ಪುಷ್ಪಾ-2 ಸಿನೆಮಾಗಾಗಿ ಹೆವಿ ವರ್ಕೌಟ್ ಮಾಡಿದ ಬನ್ನಿ, ವೈರಲ್ ಆದ ವರ್ಕೌಟ್ ವಿಡಿಯೋ…..!

Follow Us :

ಐಕಾನ್ ಸ್ಟಾರ್‍ ಅಲ್ಲು ಅರ್ಜುನ್ ರವರ ಕೆರಿಯರ್‍ ನಲ್ಲಿ ಭಾರಿ ಸಕ್ಸಸ್ ತಂದು ಕೊಟ್ಟ ಸಿನೆಮಾ ಪುಷ್ಪಾದ ಬಳಿಕ ಬನ್ನಿ ಪ್ಯಾನ್ ಇಂಡಿಯಾ ಸ್ಟಾರ್‍ ಆದರು. ಪುಷ್ಪಾ ಸಿನೆಮಾ ದೇಶದಲ್ಲಿ ಭಾರಿ ಸಂಚಲನ ಸೃಷ್ಟಿ ಮಾಡಿದೆ. ಈ ಸಿನೆಮಾದ ಹಾಡುಗಳು, ಡೈಲಾಗ್ ಗಳು ಇಂದಿಗೂ ಸಹ ಹರಿದಾಡುತ್ತಲೇ ಇರುತ್ತದೆ. ಸದ್ಯ ಎಲ್ಲರ ಗಮನ ಪುಷ್ಪಾ-2 ಸಿನೆಮಾ ಮೇಲಿದೆ. ಈ ಸಿನೆಮಾಗಾಗಿ ಪುಷ್ಪಾ ಅಭಿಮಾನಿಗಳು ಈಗರ್‍ ಆಗಿ ಕಾಯುತ್ತಿದ್ದಾರೆ.  ಇನ್ನೂ ಸಿನೆಮಾದ ಶೂಟಿಂಗ್ ಸಹ ಭರದಿಂದ ಸಾಗುತ್ತಿದೆ. ಇನ್ನೂ ಸಿನೆಮಾ ತಂಡ ಸಹ ಸಿನೆಮಾದ ಮೇಲೆ ಭಾರಿ ಹೈಪ್ ಕ್ರಿಯೇಟ್ ಮಾಡುತ್ತಿದ್ದಾರೆ. ಇದೀಗ ಬನ್ನಿ ವರ್ಕೌಟ್ ಮಾಡುತ್ತಿರುವ ವಿಡಿಯೋ ಒಂದು ಸಖತ್ ವೈರಲ್ ಆಗುತ್ತಿದೆ.

ತೆಲುಗು ಸ್ಟಾರ್‍ ನಟ ಅಲ್ಲು ಅರ್ಜುನ್ ಹಾಗೂ ಸುಕುಮಾರ್‍ ಕಾಂಬಿನೇಷನ್ ನಲ್ಲಿ ತೆರೆಗೆ ಬಂದ ಪುಷ್ಪಾ ಸಿನೆಮಾ ಭಾರಿ ಕ್ರೇಜ್ ಪಡೆದುಕೊಂಡು ಅನೇಕ ರೆಕಾರ್ಡ್‌ಗಳನ್ನು ಬ್ರೇಕ್ ಮಾಡಿದೆ. ಬಾಲಿವುಡ್ ನಲ್ಲೂ ಸಹ ಈ ಸಿನೆಮಾ ನೂರು ಕೋಟಿ ಕಲೆಕ್ಷನ್ ಮಾಡುವ ಮೂಲಕ ಬಾಲಿವುಡ್ ನಲ್ಲೂ ಸಹ ಅಲ್ಲು ಅರ್ಜುನ್ ರವರಿಗೆ ಅಭಿಮಾನಿ ಬಳಗ ಸಹ ಹುಟ್ಟಿಕೊಂಡಿದೆ. ಇನ್ನೂ ಪುಷ್ಪಾ ಸಿನೆಮಾ ಕೇವಲ ಇಂಡಿಯಾದಲ್ಲಿ ಮಾತ್ರವಲ್ಲೇ ಇಡೀ ಪ್ರಪಂಚದಾದ್ಯಂತ ಭಾರಿ ಟ್ರೆಂಡ್ ಕ್ರಿಯೇಟ್ ಮಾಡಿದೆ. ಇನ್ನೂ ಬನ್ನಿ ಹುಟ್ಟುಹಬ್ಬದ ಅಂಗವಾಗಿ ಫಸ್ಟ್ ಲುಕ್ ಪೋಸ್ಟರ್‍, ಟೀಸರ್‍ ಈಗಾಗಲೇ ಇಂಟರ್‍ ನೆಟ್ ಶೇಕ್ ಮಾಡಿದೆ. ಎಲ್ಲಾ ಭಾಷೆಗಳಲ್ಲೂ ಸಹ ಈ ವಿಡಿಯೋಗೆ ಭಾರಿ ಪ್ರತಿಕ್ರಿಯೆ ದೊರೆತಿದೆ. ಈ ಪೋಸ್ಟರ್‍ ಹಾಗೂ ಟೀಸರ್‍ ಬಳಿಕ ಪುಷ್ಪಾ-2 ಸಿನೆಮಾದ ಮೇಲೆ ಮತಷ್ಟು ನಿರೀಕ್ಷೆ ಹುಟ್ಟಿದೆ.

ಇನ್ನೂ ಅಲ್ಲು ಅರ್ಜುನ್ ರವರ ವರ್ಕೌಟ್ ವಿಡಿಯೋ ಒಂದು ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ. ಈ ವಿಡಿಯೋದಲ್ಲಿ ಅಲ್ಲು ಅರ್ಜುನ್ ಜಿಮ್ ನಲ್ಲಿ ಹೆವಿ ವರ್ಕೌಟ್ ಮಾಡುತ್ತಿದ್ದಾರೆ. ಪುಷ್ಪಾ ಪಾತ್ರದ ಅವತಾರದಲ್ಲೇ ಉದ್ದನೆಯ ಕೂದಲಿನೊಂದಿಗೆ ಎಲ್ಲರನ್ನೂ ಆಕರ್ಷಣೆ ಮಾಡಿದ್ದಾರೆ. ಫಿಟ್ ನೆಸ್ ಗಾಗಿ ತುಂಬಾನೆ ಪ್ರಯತ್ನಗಳನ್ನು ಮಾಡುತ್ತಿದ್ದಾರೆ ಎನ್ನಲಾಗುತ್ತಿದೆ. ಇನ್ನೂ ಬನ್ನಿ ವರ್ಕೌಟ್ ವಿಡಿಯೋ ಇದೀಗ ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ. ಇನ್ನೂ ಈ ಸಿನೆಮಾದ ಶೂಟಿಂಗ್ ಸಹ ಭರದಿಂದ ಸಾಗುತ್ತಿದೆ. ಇದೀ ಮತ್ತೊಂದು ಶೆಡ್ಯೂಲ್ ಗಾಗಿ ಪುಷ್ಪರಾಜ್ ಸಿದ್ದವಾಗುತ್ತಿದ್ದಾರೆ.

ಇನ್ನೂ ಈ ಸಿನೆಮಾ ಮೈತ್ರಿ ಮೂವಿ ಮೇಕರ್ಸ್ ಬ್ಯಾನರ್‍ ನಡಿ ನಿರ್ಮಾಣ ಆಗುತ್ತಿದೆ. ಸುಮಾರು 350 ಕೋಟಿಗೂ ಅಧಿಕ ಬಜೆಟ್ ನಲ್ಲಿ ಈ ಸಿನೆಮಾ ತೆರೆಗೆ ಬರಲಿದೆ. ಇನ್ನೂ ಅಲ್ಲು ಅರ್ಜುನ್ ಗೆ ಜೋಡಿಯಾಗಿ ರಶ್ಮಿಕಾ ಮಂದಣ್ಣ ನಟಿಸುತ್ತಿದ್ದಾರೆ. ಇನ್ನೂ ಈ ಸಿನೆಮಾದಲ್ಲಿ ಮತಷ್ಟು ಸ್ಟಾರ್‍ ಕಲಾವಿದರು ನಟಿಸಲಿದ್ದಾರೆ ಎಂದು ಹೇಳಲಾಗುತ್ತಿದೆ. ಇನ್ನೂ ಮುಂದಿನ ವರ್ಷ ಈ ಸಿನೆಮಾ ತೆರೆಗೆ ಬರಲಿದೆ.