Film News

ಮುಂಬೈನಲ್ಲಿ ಬೇರೆ ಬೇರೆಯಾಗಿದ್ದಾರಂತೆ ಸೂರ್ಯ-ಜ್ಯೋತಿಕಾ, ಮತ್ತೊಮ್ಮೆ ವೈರಲ್ ಆದ ವಿಚ್ಚೇದನದ ರೂಮರ್…..!

ಸಿನಿರಂಗದ ಸೆಲೆಬ್ರೆಟಿಗಳ ಬಗ್ಗೆ ಆಗಾಗ ಕೆಲವೊಂದು ರೂಮರ್‍ ಗಳು ಕೇಳಿಬರುತ್ತಿರುತ್ತವೆ. ಸುದ್ದಿಗಳು ನಿಜವಿರಲಿ ಅಥವಾ ಸುಳ್ಳಾಗಿರಲಿ ಕಡಿಮೆ ಸಮಯದಲ್ಲೇ ಸುದ್ದಿಗಳು ಸಖತ್ ವೈರಲ್ ಆಗುತ್ತಿರುತ್ತವೆ. ಕೆಲವೊಮ್ಮೆ ರೂಮರ್‍ ಗಳಿಗೆ ಸಂಬಂಧಪಟ್ಟವರು ಸ್ಪಷ್ಟನೆ ಕೊಟ್ಟರೂ ಸಹ ಸುದ್ದಿ ಹರಿದಾಡುತ್ತಲೇ ಇರುತ್ತದೆ. ಈ ಮಾದರಿಯಲ್ಲೇ ಕಾಲಿವುಡ್ ಸ್ಟಾರ್‍ ಜೋಡಿಯಾದ ಸೂರ್ಯ ಹಾಗೂ ಜ್ಯೋತಿಕಾ ಬಗ್ಗೆ ಸಹ ಸುಮಾರು ದಿನಗಳಿಂದ ರೂಮರ್‍ ಒಂದು ಹರಿದಾಡುತ್ತಿದೆ. ಅವರಿಬ್ಬರೂ ವಿಚ್ಚೇದನ ಪಡೆದುಕೊಳ್ಳಲಿದ್ದಾರೆ ಎಂಬ ರೂಮರ್‍ ಜೋರಾಗಿಯೇ ಹರಿದಾಡುತ್ತಿದೆ.

ಸದ್ಯ ನಟ ಸೂರ್ಯ ಹಾಗೂ ಜ್ಯೋತಿಕಾ ವಿಚ್ಚೇದನದ ರೂಮರ್‍ ಒಂದು ಕೇಳಿಬರುತ್ತಿದೆ. ಈ ಹಿಂದೆ ಸಹ ಈ ಜೋಡಿ ವಿಚ್ಚೇದನ ಪಡೆದುಕೊಳ್ಳಲಿದ್ದಾರೆ ಎಂಬ ರೂಮರ್‍ ಕೇಳಿಬರುತ್ತಿದ್ದು, ಅದಕ್ಕೆ ಈಗಾಗಲೇ ಈ ಜೋಡಿ ರಿಯಾಕ್ಟ್ ಸಹ ಆಗಿತ್ತು. ಎಲ್ಲವೂ ಸುಳ್ಳು ಸುದ್ದಿ ಎಂದು ಸ್ಪಷ್ಟನೆ ಸಹ ನೀಡಿತ್ತು. ಇದೀಗ ಮತ್ತೊಮ್ಮೆ ವಿಚ್ಚೇದನದ ರೂಮರ್‍ ಮುನ್ನಲೆಗೆ ಬಂದಿದೆ. ಸೂರ್ಯ ಕುಟುಂಬದಲ್ಲಿ ಕೆಲವೊಂದು ಗಲಾಟೆಗಳ ಕಾರಣದಿಂದ ಈ ಜೋಡಿ ಕುಟುಂಬಕ್ಕೆ ದೂರವಾಗಿ ಮುಂಬೈನಲ್ಲಿದ್ದಾರೆ. ಆದರೆ ಮಕ್ಕಳ ಶಿಕ್ಷಣದ ಕಾರಣದಿಂದ ಮುಂಬೈಗೆ ಬಂದಿದ್ದಾಗಿ ಕ್ಲಾರಿಟಿ ಕೊಟ್ಟರು. ಜೊತೆಗೆ ಅವರ ನಡುವೆ ಗಲಾಟೆಗಳು ನಡೆದು ವಿಚ್ಚೇದನ ಪಡೆದುಕೊಳ್ಳುತ್ತಿದ್ದಾರೆ ಎಂಬ ರೂಮರ್‍ ಗೂ ಸಹ ಸ್ಟ್ರಾಂಗ್ ಆಗಿಯೇ ಕ್ಲಾರಿಟಿ ಸಹ ಕೊಟ್ಟಿದ್ದರು.

ಆದರೆ ಇದೀಗ ಮತ್ತೊಮ್ಮೆ ಅವರ ವಿಚ್ಚೇದನದ ರೂಮರ್‍ ಕೇಳಿಬರುತ್ತಿದೆ. ಇಬ್ಬರ ನಡುವೆ ವಿಬೇದಗಳ ಕಾರಣದಿಂದ ಮುಂಬೈನಲ್ಲಿ ಬೇರೆ ಬೇರೆಯಾಗಿ ಜೀವನ ಸಾಗಿಸುತ್ತಿದ್ದಾರೆ. ಮಕ್ಕಳ ಶಿಕ್ಷಣಕ್ಕಾಗಿಯೇ ಸೂರ್ಯ ಮುಂಬೈನಲ್ಲಿದ್ದಾರಂತೆ. ಜ್ಯೋತಿಕ ಮೂಲತಃ ಮುಂಬೈ ಮೂಲದವರಾದ ಕಾರಣದಿಂದ ಆಕೆ ಅಲ್ಲಿಯೇ ಇದ್ದಾರಂತೆ. ಸೂರ್ಯ ಶೂಟಿಂಗ್ ನಿಮಿತ್ತ ಚೆನೈಗೆ ಹೋಗಿ ಬರುತ್ತಿದ್ದಾರಂತೆ. ಸದ್ಯ ಈ ಸುದ್ದಿ ಮಾತ್ರ ಸೋಷಿಯಲ್ ಮಿಡಿಯಾದಲ್ಲಿ ಭಾರಿ ವೈರಲ್ ಆಗುತ್ತಿದೆ. ಈ ಸುದ್ದಿಯಲ್ಲಿ ಎಷ್ಟು ನಿಜ ಇದೆ ಎಂಬುದು ಮಾತ್ರ ಯಾರಿಗೂ ತಿಳಿದಿಲ್ಲ. ಈ ಹಿಂದೆ ಸಹ ಈ ಜೋಡಿ ಕ್ಲಾರಿಟಿ ಕೊಟ್ಟರೂ ಮತ್ತೆ ವಿಚ್ಚೇದನದ ರೂಮರ್‍ ವೈರಲ್ ಆಗುತ್ತಿದೆ.

ಈ ರೂಮರ್‍ ಬಗ್ಗೆ ನಟಿ ಜ್ಯೋತಿಕಾ ಸ್ಪಷ್ಟನೆ ಕೊಟ್ಟಿದ್ದಾರೆ. ನನಗೂ ಹಾಗೂ ಸೂರ್ಯ ನಡುವೆ ಯಾವುದೇ ರೀತಿಯ ಗಲಾಟೆ ಇಲ್ಲ. ನಮ್ಮಿಬ್ಬರಿಗೂ ವಿಚ್ಚೇದನ ಪಡೆದುಕೊಳ್ಳಬೇಕೆಂಬ ಆಲೋಚನೆಯೇ ಇಲ್ಲ. ನಮ್ಮ ತಂದೆ ತಾಯಿಯವರು ಮುಂಬೈನಲ್ಲಿದ್ದಾರೆ. ಅವರ ಆರೋಗ್ಯ ಸರಿಯಿಲ್ಲದ ಕಾರಣ ನಾನು ಮುಂಬೈಗೆ ಬಂದೆ. ಸೂರ್ಯ ಸಹ ನನ್ನ ತಂದೆ ತಾಯಿಯವರನ್ನು ನೋಡಿಕೋ ಎಂದು ಮುಂಬೈಗೆ ಕಳುಹಿಸಿದ್ದಾನೆ. ಆತ ತುಂಬಾ ಒಳ್ಳೆಯ ವ್ಯಕ್ತಿ ಎಂಬುದನ್ನು ಹೇಳುವ ಅವಶ್ಯಕತೆಯಿಲ್ಲ ಎಂದು ಜ್ಯೋತಿಕಾ ಹೇಳಿದ್ದಾರೆ ಎಂದು ತಿಳಿದುಬಂದಿದೆ.

Most Popular

To Top