Film News

ಬೆಡ್ ರೂಂನ ರೊಮ್ಯಾಂಟಿಕ್ ಪೊಟೋಗಳನ್ನು ಹಂಚಿಕೊಂಡ ಬಿಗ್ ಬಾಸ್ ಬ್ಯೂಟಿ ಅಂಕಿತಾ, ವೈರಲ್ ಆದ ಪೊಟೋಸ್….!

ಬಾಲಿವುಡ್ ಬ್ಯೂಟಿ ಅಂಕಿತಾ ಲೋಖಂಡೆ ಹಿಂದಿ ಬಿಗ್ ಬಾಸ್ ಶೋ ಮೂಲಕ ಭಾರಿ ಫೇಂ ಪಡೆದುಕೊಂಡರು. ಹಿಂದಿ ಬಿಗ್ ಬಾಸ್ ಮನೆಯಲ್ಲಿ ಸ್ಪರ್ಧಿಯಾಗಿ ಹೋಗಿದ್ದ ಅಂಕಿತಾ ಹಾಗೂ ಆಕೆಯ ಪತಿ ವಿಕ್ಕಿ ಜೈನ್ ಗೆ ಅಪಾರ ಸಂಖ್ಯೆಯ ಅಭಿಮಾನಿಗಳಿದ್ದಾರೆ. ಈ ಜೋಡಿಯ ಮದುವೆಯಾಗಿ ಆರು ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಅಂಕಿತಾ ದಂಪತಿ ಇದೀಗ ಬೆಡ್ ರೂಂನಲ್ಲಿನ ರೊಮ್ಯಾಂಟಿಕ್ ಪೊಟೋಗಳನ್ನು ಹಂಚಿಕೊಂಡಿದ್ದು, ಈ ಪೊಟೋಗಳು ಸೋಷಿಯಲ್ ಮಿಡಿಯಾದಲ್ಲಿ ಭಾರಿ ಸದ್ದು ಮಾಡುತ್ತಿವೆ. ವಿವಿಧ ರೀತಿಯ ಕಾಮೆಂಟ್ ಗಳು ಹರಿದುಬರುತ್ತಿವೆ.

ಹಿಂದಿ ಬಿಗ್ ಬಾಸ್ 17 ರಲ್ಲಿ ಸ್ಪರ್ಧಿಗಳಾಗಿದ್ದ ವಿಕ್ಕಿ ಹಾಗೂ ಅಂಕಿತಾ ಭಾರಿ ಸುದ್ದಿ ಮಾಡಿದ್ದರು ಸದಾ ಇಬ್ಬರೂ ಜಗಳ ಮಾಡುತ್ತಾ ಕೆಲವೊಮ್ಮೆ ಅತಿರೇಕಕ್ಕೆ ಹೋಗಿದ್ದೂ ಸಹ ಇದೆ. ಇದರಿಂದ ಅವರ ಮದುವೆ ಮುರಿದು ಬೀಳುವ ಹಂತದಲ್ಲಿತ್ತು ಎಂದು ಹೇಳಲಾಗಿತ್ತು. ಹಲವು ಬಾರಿ ಅಂಕಿತಾ ವಿಚ್ಚೇದನ ಬೇಕು ಎಂದೂ ಸಹ ಹೇಳಿದ್ದರು. ಆಗ ಸಲ್ಮಾನ್ ಖಾನ್ ಕೊಟ್ಟ ಸಲಹೆ ತುಮಬಾನೆ ಚರ್ಚೆ ಆಗಿತ್ತು. ಇನ್ನೂ ಅಂಕಿತಾ ಹಾಗೂ ವಿಕ್ಕಿ ಜೈನ್ ವೈವಾಹಿಕ ಜೀವನಕ್ಕೆ ಕಾಲಿಟ್ಟು 6 ವರ್ಷಗಳನ್ನು ಪೂರೈಸಿದ್ದು, ತಮ್ಮ ಮದುವೆಯ ದಿನವನ್ನು ಆಚರಿಸಿದ್ದಾರೆ. ಕೇಕ್ ಕತ್ತರಿಸುವ ಮೂಲಕ ವಿಶೇಷವಾಗಿ ಆಚರಿಸಿಕೊಂಡಿದ್ದಾರೆ. ಇಬ್ಬರೂ ವೈಟ್ ಕಲರ್‍ ಡ್ರೆಸ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಈ ಪೊಟೊಗಳು ಇದೀಗ ಸೋಷಿಯಲ್ ಮಿಡಿಯಾದಲ್ಲಿ ಭಾರಿ ವೈರಲ್ ಆಗುತ್ತಿದೆ.

ಬಿಗ್ ಬಾಸ್ ಸ್ಪರ್ಧಿಗಳಾದ ಅಂಕಿತಾ ಹಾಗೂ ವಿಕ್ಕಿ ಜೈನ್ ತಮ್ಮ 6ನೇ ವರ್ಷದ ವಿವಾಹ ವಾರ್ಷಿಕೋತ್ಸವವನ್ನು ಅದ್ದೂರಿಯಾಗಿ ಆಚರಿಸಿಕೊಂಡಿದ್ದಾರೆ. ಇಬ್ಬರೂ ತುಂಬಾ ಖುಷಿಯಿಂದ ತಮ್ಮ ಬೆಡ್ ರೂಂ ನಲ್ಲಿ ರೊಮ್ಯಾಂಟಿಕ್ ಪೋಸ್ ಕೊಟ್ಟಿದ್ದಾರೆ. ಮೊದಲ ರಾತ್ರಿಗೆ ಬೆಡ್ ಸಿಂಗಾರ ಮಾಡಿದಂತೆ ಮದುವೆ ವಾರ್ಷಿಕೋತ್ಸವಕ್ಕೂ ಸಿಂಗಾರ ಮಾಡಿದ್ದಾರೆ. ಇನ್ನೂ ಈ ಪೊಟೋಗಳು ಸೋಷಿಯಲ್ ಮಿಡಿಯಾದಲ್ಲಿ ತುಂಬಾನೆ ವೈರಲ್ ಆಗಿದೆ. ಈ ಪೊಟೋಗಳಿಗೆ ಅಭಿಮಾನಿಗಳು ಕಾಮೆಂಟ್ ಗಳ ಶುಭಾಷಯಗಳನ್ನು ಸಹ ಕೋರುತ್ತಿದ್ದಾರೆ. ಅದರಲ್ಲೂ ಕೆಲವರಂತೂ ಇದೇನು ಫಸ್ಟ್ ನೈಟ್ ಪೊಟೋಗಳಾ ಎಂದು ಕ್ರೇಜಿಯಾಗಿ ಕಾಮೆಂಟ್ ಮಾಡುತ್ತಿದ್ದಾರೆ.

ಇನ್ನೂ ಬಿಗ್ ಬಾಸ್ ಮನೆಯಿಂದ ಹೊರಬಂದ ಬಳಿಕ ಅಂಕಿತಾ ಕ್ರೇಜ್ ಸಹ ಜೋರಾಗಿದೆ. ಸಿನೆಮಾಗಳಲ್ಲಿ ಆಫರ್‍ ಗಳು ಹರಿದುಬರುತ್ತಿದ್ದು, ಪುಲ್ ಬ್ಯುಸಿಯಾಗಿದ್ದಾರೆ. ಇತ್ತೀಚಿಗೆ ತೆರೆಕಂಡ ಸ್ವಾತಂತ್ಯ್ರ ವೀರ ಸಾವರ್ಕರ್‍ ಸಿನೆಮಾದಲ್ಲಿ ಸಹ ನಟಿಸಿದ್ದು, ಆಕೆಯ ನಟನೆಗೆ ಒಳ್ಳೆಯ ರೆಸ್ಪಾನ್ಸ್ ಸಹ ಸಿಕ್ಕಿದೆ. ಸದ್ಯ ಬಿಗ್ ಬಾಸ್ ಮನೆಯಲ್ಲಿ ಸದ್ದು ಮಾಡಿದ ಜೋಡಿ ಮನೆಯಿಂದ ಹೊರಬಂದ ಬಳಿಕವೂ ಭಾರಿ ಸದ್ದು ಮಾಡುತ್ತಿದ್ದಾರೆ.

Most Popular

To Top