ಅಭಿಮಾನಿಯ ಆಟೋ ಚಲಾಯಿಸಿದ ಡ್ರೋನ್ ಪ್ರತಾಪ್, ವೈರಲ್ ಆದ ಪೊಟೋಸ್, ಆಟೋ ಸಖತ್ ಆಗಿ ಓಡಿಸುತ್ತೀಯಾ ಎಂದ ನೆಟ್ಟಿಗರು…….!

ಅನೇಕ ವಿವಾದಗಳ ಮೂಲಕ ಫೇಂ ಪಡೆದುಕೊಂಡ ಡ್ರೋನ್ ಪ್ರತಾಪ್ ಬಿಗ್ ಬಾಸ್ ಕನ್ನಡ ಸೀಸನ್ 10 ರಲ್ಲಿ ಭಾಗಿಯಾಗಿ ರನ್ನರ್‍ ಅಪ್ ಆಗಿದ್ದಾರೆ. ಇದೀಗ ಪ್ರತಾಪ್ ಕ್ರೇಜ್ ದುಪ್ಪಟ್ಟಾಗಿದೆ. ಪ್ರತಾಪ್ ಎಲ್ಲಿ ಕಾಣಿಸಿಕೊಂಡರೂ ಸಹ…

ಅನೇಕ ವಿವಾದಗಳ ಮೂಲಕ ಫೇಂ ಪಡೆದುಕೊಂಡ ಡ್ರೋನ್ ಪ್ರತಾಪ್ ಬಿಗ್ ಬಾಸ್ ಕನ್ನಡ ಸೀಸನ್ 10 ರಲ್ಲಿ ಭಾಗಿಯಾಗಿ ರನ್ನರ್‍ ಅಪ್ ಆಗಿದ್ದಾರೆ. ಇದೀಗ ಪ್ರತಾಪ್ ಕ್ರೇಜ್ ದುಪ್ಪಟ್ಟಾಗಿದೆ. ಪ್ರತಾಪ್ ಎಲ್ಲಿ ಕಾಣಿಸಿಕೊಂಡರೂ ಸಹ ಅಭಿಮಾನಿಗಳು ಮುಗಿಬೀಳುತ್ತಿದ್ದಾರೆ. ಈ ಹಿಂದೆ ವಂಚಕ, ಮೋಸಗಾರ ಎಂದು ಹೇಳಲಾಗುತ್ತಿದ್ದ ಪ್ರತಾಪ್, ಬಿಗ್ ಬಾಸ್ ಮನೆಯಲ್ಲಿ ಅಮಾಯಕ ಎಂದೇ ಫೇಮಸ್ ಆದರು. ಇದೀಗ ಆತ ಆಟೋ ಓಡಿಸುತ್ತಿರುವ ಪೊಟೋಗಳು ವೈರಲ್ ಆಗುತ್ತಿದೆ.

ಇನ್ನೂ ಡ್ರೋನ್ ಪ್ರತಾಪ್ ಬಿಗ್ ಬಾಸ್ ಮೂಲಕ ತುಂಬಾನೆ ಫೇಮಸ್ ಆಗಿದ್ದಾರೆ. ಈ ಶೋಗೆ ಹೋಗುವುದಕ್ಕೂ ಮುನ್ನಾ ನಾನು ಎರಡು ವಾರ ಮಾತ್ರ ಶೋ ನಲ್ಲಿರುತ್ತೇನೆ. ಬಳಿಕ ನನ್ನನ್ನು ಕಳುಹಿಸಿಬಿಡಿ ಎಂದು ಕೇಳಿಕೊಂಡಿದ್ದರಂತೆ. ಆದರೆ ಪ್ರತಾಪ್ ರನ್ನರ್‍ ಅಪ್ ಆಗಿರುವುದು ಅಚ್ಚರಿಯಾಗಿದೆ ಎಂದು ಅವರೇ ಹೇಳಿಕೊಂಡಿದ್ದಾರೆ ಎನ್ನಲಾಗಿದೆ. ಸೋಷಿಯಲ್ ಮಿಡಿಯಾದಲ್ಲಿ ಸಹ ಡ್ರೋನ್ ಪ್ರತಾಪ್ ಹವಾ ಜೋರಾಗಿದೆ. ಬಿಗ್ ಬಾಸ್ ಮನೆಯಿಂದ ಹೊರಬರುತ್ತಿದ್ದಂತೆ ಡ್ರೋನ್ ಪ್ರತಾಪ್ ಅಭಿಮಾನಿಗಳ ಪ್ರೀತಿ ಕಂಡು ಬೆರಗಾಗಿದ್ದಾರೆ. ಇದೀಗ ಆತ ಎಲ್ಲಿ ಹೋದರೂ ಸಹ ಅಭಿಮಾನಿಗಳು ಆತನೊಂದಿಗೆ ಸೆಲ್ಫಿಗಾಗಿ ಮುಗಿಬೀಳುತ್ತಿರುತ್ತಾರೆ.

ಬಿಗ್ ಬಾಸ್ ಮನೆಯಲ್ಲಿ ಅನೇಕ ವಿವಾದಗಳ ಮೂಲಕ ಡ್ರೋನ್ ಸುದ್ದಿಯಾಗುತ್ತಿದ್ದರು. ಆತನ ವಿರುದ್ದ ಕೆಲವೊಂದು ಆರೋಪಗಳೂ ಸಹ ಕೇಳಿಬಂದಿತ್ತು. ಸದ್ಯ ಡ್ರೋನ್ ಪ್ರತಾಪ್ ತಂದೆ ತಾಯಿಯವರ ಜೊತೆ ಇದ್ದಾರೆ. ಸುಮಾರು ನಾಲ್ಕು ವರ್ಷಗಳಿಂದ ಡ್ರೊನ್ ಪ್ರತಾಪ್ ತಂದೆ-ತಾಯಿಯಿಂದ ದೂರವಿದ್ದರು. ಸದ್ಯ ಮನೆಯವರ ಜೊತೆಗೆ ಸಂತೋಷದಿಂದ ಜೀವನ ಸಾಗಿಸುತ್ತಿದ್ದಾರೆ. ಇನ್ನೂ ಡ್ರೋನ್ ಪ್ರತಾಪ್ ರನ್ನು ಭೇಟಿಯಾಗಲು ಅಭಿಮಾನಿಯೊಬ್ಬರು ಪ್ರತಾಪ್ ಮನೆಗೆ ಹೋಗಿದ್ದರು. ಅಭಿಮಾನಿಯ ಆಟೋ ವನ್ನು ಏರಿದ ಪ್ರತಾಪ್ ಆಟೋ ಓಡಿಸಿದ್ದಾರೆ. ಆಟೋದಲ್ಲಿ ಶಂಕರ್‍ ನಾಗ್ ರವರಿಗೆ ಜೈ ಎಂದಿದ್ದಾರೆ. ಆಟೋದಲ್ಲಿ ಒಂದು ರೌಂಡ್ ಹೊಡೆದು ಬಂದಿದ್ದಾರೆ. ಇನ್ನೂ ಆಟೋ ಓಡಿಸಿಕೊಂಡು ಜೀವನ ಸಾಗಿಸುತ್ತಿರುವ ಎಲ್ಲಾ ಆಟೋ ಚಾಲಕರಿಗೂ ಶುಭ ಹಾರೈಸಿದ್ದಾರೆ. ಈ ಪೊಟೋ ಹಾಗೂ ವಿಡಿಯೋ ಗಳು ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿದ್ದು, ಅಭಿಮಾನಿಗಳು ಹಾಗೂ ನೆಟ್ಟಿಗರು ಆಟೋ ಚೆನ್ನಾಗೇ ಓಡಿಸುತ್ತಿದ್ದಿರಾ ಎಂದು ಕಾಮೆಂಟ್ ಮಾಡುತ್ತಿದ್ದಾರೆ.