Film News

ಮತ್ತೊಮ್ಮೆ ಬಾಯ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಜಾನ್ವಿ ಕಪೂರ್, ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆದ ವಿಡಿಯೋ….!

ಸಿನಿರಂಗದಲ್ಲಿ ಲವ್, ಬ್ರೇಕಪ್, ಮ್ಯಾರೇಜ್ ನಡೆಯುತ್ತಿರುತ್ತವೆ. ಅದರಲ್ಲೂ ಬಾಲಿವುಡ್ ನಲ್ಲಿ ಎಷ್ಟು ಬೇಗ ಲವ್ ಆಗುತ್ತೋ ಅಷ್ಟೇ ಬೇಗ ಬ್ರೇಕಪ್ ಸಹ ಆಗುತ್ತಿರುತ್ತದೆ. ಜೊತೆಗೆ ಅನೇಕ ಜೋಡಿಗಳು ಲಿವಿಂಗ್ ರಿಲೇಷನ್ ಶಿಪ್ ನಡೆಸುತ್ತಿವೆ. ಇನ್ನೂ ಈ ಸುದ್ದಿಗಳು ಬಿರುಗಾಳಿಯಂತೆ ಸೋಷಿಯಲ್ ಮಿಡಿಯಾದಲ್ಲಿ ಹರಿದಾಡುತ್ತಿರುತ್ತದೆ. ಇದೀಗ ಬಾಲಿವುಡ್ ಸ್ಟಾರ್‍ ಕಿಡ್ ಜಾನ್ವಿ ಕಪೂರ್‍ ತನ್ನ ಬಾಯ್ ಫ್ರೆಂಡ್ ಜೊತೆಗೆ ಕ್ಯಾಮೆರಾಗಳಿಗೆ ಸಿಕ್ಕಿಬಿದ್ದಿದ್ದು, ಜೊತೆಯಾಗಿ ಹೋಗಿದ್ದ ಅವರು, ಬೇರೆ ಬೇರೆಯಾಗಿ ಮನೆಗೆ ಹೋಗಿದ್ದಾರೆ. ಸದ್ಯ ಈ ಸಂಬಂಧ ವಿಡಿಯೋ ಒಂದು ವೈರಲ್ ಆಗುತ್ತಿದೆ.

ಸದ್ಯದ ಪರಿಸ್ಥಿತಿಯಲ್ಲಿ ಲಿವಿಂಗ್ ರಿಲೇಷನ್ ಶಿಪ್ ಎಂಬುದು ತುಂಬಾನೆ ಸಾಮಾನ್ಯವಾಗಿದೆ. ಈ ಹಿಂದೆ ಸಿಕ್ರೇಟ್ ಆಗಿ ಅಫೈರ್‍ ಸಾಗಿಸುತ್ತಿದ್ದವರು ಇದೀಗ ಸಾರ್ವಜನಿಕವಾಗಿಯೇ ಸುತ್ತಾಡುತ್ತಿದ್ದಾರೆ. ಅವರ ರಿಲೇಷನ್ ಶಿಪ್ ಬಗ್ಗೆ ಏನು ಹೇಳದೇ ಎಲ್ಲರನ್ನೂ ಗೊಂದಲಕ್ಕೆ ದೂಡುತ್ತಿರುತ್ತಾರೆ. ಮತ್ತೆ ಕೆಲವು ನಾವು ಲವರ್ಸ್ ನಿಮಗೇ ಬೇಕಾದದ್ದು ಬರೆದುಕೊಳ್ಳಿ ಎಂದು ತಮ್ಮ ಕೆಲಸ ತಾವು ಮಾಡಿಕೊಳ್ಳುತ್ತಾ ಸಾಗುತ್ತಿರುತ್ತಾರೆ. ಇನ್ನೂ ಲವ್ ಮಾಡಿ ಕೆಲವೇ ದಿನಗಳಲ್ಲಿ ಬ್ರೇಕಪ್ ಮಾಡಿಕೊಂಡ ಜೋಡಿಗಳೂ ಸಹ ನಾವು ಸಿನಿರಂಗದಲ್ಲಿ ಹೆಚ್ಚು ನೋಡುತ್ತಿರುತ್ತೇವೆ.  ಇದೀಗ ಸ್ಟಾರ್‍ ಕಿಡ್ ಜಾನ್ವಿ ಕಪೂರ್‍ ತನ್ನ ಭಾಯ್ ಪ್ರೆಂಡ್ ಜೊತೆಗೆ ಸಿಕ್ಕಿಬಿದ್ದಿದ್ದಾರೆ. ಮುಂಬೈನ ವಿಮಾನ ನಿಲ್ದಾಣದಲ್ಲಿ ಜಾನ್ವಿ ಕಪೂರ್‍ ಹಾಗೂ ಆಕೆಯ ಪ್ರಿಯಕರ ಶಿಖರ್‍ ಪಹಾರಿಯಾ ಜೊತೆಗೆ ಕಾಣಿಸಿಕೊಂಡಿದ್ದಾರೆ. ವಿಮಾನ ನಿಲ್ದಾಣದಿಂದ ಹೊರಬರುವಾಗ ಕ್ಯಾಮೆರಾ ಕಣ್ಣಿಗೆ ಬಿದ್ದಿದಾರೆ.

ಕಳೆದ ಮಾರ್ಚ್‌ 31 ರಂದು ನೀತಾ ಅಂಬಾನಿ ರವರು ಆಯೋಜಿಸಿದ್ದ ಈವೆಂಟ್ ನಲ್ಲಿ ಜಾನ್ವಿ ಹಾಗೂ ಶಿಖರ್‍ ಪಹಾರಿಯಾ ಜೊತೆಗೆ ಹಾಜರಾಗಿದ್ದಾರೆ. ವೈಟ್ ಡ್ರೆಸ್ ನಲ್ಲಿ ಜಾನ್ವಿ ಕಪೂರ್‍ ಕಾಣಿಸಿಕೊಂಡಿದ್ದಾರೆ. ವಿಮಾನ ನಿಲ್ದಾಣದಿಂದ ಹೊರಗೆ ಬರುವಾಗ ಇಬ್ಬರೂ ಬೇರೆ ಬೇರೆ ಕಾರುಗಳನ್ನು ಏರಿ ಹೋಗಿದ್ದಾರೆ. ಸದ್ಯ ಈ ವಿಡಿಯೋ ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ. ಇನ್ನೂ ಈ ಹಿಂದೆ ಸಹ ಅನೇಕ ಬಾರಿ ಅವರಿಬ್ಬರೂ ಕಾಣಿಸಿಕೊಂಡಿದ್ದಾರೆ. ಇಬ್ಬರೂ ಸಾರ್ವಜನಿಕವಾಗಿ ಕಾಣಿಸಿಕೊಂಡರೂ ಸಹ ಇಲ್ಲಿಯವರೆಗೂ ಅವರ ರಿಲೇಷನ್ ಶಿಪ್ ಬಗ್ಗೆ ಎಲ್ಲೂ ಓಪೆನ್ ಆಗಿಲ್ಲ. ಮಹಾರಾಷ್ಟ್ರ ಮಾಜಿ ಮುಖ್ಯಮಂತ್ರಿ ಸುಶೀಲ್ ಕುಮಾರ್ ಶಿಂಡೆ ಮೊಮ್ಮಗನೇ ಜಾನ್ವಿ ಕಪೂರ್‍ ಬಾಯ್ ಫ್ರೆಂಡ್ ಶಿಖರ್‍ ವಹಾರಿಯಾ. ಸುಮಾರು ದಿನಗಳಿಂದ ಅವರಿಬ್ಬರೂ ಡೇಟಿಂಗ್ ನಲ್ಲಿದ್ದಾರೆ ಎಂದು ಹೇಳಲಾಗುತ್ತಿದೆ.

ಇನ್ನೂ ಜಾನ್ವಿ ಕಪೂರ್‍ ಸಿನಿರಂಗಕ್ಕೆ ಎಂಟ್ರಿ ಕೊಟ್ಟು ವರ್ಷಗಳು ಕಳೆದರೂ ಸಹ ಇನ್ನೂ ಆಕೆಗೆ ಬಿಗ್ ಬ್ರೇಕ್ ನೀಡುವ  ಸಿನೆಮಾ ಇನ್ನೂ ಸಿಗಲಿಲ್ಲ ಎಂದೇ ಹೇಳಬಹುದಾಗಿದೆ. ಸದ್ಯ ಜಾನ್ವಿ ಕಪೂರ್‍ NTR30 ಸಿನೆಮಾದ ಮೂಲಕ ಸೌತ್ ಸಿನಿಮಾಗಳಿಗೆ ಎಂಟ್ರಿ ಕೊಡುತ್ತಿದ್ದಾರೆ. ಜೊತೆಗೆ ಆಕೆ ಮತಷ್ಟು ಸಿನೆಮಾಗಳಲ್ಲಿ ನಟಿಸುತ್ತಿದ್ದಾರೆ. ಆಕೆ ಸಿನೆಮಾಗಳಿಗಿಂತ ಹೆಚ್ಚು ಸೋಷಿಯಲ್ ಮಿಡಿಯಾ ಮೂಲಕ ಕ್ರೇಜ್ ಪಡೆದುಕೊಂಡಿದ್ದಾರೆ.

Most Popular

To Top