News

ಮದುವೆ ದಿನ ವಯಾಗ್ರಾ ಮಾತ್ರೆ ಸೇವಿಸಿದ ಪತಿ, ಆತನ ರಾಕ್ಷಸತನಕ್ಕೆ ಪಾಣಬಿಟ್ಟ ನವ ವಧು…..!

ಉತ್ತರ ಪ್ರದೇಶದ ಹಮೀರ್‍ ಪುರದಲ್ಲಿ ಮದುವೆಯಾದ ಏಳು ದಿನದಲ್ಲೇ ವಧು ಮೃತಪಟ್ಟಿರುವ ಘಟನೆಯೊಂದು ನಡೆದಿದೆ. ಮದುವೆಯಾದ ದಿನವೇ ಆಕೆಯ ಪತಿ ಕಾಮೋತ್ತೇಜಕ ಮಾತ್ರೆ ಸೇವಿಸಿ ಪತ್ನಿ ಜೊತೆ ರಕ್ಕಸನಂತೆ ಸಂಭೋಗ ನಡೆಸಿದ್ದು, ಈ ಕಾರಣದಿಂದ ಆಕೆ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.

ಉತ್ತರಪ್ರದೇಶದ ಹಮೀರ್‍ ಪುರ್‍ ವ್ಯಾಪ್ತಿಯ ಉರೈ ಮೂಲದ ವ್ಯಕ್ತಯೊಂದಿಗೆ ಮೃತ ಯುವತಿಯ ಮದುವೆಯಾಗಿತ್ತು. ಯುವತಿಯ ಪೋಷಕರು ಸಹ ಮೃತಪಟ್ಟಿದ್ದರು ಎನ್ನಲಾಗಿದೆ. ಮೃತ ಯುವತಿಯ ಸಹೋದರ ಮುಂದೆ ನಿಂತು ಅದ್ದೂರಿಯಾಗಿ ವಿವಾಹ ಮಾಡಿಕೊಟ್ಟಿದ್ದರು. ಫೆ.4 ರಂದು ಯುವತಿ ಎಲ್ಲಾ ಶಾಸ್ತ್ರಗಳನ್ನು ಮುಗಿಸಿಕೊಂಡು ಗಂಡನ ಮನೆಗೆ ಬಂದಿದ್ದಳು. ಮದುವೆಯ ಮೊದಲ ರಾತ್ರಿ ಪತಿ ಕಾಮೋತ್ತೇಜಕ ಮಾತ್ರೆಗಳನ್ನು ಸೇವನೆ ಮಾಡಿ, ರಾಕ್ಷಸನಂತೆ ಪತ್ನಿಯೊಂದಿಗೆ ಸಂಬೋಗ ನಡೆಸಿದ್ದಾನೆ. ಇದರಿಂದಾಗಿ ಆಕೆಯ ಖಾಸಗಿ ಅಂಗಕ್ಕೆ ತೀವ್ರವಾದ ಗಾಯವಾಗಿದೆ ಎನ್ನಲಾಗಿದೆ.

ಇನ್ನೂ ಪತ್ನಿ ಕಾನ್ಪುರದಲ್ಲಿ ಸಂಬಂಧಿಕರ ಮದುವೆ ಸಮಾರಂಭವೊಂದಕ್ಕೆ ತೆರಳಿದ್ದರಂತೆ. ಈ ವೇಳೆ ಆಕೆಯ ಆರೋಗ್ಯದಲ್ಲಿ ಏರುಪೇರಾಗಿದೆ. ಕೂಡಲೇ ಆಕೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಪತಿ ಲೈಂಗಿಕ ಉತ್ತೇಜನ ಮಾತ್ರೆ ಸೇವಿಸಿ ಸಂಭೋಗ ನಡೆಸಿದ ಪರಿಣಾಮ ಮಹಿಳೆಯ ಖಾಸಗಿ ಅಂಗದಲ್ಲಿ ಗಾಯಗಳಾಗಿದೆ. ಇದರಿಂದ ಸೊಂಕು ತಗುಲಿದೆ ಎನ್ನಲಾಗಿದೆ. ಫೆ.10 ರಂದು ಮಹಿಳೆ ಮೃತಪ್ಟಿದ್ದಾಗಿ ತಿಳಿದುಬಂದಿದೆ. ಮಹಿಳೆಯ ಸ್ಥಿತಿ ತುಂಬಾ ಹದೆಗೆಟ್ಟ ಕಾರಣ ಆಕೆಯನ್ನು ಸ್ತ್ರೀರೋಗ ತಜ್ಞರ ಬಳಿಗೆ ಕರೆದೊಯ್ಯಲಾಗಿದ್ದು, ಈ ವೇಳೆ ಆಕೆಯನ್ನು ಸಾಮೂಹಿಕ ಅತ್ಯಾಚಾರಕ್ಕೆ ಒಳಗಾಗುವಷ್ಟು ದೌರ್ಜನಕ್ಕೆ ತುತ್ತಾಗಿದ್ದಾಳೆ ಎಂದು ಆಕೆಯನ್ನು ಪರೀಕ್ಷೆ ಮಾಡಿದ ವೈದ್ಯರು ತಿಳಿಸಿದ್ದಾರೆ ಎನ್ನಲಾಗಿದೆ. ಪತಿಯ ವಿರುದ್ದ ಕಾನೂನು ರೀತ್ಯ ಕ್ರಮ ತೆಗೆದುಕೊಳ್ಳುವಂತೆ ಮೃತಳ ಸಹೋದರ ದೂರು ದಾಖಲಿಸಿದ್ದಾರೆ. ಈ ಸುದ್ದಿ ತಿಳಿಯುತ್ತಿದ್ದಂತೆ ಪತಿ ಹಾಗೂ ಆತನ ಕುಟುಂಬಸ್ಥರು ಪರಾರಿಯಾಗಿದ್ದಾರೆ ಎನ್ನಲಾಗಿದೆ.

Most Popular

To Top