ಪರಪುರಷನೊಂದಿಗೆ ಡೇಟಿಂಗ್ ನಡೆಸಿದ ಪತ್ನಿ, ಪ್ರೀತಿಸಿ ಮದುವೆಯಾದ ಪತ್ನಿಯನ್ನು ಮಚ್ಚಿನಿಂದ ಕತ್ತರಿಸಿದ ಪತಿ….!

Follow Us :

ತನ್ನ ಪತ್ನಿ ಪರಪುರುಷನೊಂದಿಗೆ ಅಕ್ರಮ ಸಂಬಂಧ ಹೊಂದಿದ್ದಾಳೆ ಎಂಬ ಅನುಮಾನದಿಂದ ನಡು ರಸ್ತೆಯಲ್ಲೇ ತನ್ನ ಬಾಯ್ ಫ್ರೆಂಡ್ ಎದುರೇ ಮೀನು ಕತ್ತರಿಸುವಂತಹ ಮಚ್ಚಿನಲ್ಲಿ ಮನಸ್ಸಿಗೆ ಬಂದಂತೆ ಕತ್ತರಿಸಿ ಹಾಕಿದ್ದಾನೆ. ಆ ಸಮಯದಲ್ಲಿ ಅಲ್ಲಿಯೇ ಇದ್ದ ಕೆಲ ಸ್ಥಳೀಯರು ಪತಿಯನ್ನು ಹಿಡಿದುಕೊಂಡು ಮಹಿಳೆಯನ್ನು ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ಈ ಭಯಾನಕ ಘಟನೆ ಬೆಂಗಳೂರಿನ ಮುರುಗೇಶ್ ಪಾಳ್ಯದ ವಿಂಡ್ ಟನೆಲ್ ರಸ್ತೆಯಲ್ಲಿ ನಡೆದಿದೆ.

ಹೊಸಕೋಟೆ ಮೂಲದ ಶೇಖ್ ಮುಜೀಬ್ ಕ್ಯಾಬ್ ಡ್ರೈವರ್‍ ಕೆಲಸ ಮಾಡಿಕೊಂಡು ಬೆಂಗಳೂರಿನ ಆರ್‍.ಟಿ.ನಗರದಲ್ಲಿ ವಾಸವಿದ್ದ. ಕಳೆದ ಮೂರು ವರ್ಷಗಳಿಂದ ಪ್ರೀತಿಸಿ ನೈಗರ್‍ (28) ಎಂಬಾಕೆನ್ನು ಮದುವೆಯಾಗಿದ್ದ. ನೈಗರ್‍ ಖಾಸಗಿ ಕಂಪನಿಯಲ್ಲಿ ಕೆಸಲಕ್ಕೆ ಹೋಗುತ್ತಿದ್ದಳು. ಆದರೆ ಇತ್ತೀಚಿಗೆ ಹೆಂಡತಿಯ ನಡತೆಯ ಮೇಲೆ ಅನುಮಾನ ಹೊಂದಿದ್ದ ಶೇಖ್ ಮುಜೀಬ್ ಹೆಂಡತಿಯಿಂದ ದೂರವಾಗಿದ್ದ. ನೈಗರ್‍ ಸಲೀಂ ಎಂಬಾತನೊಂದಿಗೆ ಸುತ್ತಾಡಿದ್ದಾಳೆ ಎಂಬ ವಿಚಾರ ಸಹ ಮುಜೀಬ್ ಗಮನಕ್ಕೆ ಬಂದಿದೆ. ಬಳಿಕ ಕಳೆದ ಸೋಮವಾರ ಶಿವಾಜಿನಗರಕ್ಕೆ ಹೋಗಿ ಮೀನು ಕತ್ತರಿಸುವ ಮಚ್ಚು ಖರೀದಿ ಮಾಡಿದ್ದಾನೆ. ಪತ್ನಿ ಪಿಜಿಗೆ ಹೋಗುವಾಗ ರಸ್ತೆಯಲ್ಲೇ ಹೊಂಚು ಹಾಕಿ ಕುಳಿತಿದ್ದು ಮುಜೀಬ್ ಆಕೆಯ ಮೇಲೆ ಮಾರಾಣಾಂತಿಕ ಹಲ್ಲೆ ನಡೆಸಿದ್ದಾನೆ.

ನೈಗರ್‍ ಸಂಜೆ 7 ಗಂಟೆ ಸಮಯದಲ್ಲಿ ತನ್ನ ಭಾಯ್ ಪ್ರೆಂಡ್ ಸಲೀಂ ಜೊತೆಗೆ ಬಂದಿದ್ದಾಳೆ. ಅದನ್ನು ನೋಡಿದ ಮುಜೀಬ್ ಆಕ್ರೋಷಗೊಂಡು ಆಖೆಯ ಕೈ ಬೆರಳುಗಳನ್ನು ಮಚ್ಚಿನಿಂದ ಹಲ್ಲೆ ಮಾಡಿದ್ದಾನೆ. ಈ ಸಮಯದಲ್ಲಿ ನೈಗರ್‍ ತಲೆ ಮೇಲೆ ಕೈ ಇಟ್ಟುಕೊಂಡಿದ್ದ ಕಾರಣ ಆಕೆಯ ತಲೆಗೂ ಸಹ ಗಂಭೀರ ಗಾಯವಾಗಿದೆ. ಬಳಿಕ ಅಲ್ಲಿದ್ದ ಸ್ಥಳೀಯರು ಆಕೆಯನ್ನು ರಕ್ಷಣೆ ಮಾಡಿ ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ಈ ಸಂಬಂಧ ಜೀವನ್ ಭೀಮಾ ನಗರದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಯನ್ನು ಬಂಧಿಸಿ ವಿಚಾರಣೆ ನಡೆಸಲಾಗುತ್ತಿದೆ ಎನ್ನಲಾಗಿದೆ.