News

ಮಾಡ್ರನ್ ಬಟ್ಟೆ ಧರಿಸುತ್ತಾಳೆ ಎಂದು ಪತ್ನಿಯ ಕತ್ತು ಸೀಳಿ ಬರ್ಬರವಾಗಿ ಕೊಲೆ ಮಾಡಿದ ಪತಿ….!

ಇಂದಿನ ಕಾಲದಲ್ಲಿ ವಿವಿಧ ಕಾರಣಗಳಿಂದ ಕೊಲೆಗಳು ನಡೆಯುತ್ತಿರುತ್ತವೆ. ಇದೀ ಪತಿಯೊಬ್ಬ ಬಟ್ಟೆಯ ಕಾರಣದಿಂದ ಪತ್ನಿಯನ್ನೇ ಕೊಲೆ ಮಾಡಿದ್ದಾನೆ. ಪತ್ನಿ ತುಂಡುಡುಗೆ ಧರಿಸು‌ತ್ತಾಳೆಂದು ಕೋಪಗೊಂಡ ಪತಿ ಆಕೆಯ ಕತ್ತು ಸೀಳಿ ಕೊಲೆ ಮಾಡಿದ್ದಾನೆ. ಈ ಘಟನೆ ಹಾಸನ ಜಿಲ್ಲೆಯ ಅರಸೀಕೆರೆ ತಾಲೂಕಿನ ರಾಂಪುರ ಎಂಬ ಗ್ರಾಮದಲ್ಲಿ ನಡೆದಿದೆ.

ಹಾಸನ ಜಿಲ್ಲೆಯ ಅರಸಿಕೆರೆ ತಾಲೂಕಿನ ರಾಂಪುರ ಗ್ರಾಮನದ ನಿವಾಸಿ ಜೀವನ್ ಎಂಬಾತ ತನ್ನ ಪತ್ನಿ ಜ್ಯೋತಿ (22) ತುಂಡುಡುಗೆ ಧರಿಸುತ್ತಾಳೆಂದು ಕತ್ತು ಸೀಳಿ ಪತ್ನಿಯನ್ನೆ ಕೊಲೆ ಮಾಡಿದ್ದಾನೆ. ಇನ್ನೂ ಮೃತ ಜ್ಯೋತಿ ತುಂಡು ಬಟ್ಟೆ ಧರಿಸುತ್ತಾಳೆ ಎಂದು ಆರೋಪಿ ಜೀವನ್ ಕೋಪ ಮಾಡಿಕೊಂಡಿದ್ದನಂತೆ. ಇದೇ ಕಾರಣದಿಂದ ಆಕೆಯೊಂದಿಗೆ ಜಗಳ ಮಾಡಿಕೊಂಡಿದ್ದನಂತೆ. ಜಗಳ ಅತಿರೇಕಕ್ಕೆ ಹೋಗಿ ಪತ್ನಿಯನ್ನು ಕೊಲೆ ಮಾಡಿದ್ದಾನೆ. ಇನ್ನೂ ಈ ಜೋಡಿ ಮದುವೆಯಾಗಿ ವರ್ಷವಷ್ಟೆ ಆಗಿದೆ ಎಂದು ತಿಳಿದುಬಂದಿದೆ.

ಇನ್ನೂ ಮೃತ ಜ್ಯೋತಿ ಹಾಗೂ ಜೀವನ್ ಇಬ್ಬರೂ ಪರಸ್ಪರ ಪ್ರೀತಿಸಿ ವರ್ಷದ ಹಿಂದೆ ಮದುವೆಯಾಗಿದ್ದರು. ಧಾರವಾಡ ಮೂಲದ ಇವರು ಹಾಸನ ಜಿಲ್ಲೆಯ ಅರಸೀಕೆರೆ ತಾಲೂಕಿನ ರಾಂಪುರ ಎಂಬ ಗ್ರಾಮದಲ್ಲಿ ವಾಸವಾಗಿದ್ದರು. ಇನ್ನೂ ಜ್ಯೋತಿಗೆ ತುಂಡುಡುಗೆ, ಮಾಡ್ರನ್ ಡ್ರೆಸ್ ಗಳನ್ನು ಧರಿಸುವುದು ತುಂಬಾ ಇಷ್ಟವಾಗಿತ್ತು. ಆದರೆ ಜೀವನ್ ಗೆ ಇದು ಇಷ್ಟ ಆಗುತ್ತಿರಲಿಲ್ಲ. ಈ ಕಾರಣದಿಂದ ಇಬ್ಬರ ನಡುವೆ ಆಗಾಗ ಜಗಳ ನಡೆಯುತ್ತಿತ್ತು. ಇನ್ನೂ ನಿನ್ನೆ ಜ್ಯೋತಿ ಮಾಡ್ರನ್ ಡ್ರೆಸ್ ಧರಿಸಿ ಹೊರಗೆ ಹೊರಟಿದ್ದಳು. ಈ ವೇಳೆ ಜೀವನ್ ನಾನೇ ಡ್ರಾಪ್ ಮಾಡುತ್ತೇನೆ ಎಂದು ನಿರ್ಜನ ಪ್ರದೇಶಕ್ಕೆ ಕರೆದೊಯ್ದ ಜೀವನ್ ಚಾಕುವಿನಿಂದ ಕತ್ತು ಸೀಳಿ ಬರ್ಬರವಾಗಿ ಕೊಲೆ ಮಾಡಿದ್ದಾನೆ. ಬಳಿಕ ಆತ ಎಸ್ಕೇಪ್ ಆಗಿದ್ದಾನೆ. ಇನ್ನೂ ಈ ಸಂಬಂಧ ಗ್ರಾಮಾಂತರ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ನಡೆದಿದ್ದು, ಪೊಲೀಸರು ಮುಂದಿನ ಕ್ರಮ ತೆಗೆದುಕೊಂಡಿದ್ದಾರೆ.

Most Popular

To Top