Film News

ಶೂಟಿಂಗ್ ಸಮಯದಲ್ಲಿ ಅವಘಡ, ಗಂಭೀರವಾಗಿ ಗಾಯಗೊಂಡ ಬಿಗ್ ಬಿ ಅಮಿತಾಭ್…!

ಪ್ರಭಾಸ್ ಅಭಿನಯದ ಪ್ರಾಜೆಕ್ಟ್ ಕೆ ಸಿನೆಮಾ ಭಾರಿ ನಿರೀಕ್ಷೆಯನ್ನು ಹುಟ್ಟಿಸಿದೆ. ನಾಗ ಆಶ್ವಿನ್ ನಿರ್ದೇಶನದಲ್ಲಿ ಈ ಸಿನೆಮಾ ಮೂಡಿಬರುತ್ತಿದೆ. ಭಾರಿ ಬಜೆಟ್ ನಲ್ಲಿ ಈ ಸಿನೆಮಾ ತೆರೆಗೆ ಬರಲಿದೆ. ಇನ್ನೂ ಈ ಸಿನೆಮಾದಲ್ಲಿ ಬಾಲಿವುಡ್ ರಂಗದ ಸ್ಟಾರ್‍ ನಟ ಅಮಿತಾಬ್ ಬಚ್ಚನ್ ಸಹ ನಟಿಸುತ್ತಿದ್ದಾರೆ. ಇತ್ತೀಚಿಗೆ ಹೈದರಾಬಾದ್ ನಲ್ಲಿ ಈ ಸಿನೆಮಾದ ಶೂಟಿಂಗ್ ನಡೆಯುತ್ತಿದ್ದಾಗ ಅಮಿತಾಭ್ ರವರಿಗೆ ಗಾಯವಾಗಿದೆಯಂತೆ. ಈ ಸುದ್ದಿ ತಡವಾಗಿ ಬೆಳಕಿಗೆ ಬಂದಿದೆ.

ಪ್ರಾಜೆಕ್ಟ್ ಕೆ ಸಿನೆಮಾದ ಶೂಟಿಂಗ್ ಹೈದರಾಬಾದ್ ನ ಆರ್‍.ಎಫ್.ಸಿ ನಲ್ಲಿ ನಡೆಯುತ್ತಿತ್ತು. ಈ ವೇಳೆ ಶೂಟಿಂಗ್ ಸೆಟ್ ನಲ್ಲಿ ಅವಘಡ ನಡೆದಿದೆ. ಈ ಸಮಯದಲ್ಲಿ ಅಮಿತಾಭ್ ಗೆ ಗಾಯಗಳಾಗಿದೆ. ಕೂಡಲೇ ಅವರನ್ನು ಹೈದರಾಬಾದ್ ನ ಎಐಜಿ ಆಸ್ಪತ್ರೆಯಲ್ಲಿ ದಾಖಲಿಸಿದ್ದಾರೆ. ಅಲ್ಲಿಯೇ ಅವರು ಎರಡು ದಿನಗಳ ಕಾಲ ಚಿಕಿತ್ಸೆ ಪಡೆದುಕೊಂಡಿದ್ದಾರೆ. ಇನ್ನೂ ಕಳೆದ ಭಾನುವಾರ ಸಂಜೆ ಅವರನ್ನು ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಿದ್ದಾರಂತೆ. ಸದ್ಯ ಅಮಿತಾಭ್ ಮುಂಬೈನಲ್ಲಿರುವ ಅವರ ನಿವಾಸದಲ್ಲಿ ವಿಶ್ರಾಂತಿ ಪಡೆದುಕೊಳ್ಳುತ್ತಿದ್ದಾರಂತೆ. ಇನ್ನೂ ಈ ಸುದ್ದಿ ತಡವಾಗಿ ಬೆಳಕಿಗೆ ಬಂದಿದೆ. ಈ ಬಗ್ಗೆ ಅಮಿತಾಬ್ ಬಚ್ಚನ್ ಸಹ ಸ್ಪಂದಿಸಿದ್ದಾರೆ. ತನಗಾದ ಅಪಘಾತದ ಬಗ್ಗೆ ವಿವರಣೆ ನೀಡಿದ್ದಾರೆ. ಈ ವೇಳೆ ಅವರಿಗೆ ಗಂಭೀರವಾದ ಗಾಯಗಳಾಗಿದ್ದಾಗಿ ತಿಳಿಸಿದ್ದಾರೆ.

ಇನ್ನೂ ಈ ಬಗ್ಗೆ ಅಮಿತಾಬ್ ರಿಯಾಕ್ಟ್ ಆಗಿದ್ದು. ಪ್ರಾಜೆಕ್ಟ್ ಕೆ ಸಿನೆಮಾದ ಆಕ್ಷನ್ ದೃಶ್ಯಗಳಲ್ಲಿ ನಟಿಸುವಾಗ ಗಾಯಗೊಂಡಿದ್ದಾಗಿ ಬಳಿಕ ಬಲ ಭಾಗದ ಭುಜಕ್ಕೆ ಹಾಗೂ ಮೂಳೆಗೆ ಗಾಯವಾಗಿದೆ. ಈ ಕಾರಣದಿಂದ ಶೂಟೀಂಗ್ ಸಹ ಕ್ಯಾನ್ಸಲ್ ಆಯಿತು. ಕೂಡಲೇ ಹೈದರಾಬಾದ್ ನ ಎಐಜಿ ಆಸ್ಪತ್ರೆಯಲ್ಲಿ ಕರೆದುಕೊಂಡು ಬಂದು ಚಿಕಿತ್ಸೆ ಕೊಡಿಸಿದರು. ಅಲ್ಲಿಯೇ ಸಿಟಿ ಸ್ಕ್ಯಾನಿಂಗ್ ಸೇರಿದಂತೆ ಕೆಲವೊಂದು ಟೆಸ್ಟ್ ಗಳನ್ನು ಸಹ ಮಾಡಿ ಬಳಿಕ ಮನೆಗೆ ಬಂದಿದ್ದೇನೆ. ಇನ್ನೂ ನಾನು ಗುಣಮುಖರಾಗಲು ಸಮಯ ಬೇಕಾಗುತ್ತದೆ. ರೆಸ್ಟ್ ತೆಗೆದುಕೊಳ್ಳುವಂತೆ ವೈದ್ಯರು ಸೂಚನೆ ನೀಡಿದ್ದಾರೆ. ಆದ್ದರಿಂದ ಶೂಟೀಂಗ್ ರದ್ದು ಮಾಡಿದ್ದಾಗಿ ಅಮಿತಾಬ್ ತಿಳಿಸಿದ್ದಾರೆ. ಜೊತೆಗೆ ಉಸಿರಾಡಲು ತುಂಬಾ ನೋವಾಗುತ್ತಿದೆ. ಇದಕ್ಕಾಗಿ ಔಷಧಿಗಳನ್ನು ಪಡೆದುಕೊಳ್ಳುತ್ತಿದ್ದೇನೆ. ಈ ವಾರ ಅಭಿಮಾನಿಗಳನ್ನು ಭೇಟಿಯಾಗಲು ಕಷ್ಟ ಎಂದು ಹೇಳಿದ್ದಾರೆ. ಈ ಕಾರಣದಿಂದಲೇ ಈ ವಿಚಾರ ಹಂಚಿಕೊಳ್ಳುತ್ತಿದ್ದೇನೆ ಎಂದು ಅಮಿತಾಬ್ ತಿಳಿಸಿದ್ದಾರೆ.

ಇನ್ನೂ ನಾಗ್ ಅಶ್ವಿನ್ ನಿರ್ದೇಶನದಲ್ಲಿ ಪ್ರಾಜೆಕ್ಟ್ ಕೆ ಸಿನೆಮಾ ಭಾರಿ ಬಜೆಟ್ ನಲ್ಲಿ ತೆರೆಗೆ ಬರಲಿದೆ. ಈ ಸಿನೆಮಾದಲ್ಲಿ ಪ್ರಭಾಸ್ ಹಾಗೂ ದೀಪಿಕಾ ಪಡುಕೋಣೆ ನಟಿಸುತ್ತಿದ್ದಾರೆ. ವೈಜಯಂತಿ ಬ್ಯಾನರ್‍ ನಡಿ ಅಶ್ವಿನಿದತ್ ಈ ಸಿನೆಮಾ ನಿರ್ಮಾಣ ಮಾಡುತ್ತಿದ್ದಾರೆ. ಈ ಸಿನೆಮಾ ಪ್ಯಾನ್ ವರ್ಲ್ಡ್ ರೇಂಜ್ ನಲ್ಲಿ ತೆರೆಯ ಮೇಲೆ ಅಬ್ಬರಿಸಲಿದೆ. ಇನ್ನೂ ಈ ಸಿನೆಮಾ ಮುಂದಿನ ವರ್ಷ ಸಂಕ್ರಾಂತಿ ಹಬ್ಬದ ಅಂಗವಾಗಿ ಜ.12 ರಂದು ತೆರೆಗೆ ಬರಲಿದೆ ಎನ್ನಲಾಗಿದೆ.

Most Popular

To Top