ಬನ್ನಿ ಕಾಲಿಗೆ ಗಾಯ, ಕೈಗೆ ಬ್ಯಾಂಡೇಜ್ ಹಾಕಿಕೊಂಡಿರುವ ಪೊಟೋಸ್ ವೈರಲ್…..!

ಟಾಲಿವುಡ್ ಐಕಾನ್ ಸ್ಟಾರ್‍ ಅಲ್ಲು ಅರ್ಜುನ್ ಪುಷ್ಪಾ ಸಿನೆಮಾದ ಬಳಿಕ ಪ್ಯಾನ್ ಇಂಡಿಯಾ ಸ್ಟಾರ್‍ ಆದರು. ಕೇವಲ ತೆಲುಗು ಸಿನಿರಂಗದಲ್ಲಿ ಮಾತ್ರವಲ್ಲದೇ ದೇಶ ವಿದೇಶದಲ್ಲೂ ಅಲ್ಲು ಅರ್ಜುನ್ ರವರಿಗೆ ಅಭಿಮಾನಿ ಬಳಗ ಹುಟ್ಟಿಕೊಂಡಿತ್ತು. ಇನ್ಸ್ಟಾಗ್ರಾಂ…

ಟಾಲಿವುಡ್ ಐಕಾನ್ ಸ್ಟಾರ್‍ ಅಲ್ಲು ಅರ್ಜುನ್ ಪುಷ್ಪಾ ಸಿನೆಮಾದ ಬಳಿಕ ಪ್ಯಾನ್ ಇಂಡಿಯಾ ಸ್ಟಾರ್‍ ಆದರು. ಕೇವಲ ತೆಲುಗು ಸಿನಿರಂಗದಲ್ಲಿ ಮಾತ್ರವಲ್ಲದೇ ದೇಶ ವಿದೇಶದಲ್ಲೂ ಅಲ್ಲು ಅರ್ಜುನ್ ರವರಿಗೆ ಅಭಿಮಾನಿ ಬಳಗ ಹುಟ್ಟಿಕೊಂಡಿತ್ತು. ಇನ್ಸ್ಟಾಗ್ರಾಂ ಸಹ ಅಲ್ಲು ಅರ್ಜುನ್ ಬಗ್ಗೆ ಸ್ಪೇಷಲ್ ವಿಡಿಯೋ ಸಹ ಮಾಡಿತ್ತು. ಈ ಗೌರವ ದೊರೆತ ಮೊದಲ ಇಂಡಿಯನ್ ಹಿರೋ ಆಗಿ ಅಲ್ಲು ಅರ್ಜುನ್ ಖ್ಯಾತಿ ಪಡೆದುಕೊಂಡರು. ಸದ್ಯ ಅಲ್ಲು ಅರ್ಜುನ್ ಪುಷ್ಪಾ-2 ಸಿನೆಮಾದ ಶೂಟಿಂಗ್ ನಲ್ಲಿ ಬ್ಯುಸಿಯಾಗಿದ್ದಾರೆ. ಈ ಸಿನೆಮಾಗಾಗಿ ಬನ್ನಿ ಫ್ಯಾನ್ಸ್ ಸೇರಿದಂತೆ ಅನೇಕರು ತುಂಬಾನೆ ಕಾತುರದಿಂದ ಕಾಯುತ್ತಿದ್ದಾರೆ ಎನ್ನಬಹುದಾಗಿದೆ.

ಐಕಾನ್ ಸ್ಟಾರ್‍ ಅಲ್ಲು ಅರ್ಜುನ್ ಸದ್ಯ ಪುಷ್ಪಾ-2 ಸಿನೆಮಾದ ಶೂಟಿಂಗ್ ನಲ್ಲಿ ಪುಲ್ ಬ್ಯುಸಿಯಾಗಿದ್ದಾರೆ. ಪುಷ್ಪಾ ಸಿನೆಮಾದ ಬಳಿಕ ಅಲ್ಲು ಅರ್ಜುನ್ ತೆಲುಗು ಮಾತ್ರವಲ್ಲೇ ರಾಜ್ಯ, ರಾಷ್ಟ್ರೀಯ ಅಂತರಾಷ್ಟ್ರೀಯ ಮಟ್ಟದಲ್ಲೂ ಕ್ರೇಜ್ ಪಡೆದುಕೊಂಡರು. ಇದೀಗ ಕೋಟ್ಯಂತರ ಮಂದಿ ಪುಷ್ಪಾ-2 ಸಿನೆಮಾಗಾಗಿ ಕಾತುರದಿಂದ ಕಾಯುತ್ತಿದ್ದಾರೆ. ಚಿತ್ರತಂಡ ಸಹ ಸಿನೆಮಾವನ್ನು ಶೀಘ್ರವಾಗಿ ತೆರೆ ಮೇಲೆ ತರಲು ನಿರಂತರ ಶೂಟಿಂಗ್ ಸಹ ಮಾಡುತ್ತಿದ್ದಾರೆ. ಪುಷ್ಪಾ ಸಿನೆಮಾಗಿಂತಲೂ ಪುಷ್ಪಾ-2 ನಲ್ಲಿ ವಿಭಿನ್ನ ಪ್ರಯತ್ನಗಳನ್ನು ಸಹ ಮಾಡುತ್ತಿದ್ದಾರೆ ಎನ್ನಲಾಗಿದೆ. ಈ ಸಿನೆಮಾಗಾಗಿ ಅಲ್ಲು ಅರ್ಜುನ್ ಸಹ ತುಂಬಾನೆ ರಿಸ್ಕ್ ತೆಗೆದುಕೊಳ್ಳುತ್ತಿದ್ದಾರೆ ಎನ್ನಲಾಗಿದೆ. ಇದೀಗ ಶೂಟಿಂಗ್ ನಲ್ಲಿ ಅಲ್ಲು ಅರ್ಜುನ್ ರವರಿಗೆ ಸಂಬಂಧಿಸಿದಂತೆ ಸುದ್ದಿಯೊಂದು ವೈರಲ್ ಆಗುತ್ತಿದೆ.

ಶೂಟೀಂಗ್ ನಲ್ಲಿ ಅಲ್ಲು ಅರ್ಜುನ್ ಗಾಯಗೊಂಡಿದ್ದಾರಂತೆ, ಅಲ್ಲು ಅರ್ಜುನ್ ಕೈಗೆ ಬ್ಯಾಂಡೇಜ್ ಕಟ್ಟಿಕೊಂಡ ಒಂದು ಪೊಟೋ ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿದ್ದು, ಇದರಿಂದ ಅವರ ಗಾಯಕ್ಕೆ ಏನಾಗಿದೆ ಎಂದು ಅಭಿಮಾನಿಗಳು ಆತಂಕ ವ್ಯಕ್ತಪಡಿಸುತ್ತಿದ್ದಾರೆ. ಅಲ್ಲು ಅರ್ಜುನ್ ರವರಿಗೆ ನಿಜವಾಗಿ ಗಾಯಗಳಾಗಿದೆ ಎಂದು ಸಿನಿವಲಯದ ಮಾಹಿತಿಯಾಗಿದೆ. ಪುಷ್ಪಾ-2 ಸಿನೆಮಾಗಾಗಿ ಭಾರಿ ಆಕ್ಷನ್ ದೃಶ್ಯಗಳನ್ನು ಸಹ ಚಿತ್ರೀಕರಿಸುತ್ತಿದ್ದು, ಈ ಕಾರಣದಿಂದ ಕೈಗೆ ಗಾಯ ಆಗಿರಬಹುದು ಎಂದು ಹೇಳಲಾಗಿದೆ. ಈ ಕಾರಣದಿಂದ ಸಿನೆಮಾಗೆ ಕೊಂಚ ಬ್ರೇಕ್ ಕೊಟ್ಟಿದ್ದಾರೆ ಎಂದೂ ಸಹ ಹೇಳಲಾಗುತ್ತಿದೆ. ವೈದ್ಯರು ಸಹ ಅಲ್ಲುಅರ್ಜುನ್ ರವರಿಗೆ ಎರಡು ದಿನಗಳ ಕಾಲ ವಿಶ್ರಾಂತಿ ಪಡೆಯಲು ಸೂಚನೆ ನೀಡಿದ್ದಾರಂತೆ. ಆದರೆ ಬನ್ನಿ ಬಿಡುವಿನ ಸಮಯದಲ್ಲಿ ಸಿನೆಮಾಗೆ ಸಂಬಂಧಿಸಿದ ಕೆಲಸಗಳನ್ನು ಮಾಡುತ್ತಿದ್ದಾರೆ.