ಅವರಿಗೂ ಸಹ ಭಾರತರತ್ನ ನೀಡಬೇಕಾಗಿತ್ತು ಎಂದ ನಟಿ ವಿಜಯಶಾಂತಿ, ವೈರಲ್ ಆದ ಕಾಮೆಂಟ್ಸ್,…….!

Follow Us :

ಕೇಂದ್ರ ಸರ್ಕಾರ ಕೆಲವು ದಿನಗಳ ಹಿಂದೆಯಷ್ಟೆ ಹಲವು ಸಾಧಕರಿಗೆ ಭಾರತರತ್ನ ನೀಡಿ ಗೌರವಿಸಿದೆ. ಕೇಂದ್ರ ಸರ್ಕಾರ ಘೋಷಣೆ ಮಾಡಿದ ಭಾರತರತ್ನ ಪುರಸ್ಕಾರಕ್ಕೆ ಸಂಬಂಧಿಸಿದಂತೆ ಆಡಳಿತ ಪಕ್ಷ ಹಾಗೂ ವಿರೋಧ ಪಕ್ಷಗಳ ನಡುವೆ ಚರ್ಚೆಗಳೂ ಸಹ ನಡೆದಿತ್ತು. ಕೆಲವರು ಈ ಬಗ್ಗೆ ಸ್ವಾಗತಿಸಿದರೇ ಮತ್ತೆ ಕೆಲವರು ವಿರೋಧಿಸಿದ್ದರು. ಇದೀಗ ಭಾರತರತ್ನ ಪುರಸ್ಕಾರದ ಬಗ್ಗೆ ಮಾಜಿ ಕಾಂಗ್ರೇಸ್ ನಾಯಕಿ ಹಾಗೂ ನಟಿ ವಿಜಯಶಾಂತಿ ಕಾಮೆಂಟ್ ಮಾಡಿದ್ದು, ಅವರಿಗೂ ಸಹ ಭಾರತರ್‍ನ ಕೊಡಬೇಕಿತ್ತು ಎಂದು ಹೇಳಿದ್ದಾರೆ. ಆಕೆಯ ಕಾಮೆಂಟ್ಸ್ ಇದೀಗ ವೈರಲ್ ಆಗುತ್ತಿವೆ.

ಮಾಜಿ ಪ್ರಧಾನಿ ಪಿ.ವಿ.ನರಸಿಂಹರಾವ್ ರವರಿಗೆ ಕೇಂದ್ರ ಸರ್ಕಾರ ಭಾರತರತ್ನ ಪುರಸ್ಕಾರ ನೀಡಿದೆ. ಈ ಬಗ್ಗೆ ತೆಲುಗು ರಾಷ್ಟ್ರಗಳಲ್ಲಿ ಸಂತಸ ಮನೆ ಮಾಡಿದ್ದು, ಅನೇಕರು ಸಂತಸ ವ್ಯಕ್ತಪಡಿಸುತ್ತಿದ್ದಾರೆ. ತಡವಾದರೂ ಸಹ ಸರಿಯಾದ ವ್ಯಕ್ತಿಗೆ ಸಮುಚಿತ ಗೌರವ ದೊರೆತಿದೆ ಎಂದು ಸಿನಿ, ರಾಜಕೀಯ ವರ್ಗಗಳಿಂದ ಕಾಮೆಂಟ್ ಗಳು ಬಂದಿದೆ. ಈ ವಿಚಾರಕ್ಕೆ ಸಂಬಂಧಿಸಿದಂತೆ ಸೀನಿಯರ್‍ ನಟಿ ಕಂ ರಾಜಕಾರಣಿ ವಿಜಯ ಶಾಂತಿ ರವರೂ ಸಹ ಇಂಟ್ರಸ್ಟಿಂಗ್ ಕಾಮೆಂಟ್ಸ್ ಮಾಡಿದ್ದಾರೆ. ಪಿ.ವಿ.ನರಸಿಂಹರಾವ್ ರವರಿಗೆ ಭಾರತ ರತ್ನ ನೀಡಿದ್ದು ಸಂತೋಷವಾಗಿದೆ ಎಂದು ಹೇಳುತ್ತಾ ಪದ್ಮಶ್ರೀ ಎನ್.ಟಿ.ಆರ್‍ ರವರಿಗೂ ಸಹ ಭಾರತರತ್ನ ನೀಡಬೇಕಿತ್ತು ಎಂದು ಹೇಳಿದ್ದಾರೆ.

ಈ ಕುರಿತು ಆಕೆ ಸೋಷಿಯಲ್ ಮಿಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ. ಆಕೆ ಹಂಚಿಕೊಂಡ ಪೋಸ್ಟ್ ನಲ್ಲಿ ಭಾರತರತ್ನ ಅವಾರ್ಡ್ ವಿಚಾರದಲ್ಲಿ ರಾಜಕೀಯ ಪ್ರಮೇಯ ಇಲ್ಲದೇ ಇರಬಹುದು. ಆದರೆ ತೆಲುಗಿನವರ ಗೌರವ ಪ್ರತೀಕ ಪಿ.ವಿ.ನರಸಿಂಹರಾವು ರವರಿಗೆ ದೊರೆತ ಭಾರತರತ್ನ , ನಮ್ಮ ಆತ್ಮಗೌರವಕ್ಕೆ ಸಂಕೇತವಾದ ಪದ್ಮಶ್ರೀ ಎನ್.ಟಿ.ಆರ್‍ ರವರಿಗೂ ಸಹ ನೀಡಿದ್ದರೇ ಇಡೀ ತೆಲುಗು ರಾಷ್ಟ್ರಗಳ ಜನರು ಮತಷ್ಟು ಸಂತಸ ವ್ಯಕ್ತಪಡಿಸುತ್ತಿದ್ದರು. ಈ ವಿಚಾರವನ್ನು ರಾಷ್ಟ್ರೀಯ ಮಟ್ಟಕ್ಕೆ ತೆಗೆದುಕೊಂಡು ಹೋಗುವ ಅವಕಾಶ ಕಾಣಿಸುತ್ತಿದೆ. ಈ ಜವಾಬ್ದಾರಿಯನ್ನು ಹೋರುತ್ತಾ, ಎಲ್ಲರ ಸಂಕಲ್ಪ ಸಾಕ್ಷಾತ್ಕಾರ ಆಗುವ ಪ್ರಯತ್ನ ನಡೆಯುತ್ತದೆ ಎಂದು ನಂಬುತ್ತಿದ್ದೇನೆ. ಎಲ್ಲಾ ರಾಜಕೀಯ ಪಕ್ಷಗಳು ಈ ಕುರಿತು ಕ್ರಮ ವಹಿಸಬೇಕೆಂದು ಪೋಸ್ಟ್ ಮಾಡಿದ್ದಾರೆ. ಈ ಪೋಸ್ಟ್ ಜೊತೆಗೆ ದಿವಂಗತ ಎನ್.ಟಿ.ಆರ್‍ ರವರ ಕೈಯಾರೆ ವಿಜಯಶಾಂತಿ ನಂದಿ ಅವಾರ್ಡ್ ಸ್ವೀಕಾರ ಮಾಡುತ್ತಿರುವ ಪೊಟೋ ಸಹ ಹಂಚಿಕೊಂಡಿದ್ದಾರೆ. ಇದೀಗ ಈ ಪೋಸ್ಟ್ ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ.