ಶೀಘ್ರದಲ್ಲೇ ಹೈಪರ್ ಆದಿ ಮದುವೆಯಂತೆ, ಆಕೆಯೊಂದಿಗೆ ಪ್ರೀತಿಗೆ ಬಿದ್ದು ಮದುವೆಗೆ ಸಿದ್ದರಾಗಿದ್ದಾರಂತೆ…..!

Follow Us :

ತೆಲುಗಿನ ಕಿರುತೆರೆ ಶೋಗಳಲ್ಲಿ ಭಾರಿ ಸದ್ದು ಮಾಡುತ್ತಿರುವ ಕಾಮಿಡಿ ಶೋ ಜಬರ್ದಸ್ತ್ ಶೋ ಮೂಲಕ ಅನೇಕರು ಇದೀಗ ಸಿನೆಮಾಗಳಲ್ಲೂ ಸಹ ನಟಿಸುವ ಅವಕಾಶವನ್ನು ಸಹ ಪಡೆದುಕೊಂಡಿದ್ದಾರೆ. ಈ ಶೋನಲ್ಲಿ ಕಲಾ ರಸಿಕರನ್ನು ಹೊಟ್ಟೆ ಹುಣ್ಣಾಗುವಂತೆ ನಗಿಸುವ ಹೈಪರ್‍ ಆದಿ ಬಗ್ಗೆ ಹೆಚ್ಚು ಪರಿಚಯದ ಅವಶ್ಯಕತೆಯಿಲ್ಲ. ಇದೀಗ ಹೈಪರ್‍ ಆದಿ ಮದುವೆಯ ಬಗ್ಗೆ ಸುದ್ದಿಯೊಂದು ಕೇಳಿಬರುತ್ತಿದೆ. ಹೈಪರ್‍ ಆದಿ ಪ್ರೀತಿಯಲ್ಲಿದ್ದು, ಶೀಘ್ರದಲ್ಲೇ ಮದುವೆಯಾಗಲಿದ್ದಾರಂತೆ. ಸದ್ಯ ಈ ಸುದ್ದಿ ಇದೀಗ ಸೋಷಿಯಲ್ ಮಿಡಿಯಾ ಹಾಗೂ ಸಿನಿವಲಯದಲ್ಲಿ ಜೋರಾಗಿ ಹರಿದಾಡುತ್ತಿದೆ.

ಸಿನಿರಸಿಕರನ್ನು ಹಾಗೂ ಕಿರುತೆರೆ ರಸಿಕರನ್ನು ಹೊಟ್ಟೆ ತುಂಬಾ ನಗಿಸುವಂತಹ ಹೈಪರ್‍ ಆದಿ ಜಬರ್ದಸ್ತ್ ಶೋ ಮೂಲಕ ಭಾರಿ ಫೇಂ ಪಡೆದುಕೊಂಡರು. ಹೈಪರ್‍ ಆದಿ ಪಂಚ್ ಗಳ ಮೂಲಕ ಕಿರುತೆರೆಯಲ್ಲಿ ಸೆನ್ಷೇಷನ್ ಆಗಿದ್ದಾರೆ. ಜಬರ್ದಸ್ತ್ ಎಂದರೇ ಆದಿ ಎಂಬಂತೆ ಮಾರ್ಪಾಡಾಗಿದ್ದಾರೆ. ಇದರ ಜೊತೆಗೆ ಢಿ ಹಾಗೂ ಶ್ರೀದೇವಿ ಡ್ರಾಮಾ ಕಂಪನಿಯನ್ನೂ ಸಹ ತನ್ನದೇ ಆದ ಶೈಲಿಯಲ್ಲಿ ಪ್ರೇಕ್ಷಕರನ್ನು ರಂಜಿಸುವ ಕೆಲಸ ಮಾಡುತ್ತಿದ್ದಾರೆ. ಜೊತೆಗೆ ಅನೇಕ ಸ್ಟಾರ್‍ ನಟರ ಸಿನೆಮಾಗಳಲ್ಲಿ ಪ್ರಮುಖ ಪಾತ್ರವನ್ನು ಪೋಷಣೆ ಸಹ ಮಾಡುತ್ತಾ ಬೆಳ್ಳಿತೆರೆಯಲ್ಲೂ ಸಹ ಮಿಂಚುತ್ತಿದ್ದಾರೆ. ಇದೀಗ ಹೈಪರ್‍ ಆದಿ ಮದುವೆ ಬಗ್ಗೆ ಸುದ್ದಿಯೊಂದು ಹರಿದಾಡುತ್ತಿದ್ದು, ಸದ್ಯ ಆದಿ ಪ್ರೀತಿಯಲ್ಲಿದ್ದು ಶೀಘ್ರದಲ್ಲೇ ಮದುವೆಯಾಗಲಿದ್ದಾರಂತೆ.

ಈಗಾಗಲೇ ಸಿನಿರಂಗ ಹಾಗೂ ಕಿರುತೆರೆಯ ಅನೇಕರು ಹಸೆಮಣೆ ಏರುತ್ತಿದ್ದಾರೆ. ಇದೀಗ ಹೈಪರ್‍ ಆದಿ ಸಹ ಮದುವೆಯಾಗಲಿದ್ದಾರಂತೆ. ಕಿರಾಕ್ ಆರ್‍.ಪಿ, ಜಬರ್ದಸ್ತ್ ರಾಕೇಶ್, ಯಾದಮ್ಮ ರಾಜು ಸೇರಿದಂತೆ ಅನೇಕರು ಮದುವೆಯಾಗಿದ್ದಾರೆ. ಇದೀಗ ಹೈಪರ್‍ ಆದಿ ಸಹ ಮದುವೆಯಾಗಲಿದ್ದಾರಂತೆ. ಸ್ಟಾರ್‍ ಕಮೆಡಿಯನ್ ಹೈಪರ್‍ ಆದಿ ಶೀಘ್ರದಲ್ಲೇ ಮದುವೆಯಾಗಲಿದ್ದಾರಂತೆ. ಹೈಪರ್‍ ಆದಿ ಯೂಟ್ಯೂಬ್ ಚಾನಲ್ ಒಂದರ ಆಂಕರ್‍ ಜೊತೆಗೆ ಪ್ರೀತಿಗೆ ಬಿದ್ದಿದ್ದಾರಂತೆ. ಸುಮಾರು ದಿನಗಳಿಂದ ಅವರಿಬ್ಬರ ನಡುವೆ ಪ್ರೇಮ ಪಯಣ ಸಾಗುತ್ತಿದೆ ಎಂಬ ಮಾತುಗಳು ಸಹ ಕೇಳಿಬರುತ್ತಿವೆ.  ಹೈಪರ್‍ ಆದಿ ಮನರಂಜನಾ ರಂಗಕ್ಕೆ ಬಂದಾಗ ಆಕೆಯೇ ಆತನಿಗೆ ಸಪೋರ್ಟ್ ಮಾಡಿದ್ದರಂತೆ. ಆಕೆಯನ್ನೇ ಮದುವೆಯಾಗಲಿದ್ದಾರೆ ಎಂಬ ರೂಮರ್‍ ಹರಿದಾಡುತ್ತಿದೆ.

ಅವರಿಬ್ಬರ ನಡುವೆ ಮೊದಲಿಗೆ ಸ್ನೇಹ ಹುಟ್ಟಿ ಬಳಿಕ ಪ್ರೀತಿ ಹುಟ್ಟಿ ಮದುವೆಯಾಗಲಿದ್ದಾರಂತೆ. ಇನ್ನೂ ಅವರ ಪ್ರೀತಿಗೆ ಅವರಿಬ್ಬರ ಮನೆಯ ಪೋಷಕರೂ ಸಹ ಒಪ್ಪಿದ್ದಾರೆ ಎಂದೂ ಸಹ ಹೇಳಲಾಗುತ್ತಿದೆ. ಶೀಘ್ರದಲ್ಲೇ ಈ ಜೋಡಿ ಮದುವೆಯ ಶುಭ ಸುದ್ದಿಯನ್ನು ನೀಡಲಿದ್ದಾರಂತೆ. ಆದರೆ ಈ ಬಗ್ಗೆ ಅಧಿಕೃತ ಮಾಹಿತಿ ಇಲ್ಲದೇ ಇದ್ದರೂ ಸುದ್ದಿ ಮಾತ್ರ ಬಿರುಗಾಳಿಯಂತೆ ಹರಿದಾಡುತ್ತಿದೆ.