ಫೆಸ್ಟಿವಲ್ ಮೋಡ್ ನಲ್ಲಿ ಬ್ಯೂಟಿಪುಲ್ ಲುಕ್ಸ್ ಕೊಟ್ಟ ಅನುಪಮಾ, ಕ್ಯೂಟ್ ಲುಕ್ಸ್ ಮೂಲಕ ಯುವಕರನ್ನು ಕಟ್ಟಿ ಹಾಕಿದ ಮಲ್ಲು ಕುಟ್ಟಿ…….!

ಕೇರಳದಲ್ಲಿ ಅದ್ದೂರಿಯಾಗಿ ಆಚರಿಸುವಂತಹ ದೊಡ್ಡ ಹಬ್ಬ ಓನಂ. ಕೇರಳದಲ್ಲಿರುವ ಹಿಂದೂಗಳು ಈ ಹಬ್ಬವನ್ನು ತುಂಬಾ ಅದ್ದೂರಿಯಾಗಿ ಆಚರಣೆ ಮಾಡುತ್ತಾರೆ. ಓನಂ ಹಬ್ಬದಂದು ಬಂಗಾರದ ಅಂಚಿನ ಬಿಳಿ ಬಣ್ಣದ ಬಟ್ಟೆ ಧರಿಸುವುದು ಅಲ್ಲಿನ ಸಂಪ್ರದಾಯ. ಕೇರಳದ…

ಕೇರಳದಲ್ಲಿ ಅದ್ದೂರಿಯಾಗಿ ಆಚರಿಸುವಂತಹ ದೊಡ್ಡ ಹಬ್ಬ ಓನಂ. ಕೇರಳದಲ್ಲಿರುವ ಹಿಂದೂಗಳು ಈ ಹಬ್ಬವನ್ನು ತುಂಬಾ ಅದ್ದೂರಿಯಾಗಿ ಆಚರಣೆ ಮಾಡುತ್ತಾರೆ. ಓನಂ ಹಬ್ಬದಂದು ಬಂಗಾರದ ಅಂಚಿನ ಬಿಳಿ ಬಣ್ಣದ ಬಟ್ಟೆ ಧರಿಸುವುದು ಅಲ್ಲಿನ ಸಂಪ್ರದಾಯ. ಕೇರಳದ ಮಹಿಳೆಯರು ಈ ಸಂಪ್ರದಾಯವನ್ನು ಕಟ್ಟುನಿಟ್ಟಾಗಿ ಪಾಲಿಸುತ್ತಾರೆ. ಅದರಲ್ಲೂ ಸಿನೆಮಾ ತಾರೆಯರೂ ಸಹ ಈ ಹಬ್ಬವನ್ನು ತುಂಬಾ ಸಂಭ್ರಮ ಹಾಗೂ ಸಡಗರದಿಂದ ಆಚರಿಸುತ್ತಾರೆ.  ಈ ಹಾದಿಯಲ್ಲೇ ಸ್ಟಾರ್‍ ನಟಿ ಅನುಪಮಾ ಪರಮೇಶ್ವರನ್ ಸಹ ಓನಂ ಹಬ್ಬವನ್ನು ತುಂಬಾ ಸಡಗರದಿಂದ ಆಚರಿಸಿದ್ದಾರೆ. ಹಬ್ಬದ ಅಂಗವಾಗಿ ಆಕೆ ಬ್ಯೂಟಿಪುಲ್ ಲುಕ್ಸ್ ಕೊಟ್ಟಿದ್ದು, ಪೊಟೋಗಳು ವೈರಲ್ ಆಗಿದೆ.

ಮಲಯಾಳಂ ಕುಟ್ಟಿ ಅನುಪಮಾ ಪರಮೇಶ್ವರ್‍ ಅದ್ದೂರಿಯಾಗಿ ಓನಂ ಹಬ್ಬವನ್ನು ಆಚರಿಸಿದ್ದಾರೆ. ತನ್ನ ಮನೆಯಲ್ಲಿ ಓನಂ ಹಬ್ಬದ ಸಿದ್ದತೆಗೆ ಸಂಬಂಧಿಸಿದ ಪೊಟೋಗಳನ್ನು ಹಂಚಿಕೊಂಡಿದ್ದಾರೆ. ಈ ಪೊಟೋಗಳಲ್ಲಿ ಅನುಪಮಾ ತುಂಬಾ ಮುದ್ದಾಗಿ ಕಾಣಿಸಿಕೊಂಡಿದ್ದಾರೆ. ಬ್ಯೂಟಿಪುಲ್ ಲುಕ್ಸ್ ಜೊತೆಗೆ ಕ್ಯೂಟ್ ಆಗಿ ಸ್ಮೈಲ್ ಕೊಡುತ್ತಾ ಎಲ್ಲರನ್ನೂ ತನ್ನತ್ತ ತಿರುಗಿ ನೋಡುವಂತೆ ಮಾಡುತ್ತಿದ್ದಾರೆ. ಕ್ಯೂಟ್ ಸ್ಮೈಲ್, ಲುಕ್ಸ್ ಮೂಲಕ ಎಲ್ಲಾ ಯುವಕರನ್ನೂ ಕಟ್ಟಿಹಾಕುತ್ತಿದ್ದಾರೆ. ಇನ್ನೂ ಆಕೆ ಈ ಪೊಟೋಗಳನ್ನು ತನ್ನ ಸೋಷಿಯಲ್ ಮಿಡಿಯಾ ಖಾತೆಯಲ್ಲಿ ಹಂಚಿಕೊಂಡಿದ್ದು. ಕಡಿಮೆ ಸಮಯದಲ್ಲೇ ಸಖತ್ ವೈರಲ್ ಆಗುತ್ತಿವೆ. ಅಭಿಮಾನಿಗಳು ಹಾಗೂ ನೆಟ್ಟಿಗರು ಆಕೆಗೆ ಓನಂ ಹಬ್ಬದ ಶುಭಾಷಯಗಳನ್ನು ಹೇಳುತ್ತಿದ್ದಾರೆ. ಜೊತೆಗೆ ಆಕೆಯ ಸೌಂದರ್ಯವನ್ನು ಹೊಗಳುತ್ತಿದ್ದಾರೆ.

ಯಂಗ್ ಬ್ಯೂಟಿ ಅನುಪಮಾ ಪರಮೇಶ್ವರ್‍ ಫೇಡ್ ಔಟ್ ಆದ ಸಮಯದಲ್ಲೇ ಕಾರ್ತಿಕೇಯ-2 ಸಿನೆಮಾದ ಮೂಲಕ ಸಕ್ಸಸ್ ಕಂಡುಕೊಂಡರು. ಈ ಸಿನೆಮಾದ ಬಳಿಕ ಆಕೆ ಬ್ಯಾಕ್ ಟು ಬ್ಯಾಕ್ ಸಿನೆಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಕ್ರೇಜಿ ಸಿನೆಮಾಗಳಲ್ಲಿ ಅವಕಾಶಗಳನ್ನು ಪಡೆದುಕೊಳ್ಳುತ್ತಿದ್ದಾರೆ. ಕಾರ್ತಿಕೇಯ-2, 18 ಪೇಜಸ್, ಬಟರ್‍ ಫ್ಲೈ ಸಿನೆಮಾಗಳ ಮೂಲಕ ಹ್ಯಾಟ್ರಿಕ್ ಸಿನೆಮಾಗಳನ್ನು ಪಡೆದುಕೊಂಡರು. ಇದೀಗ ಮತಷ್ಟು ಸಿನೆಮಾಗಳಲ್ಲಿ ನಟಿಸುತ್ತಿದ್ದಾರೆ. ಜೊತೆಗೆ ಸೋಷಿಯಲ್ ಮಿಡಿಯಾದಲ್ಲೂ ಸಹ ಆಕ್ಟೀವ್ ಆಗಿರುತ್ತಾರೆ. ಸೋಷಿಯಲ್ ಮಿಡಿಯಾದಲ್ಲಿ ತಮ್ಮ ಸಿನೆಮಾಗಳ ಅಪ್ಡೇಟ್ ಗಳ ಜೊತೆಗೆ ಪೊಟೋಶೂಟ್ಸ್ ಮೂಲಕ ಮತಷ್ಟು ಫಾಲೋಯಿಂಗ್ ಬೆಳೆಸಿಕೊಳ್ಳುತ್ತಿರುತ್ತಾರೆ.

ಇನ್ನೂ ಅನುಪಮಾ ಡಿಜೆ ಟಿಲ್ಲು ಸೀಕ್ವೆಲ್ ಟಿಲ್ಲು ಸ್ಕ್ವೇರ್‍ ನಲ್ಲಿ ಸಿದ್ದು ಜೊನ್ನಲಗಡ್ಡ ಜೊತೆಗೆ ನಟಿಸುತ್ತಿದ್ದಾರೆ. ಇದರ ಜೊತೆಗೆ ಲೇಡಿ ಓರಿಯೆಂಟೆಡ್ ಸೈರನ್ ಎಂಬ ಸಿನೆಮಾದಲ್ಲಿ, ಮಾಸ್ ಮಹಾರಾಜ ರವಿತೇಜ ಜೊತೆಗೆ ಈಗಲ್ ಎಂಬ ಸಿನೆಮಾದಲ್ಲಿ ಸಹ ನಟಿಸುತ್ತಿದ್ದಾರೆ. ಈ ರೀತಿಯಲ್ಲಿ ಆಕೆ ಬ್ಯಾಕ್ ಟು ಬ್ಯಾಕ್ ಸಿನೆಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಜೊತೆಗೆ ಆಕೆ ತನ್ನ ಸಂಭಾವನೆಯನ್ನು ಸಹ ಏರಿಸಿಕೊಂಡಿದ್ದಾರೆ.