News

ಪ್ರಧಾನಿ ಮೋದಿ ಕಟೌಟ್ ಮುಂದೆ ಅಸಭ್ಯವಾಗಿ ನೃತ್ಯ ಮಾಡಿದ ಮಹಿಳೆ, ವೈರಲ್ ಆದ ವಿಡಿಯೋ…..!

ಇತ್ತೀಚಿಗೆ ಪ್ರತಿಯೊಬ್ಬರೂ ಸೋಷಿಯಲ್ ಮಿಡಿಯಾ ಬಳಸುವುದು ತುಂಬಾನೆ ಹೆಚ್ಚಾಗಿದೆ. ಸೋಷಿಯಲ್ ಮಿಡಿಯಾ ಫೇಮಸ್ ಆಗುವ ನಿಟ್ಟಿನಲ್ಲಿ ವಿವಿಧ ರೀತಿಯ ರೀಲ್ಸ್ ಮಾಡುತ್ತಿರುತ್ತಾರೆ. ಅದರಲ್ಲೂ ಕೆಲವರಂತೂ ಅಸಭ್ಯವಾಗಿ ವರ್ತನೆ ಮಾಡುತ್ತಾರೆ. ಇದೀಗ ಮಹಿಳೆಯೊಬ್ಬರು ಭಾರತದ ಪ್ರಧಾನಿ ನರೇಂದ್ರ ಮೋದಿಯವರ ಕಟೌಟ್ ಮುಂದೆ ಅಸಭ್ಯವಾಗಿ ನೃತ್ಯ ಮಾಡಿದ್ದು, ಈ ವಿಡಿಯೋ ಸೋಷಿಯಲ್ ಮಿಡಿಯಾದಲ್ಲಿ ತುಂಬಾನೆ ವೈರಲ್ ಆಗುತ್ತಿದೆ. ಜೊತೆಗೆ ಅನೇಕರು ಆಕೆಯ ವಿರುದ್ದ ಆಕ್ರೋಷ ಹೊರಹಾಕುತ್ತಿದ್ದಾರೆ.

ಅನೇಕರು ಇತ್ತೀಚಿಗೆ ಸೋಷಿಯಲ್ ಮಿಡಿಯಾದಲ್ಲಿ ರೀಲ್ಸ್ ಮಾಡುತ್ತಾ ಸುದ್ದಿಯಾಗುತ್ತಿರುತ್ತಾರೆ. ಕೆಲವರಂತೂ ತುಂಬಾನೆ ಅಸಭ್ಯಕರವಾಗಿಯೇ ನೃತ್ಯಗಳನ್ನು ಮಾಡಿ ಫೇಮಸ್ ಆಗಲು ಯತ್ನಿಸುತ್ತಿರುತ್ತಾರೆ. ಇದೀಗ ಯುವತಿಯೊಬ್ಬಳು ರೀಲ್ಸ್ ಮಾಡಿ ಸುದ್ದಿಯಾಗಿದ್ದಾರೆ. ಕೇಂದ್ರ ಸರ್ಕಾರ ತನ್ನ ಯೋಜನೆಗಳ ಕುರಿತಾಗಿ ದೇಶದ ಅನೇಕ ಕಡೆ ಕಟೌಟ್ ಗಳನ್ನು ಹಾಕಿದ್ದಾರೆ. ರೈಲ್ವೆ ನಿಲ್ದಾಣಗಳು, ಪಡಿತರ ಅಂಗಡಿಗಳು ಸೇರಿದಂತೆ ವಿವಿಧ ಸ್ಥಳಗಳಲ್ಲಿ ಕೇಂದ್ರ ಸರ್ಕಾರ ಪ್ರಧಾನಿ ಮೋದಿಯವರ ಚಿತ್ರಗಳೊಂದಿಗೆ ಸೆಲ್ಫಿ ಪಾಯಿಂಟ್ ಗಳನ್ನು ಹಾಕಿದ್ದಾರೆ. ಅನೇಕರು ಈ ಕಟೌಟ್ ಮುಂದೆ ನಿಂತು ಸೆಲ್ಫಿ ತೆಗೆದುಕೊಳ್ಳುತ್ತಾರೆ. ಆದರೆ ಮಹಿಳೆಯೊಬ್ಬರು ಪ್ರಧಾನಿ ಮೋದಿಯವರ ಕಟೌಟ್ ಮುಂದೆ ನಿಂತು ಅಸಭ್ಯವಾಗಿ ರೀಲ್ಸ್ ಮಾಡಿದ್ದಾರೆ.

ಮಹಿಳೆಯೊಬ್ಬರು ಖಳ್ನಾಯಕ್ ಸಿನೆಮಾದ ಆಜಾ ಸಜನ್ ಆಜಾ ಎಂಬ ಹಾಡಿಗೆ ರೀಲ್ಸ್ ಮಾಡಿದ್ದಾರೆ. ಮೋದಿಯವರ ಕಟೌಟ್ ಮುಂದೆ ನಿಂತು ಸೊಂಟ ಬಳುಕಿಸಿ ಅಸಭ್ಯ ರೀತಿಯಲ್ಲಿ ಸ್ಟೆಪ್ಸ್ ಹಾಕಿದ್ದಾರೆ. ಹಾಡಿನ ಕೊನೆಯಲ್ಲಿ ಕಟೌಟ್ ಗೆ ಅಪ್ಪಿಕೊಂಡಿದ್ದಾರೆ. ಈ ವಿಡಿಯೋ ಇದೀಗ ಸೋಷಿಯಲ್ ಮಿಡಿಯಾದಲ್ಲಿ ಭಾರಿ ವೈರಲ್ ಆಗುತ್ತಿದೆ. ಜೊತೆಗೆ ಅನೇಕರು ಆಕ್ರೋಷ ಸಹ ಹೊರಹಾಕುತ್ತಿದ್ದಾರೆ. ದೇಶದ ಪ್ರಧಾನಿಗೆ ಗೌರವ ನೀಡಬೇಕು. ಆದರೆ ಆ ಮಹಿಳೆ ಈ ರೀತಿಯಾಗಿ ನಡೆದುಕೊಂಡಿದ್ದು ಸರಿಯಲ್ಲ ಎಂದು ಅನೇಕರು ಆಕ್ರೋಷ ಹೊರಹಾಕುತ್ತಿದ್ದಾರೆ.

Most Popular

To Top