Film News

ಮತ್ತೊಮ್ಮೆ ತಾಯಿಯಾಗುತ್ತಿದ್ದಾರೆ ಎವಲಿನ್ ಶರ್ಮಾ, ಬೇಬಿ ಬಂಪ್ ಪೊಟೋ ಮೂಲಕ ಸುದ್ದಿ ತಿಳಿಸಿದ ಬ್ಯೂಟಿ…!

ಬಾಲಿವುಡ್ ನ ಖ್ಯಾತ ನಟಿ ಎವೆಲಿನ್ ಶರ್ಮಾ ಮತ್ತೊಮ್ಮೆ ತಾಯಿಯಾಗುತ್ತಿದ್ದಾರೆ, ಈ ಬಗ್ಗೆ ಆಕೆಯೇ ಸೋಷಿಯಲ್ ಮಿಡಿಯಾ ಮೂಲಕ ಸುದ್ದಿಯನ್ನು ಹಂಚಿಕೊಂಡಿದ್ದಾರೆ. ಪ್ರಭಾಸ್ ಜೊತೆಗೆ ಸಾಹೋ ಸಿನೆಮಾದಲ್ಲಿ ನಟಿಸುವ ಮೂಲಕ ತೆಲುಗು ಪ್ರೇಕ್ಷಕರಿಗೂ ಸಹ ಹತ್ತಿರವಾಗಿದ್ದರು ಎವೆಲಿನ್ ಶರ್ಮಾ. ಇದೀಗ ಆಕೆ ಗರ್ಭಿಣಿಯಾದ ಸುದ್ದಿಯನ್ನು ಸೋಷಿಯಲ್ ಮಿಡಿಯಾದಲ್ಲಿ ಪೊಟೋ ಒಂದನ್ನು ಶೇರ್‍ ಮಾಡುವ ಮೂಲಕ ಹಂಚಿಕೊಂಡಿದ್ದು, ಆಕೆಗೆ ಅಭಿಮಾನಿಗಳೂ ಸೇರಿದಂತೆ ಅನೇಕರು ಶುಭಾಷಯಗಳನ್ನು ಕೋರುತ್ತಿದ್ದಾರೆ.

ನಟಿ ಎವೆಲಿನ್ ಶರ್ಮಾ ಬಾಲಿವುಡ್ ನಲ್ಲಿ ಒಳ್ಳೆಯ ಫೇಂ ಸಂಪಾದಿಸಿಕೊಂಡ ನಟಿಯಾಗಿದ್ದಾರೆ. ಎವಲಿನ್ ಮದುವೆಯಾಗುವುದಕ್ಕೂ ಮುಂಚೆ ಬ್ಯಾಕ್ ಟು ಬ್ಯಾಕ್ ಸಿನೆಮಾಗಳ ಮೂಲಕ ಸದ್ದು ಮಾಡಿದ್ದರು. ಸದ್ಯ ಆಕೆ ವೈವಾಹಿಕ ಜೀವನವನ್ನು ಎಂಜಾಯ್ ಮಾಡುತ್ತಿದ್ದಾರೆ. ಕಳೆದ 2019 ಅಕ್ಟೊಬರ್‍ ಮಾಹೆಯಲ್ಲಿ ಎವಲಿನ್ ಶರ್ಮಾ ಆಸ್ಟ್ರೇಲಿಯಾ ಮೂಲದ ದಂತವೈದ್ಯ ಕಂ ಉದ್ಯಮಿ ಭಿಂಡಿ ಎಂಬಾತನೊಂದಿಗೆ ಎಂಗೇಜ್ ಮೆಂಟ್ ಮಾಡಿಕೊಂಡು ಬಳಿಕ 2021 ಮೇ ಮಾಹೆಯಲ್ಲಿ ಅವರಿಬ್ಬರ ಮದುವೆ ಆಸ್ಟ್ರೇಲಿಯಾದ ಬೆರಿಸ್ಪೇನ್ ನಲ್ಲಿ ಅದ್ದೂರಿಯಾಗಿ ನಡೆಯಿತು. ಬಳಿಕ ಅದೇ ವರ್ಷ ನವೆಂಬರ್‍ ಮಾಹೆಯಲ್ಲಿ ಮಗುವಿಗೆ ಜನ್ಮ ಕೊಟ್ಟರು. ಇದೀಗ ಮತ್ತೊಮ್ಮೆ ಆಕೆ ಗರ್ಭಿಣಿಯಾಗಿದ್ದಾರೆ.

ನಟಿ  ಎವಲಿನ್ ಶರ್ಮಾ ಸೋಷಿಯಲ್ ಮಿಡಿಯಾ ಮೂಲಕ ತನ್ನ ಅಭಿಮಾನಿಗಳಿಗೆ ಗುಡ್ ನ್ಯೂಸ್ ಕೊಟ್ಟಿದ್ದಾರೆ. ತಾನು ಮತ್ತೇ ತಾಯಿಯಾಗುತ್ತಿರುವುದಾಗಿ ಸೋಷಿಯಲ್ ಮಿಡಿಯಾದ ಮೂಲಕ ವಿಚಾರ ಹಂಚಿಕೊಂಡಿದ್ದಾರೆ. ಸೋಷಿಯಲ್ ಮಿಡಿಯಾದಲ್ಲಿ ತನ್ನ ಬೇಬಿ ಬಂಪ್ ಪೊಟೋ ಹಂಚಿಕೊಂಡು ಶೀಘ್ರದಲ್ಲೇ ಬೇಬಿ ಬರಲಿದೆ ಎಂದು ಸಂತೋಷವನ್ನು ವ್ಯಕ್ತಪಡಿಸಿದ್ದಾರೆ. ಇನ್ನೂ ಈ ಪೊಟೋಗೆ ಆಕೆ ಸೆಕೆಂಡ್ ಬೇಬಿ ಬರುತ್ತಿದೆ. ಆ ಬೇಬಿಯನ್ನು ನಾನು ಎತ್ತಿಕೊಂಡು ಮುದ್ದಾಡಲು ಎದುರು ನೋಡುತ್ತಿದ್ದೇನೆ ಎಂದು ಕ್ಯಾಪ್ಷನ್ ಹಾಕಿದ್ದಾರೆ. ಇನ್ನೂ ಆಕೆಯ ಅಭಿಮಾನಿಗಳು ಈ ಪೊಟೋ ಬಂದಿದ್ದೆ ತಡ ಶುಭಾಷಯಗಳನ್ನು ಹರಿಬಿಡುತ್ತಾ ಪೊಟೋ ಅನ್ನು ವೈರಲ್ ಮಾಡುತ್ತಿದ್ದಾರೆ.

ಇನ್ನೂ ನಟಿ ಎವಲಿನ್ ಶರ್ಮಾ 2012 ರಿಂದ ಸಿನಿರಂಗದಲ್ಲಿ ಆಕ್ಟೀವ್ ಆಗಿದ್ದರು. ಆದರೆ ಲಾಕ್ ಡೌನ್ ಸಮಯದಲ್ಲಿ ಸೈಲೆಂಟ್ ಆದರು. ಬ್ಯಾಕ್ ಟು ಬ್ಯಾಕ್ ಸಿನೆಮಾಗಳ ಮೂಲಕ ಅಭಿಮಾನಿಗಳನ್ನು ರಂಜಿಸುತ್ತಿದ್ದರು. ಇನ್ನೂ ಮದುವೆಯಾದ ಬಳಿಕ ಆಕೆ ಸಿನೆಮಾಗಳಿಂದ ದೂರವೇ ಉಇಳಿದರು. ಸದ್ಯ ಆಕೆ ವೈವಾಹಿಕ ಜೀವನವನ್ನು ಎಂಜಾಯ್ ಮಾಡುತ್ತಿದ್ದು, ತನ್ನ ಕುಟುಂಬದೊಂದಿಗೆ ಸಮಯ ಕಳೆಯುತ್ತಿದ್ದಾರೆ.

Most Popular

To Top