆಕೆಯ ಫಸ್ಟ್ ಲುಕ್ ರಿವೀಲ್ ಮಾಡಿದ್ದಾರೆ. ಈ ಪೋಸ್ಟರ್‍ ನಲ್ಲಿ ಆಕೆಯ ಪಾತ್ರದ ಬಗ್ಗೆ ಸಹ ಕೊಂಚ ತಿಳಿಸಿದ್ದಾರೆ. NTR30 ಪ್ರಪಂಚದಲ್ಲಿ ಭಯಂಕರವಾದ ತುಫಾನಿನಲ್ಲಿ ಪ್ರಶಾಂತತೆ ಈಕೆ ಎಂದು ಹೇಳುತ್ತಾ NTR30 ಸಿನೆಮಾಗೆ ಸ್ವಾಗತ ಎಂದು ಪೋಸ್ಟರ್‍ ಹಂಚಿಕೊಂಡಿದ್ದಾರೆ. ಇನ್ನೂ ಈ ಸಿನೆಮಾದಲ್ಲಿನ ಜಾನ್ವಿ ಕಪೂರ್‍ ಲುಕ್ಸ್ ಎಲ್ಲರನ್ನೂ ಆಕರ್ಷಣೆ ಮಾಡಿದೆ. ಈ ಪೋಸ್ಟರ್‍ ಇದೀಗ ಸೊಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ.

ಈ ಪೋಸ್ಟರ್‍ ನಲ್ಲಿ ಜಾನ್ವಿ ಕಪೂರ್‍ ತುಂಬಾ ಮುದ್ದಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ನದಿ ತೀರದ ಬೆಟ್ಟದ ಮೇಲೆ ಕುಳಿತು ಕ್ಯೂಟ್ ಸ್ಮೈಲ್ ಕೊಟ್ಟಿದ್ದಾರೆ. ಇನ್ನೂ ಸೀನಿಯರ್‍ ಎನ್.ಟಿ.ಆರ್‍ ಹಾಗೂ ಶ್ರೀದೇವಿ ಕಾಂಬಿನೇಷನ್ ಬಳಿಕ ಜೂನಿಯರ್‍ ಎನ್.ಟಿ.ಆರ್‍ ಹಾಗೂ ಜಾನ್ವಿ ಕಪೂರ್‍ ಕಾಂಬಿನೇಷನ್ ನಲ್ಲಿ NTR30 ಸಿನೆಮಾ ಬರಲಿದೆ. ಈ ಸಿನೆಮಾದ ಮೇಲೆ ಈಗಾಗಲೇ ಭಾರಿ ನಿರೀಕ್ಷೆ ಹುಟ್ಟಿದೆ. ಈ ಸಿನೆಮಾ ಮುಂದಿನ ವರ್ಷ ಏಪ್ರಿಲ್ ಮಾಹೆಯಲ್ಲಿ ಬಿಡುಗಡೆಯಾಗಲಿದೆ.