ಸಹೋದರನಿಗೆ ಕಿಡ್ನಿ ದಾನ ಮಾಡಿದ್ದಕ್ಕಾಗಿ, ಪತ್ನಿಗೆ ತಲಾಖ್ ಕೊಟ್ಟ ಪತಿ, 40 ಲಕ್ಷ ಡಿಮ್ಯಾಂಡ್ ಸಹ ಮಾಡಿದ್ದನಂತೆ….!

Follow Us :

ಇತ್ತೀಚಿಗಷ್ಟೆ ಭಾರತದಲ್ಲಿ ತ್ರಿವಳಿ ತಲಾಖ್ ನಿಷೇಧ ಕಾಯ್ದೆ ಜಾರಿಯಾಗಿದೆ. ಆದರೂ ಸಹ ಮುಸ್ಲೀಂ ಮಹಿಳೆಯರು ತಲಾಖ್ ಎದುರಿಸುತ್ತಿದ್ದಾರೆ. ಅವರ ಮೇಲೆ ಕೌಂಟುಂಬಿಕ ದೌರ್ಜನ್ಯ ನಡೆಯುತ್ತಲೇ ಇದೆ. ಇದೀಗ ಮುಸ್ಲೀಂ ವಿವಾಹಿತನೊಬ್ಬ ತನ್ನ ಹೆಂಡತಿಗೆ ವಾಟ್ಸಾಪ್ ನಲ್ಲೇ ತಲಾಖ್ ಕೊಟ್ಟಿದ್ದು ಇದಕ್ಕೆ ಉತ್ತಮ ಉದಾಹರಣೆ ಎಂದು ಹೇಳಬಹುದಾಗಿದೆ. ಈ ಘಟನೆ ಉತ್ತರಪ್ರದೇಶದಲ್ಲಿ ನಡೆದಿದೆ ಎಂದು ತಿಳಿದುಬಂದಿದೆ.

ಉತ್ತರ ಪ್ರದೇಶ ಮೂಲದ ವ್ಯಕ್ತಿಯೊಬ್ಬ ದುಬೈನಲ್ಲಿದ್ದು, ತನ್ನ ಪತ್ನಿಗೆ ತಲಾಖ್ ನೀಡಿದ್ದಾನೆ. ಆತ ತಲಾಖ್ ನೀಡಿದ ವಿಚಾರ ತಿಳಿದರೇ ಶಾಕ್ ಆಗೋದಂತೂ ಖಚಿತ ಎಂದೇ ಹೇಳಬಹುದು. ತಲಾಖ್ ಪಡೆದುಕೊಂಡ ಮುಸ್ಲೀಂ ಮಹಿಳೆಯ ಸಹೋದರನಿಗೆ ಕಿಡ್ನಿ ಸಮಸ್ಯೆ ಇತ್ತಂತೆ. ಆ ಕಾರಣದಿಂದ ಆಕೆ ತನ್ನ ಕಿಡ್ನಿಯನ್ನು ಸಹೋದರನಿಗೆ ದಾನ ಮಾಡಿದ್ದಾಳೆ. ಈ ಕಾರಣಕ್ಕಾಗಿಯೇ ಆಕೆಯ ಪತಿ ವಾಟ್ಸಾಪ್ ಮೂಲಕವೇ ತಲಾಖ್ ನೀಡಿದ್ದಾರೆ ಎನ್ನಲಾಗಿದೆ. ಇನ್ನೂ ಸಂತ್ರಸ್ತೆಯನ್ನು ತರನ್ನುಮ್ ಎಂದು ಗುರ್ತಿಸಲಾಗಿದ್ದು, ಮೊಹಮ್ಮದ್ ರಶೀದ್ ಆಕೆಗೆ ತಲಾಖ್ ನೀಡಿದ್ದಾನೆ.

ಸಂತ್ರಸ್ತೆ ತರನ್ನುಮ್ ಸಹೋದರ ಶಕೀರ್‍ ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದ. ಆದ್ದರಿಂದ ಆತನಿಗೆ ತುರ್ತಾಗಿ ಕಿಡ್ನಿ ಕಸಿ ಮಾಡಬೇಕಾಗಿತ್ತು. ಮುಂಬೈನ ಖಾಸಗಿ ಆಸ್ಪತ್ರೆಯಲ್ಲಿ ದಾಖಲು ಮಾಡಲಾಗಿತ್ತು. ಆದರೆ ಆತನಿಗೆ ಕಿಡ್ನಿ ಸಿಕ್ಕಿರಲಿಲ್ಲವಂತೆ. ಆದ್ದರಿಂದ ತರನ್ನುಮ್ ತಮ್ಮ ಕಿಡ್ನಿಯನ್ನು ಕೊಡಲು ಮುಂದಾಗಿದ್ದಾರಂತೆ. ತಾನು ತನ್ನ ಸಹೋದರನಿಗೆ ಕಿಡ್ನಿ ದಾನ ಮಾಡಿ ಜೀವ ಉಳಿಸಿದ ಬಗ್ಗೆ ತರನ್ನುಮ್ ತನ್ನ ಗಂಡ ಮೊಹಮ್ಮದ್ ರಶೀದ್ ಗೆ ತಿಳಿಸಿದ್ದಾರೆ. ಆದರೆ ತನ್ನ ಹೆಂಡತಿ ಮಾಡಿದ ಕೆಲಸಕ್ಕೆ ಹೆಮ್ಮೆ ಪಡುವುದರ ಬದಲು ಆಕ್ರೋಷಗೊಂಡಿದ್ದಾರೆ. ಕಿಡ್ನಿ ಕೊಟ್ಟಿದ್ದಕ್ಕಾಗಿ ಆಕೆಯ ಸಹೋದರ ಅಥವಾ ಆಕೆಯ ತವರು ಮನೆಯಿಂದ 40 ಲಕ್ಷ ತೆಗೆದುಕೊಂಡು ಬಾ ಎಂದು ಹೇಳಿದ್ದನಂತೆ. ಆದರೆ ಅದಕ್ಕೆ ಒಪ್ಪದ ಪತ್ನಿಗೆ ವಾಟ್ಸಾಪ್ ಮೂಲಕ ತಲಾಖ್ ನೀಡಿದ್ದಾನೆ ಎನ್ನಲಾಗಿದೆ. ಇನ್ನೂ ಪತಿ ನೀಡಿದ ತಲಾಖ್ ಬಗ್ಗೆ ತಲೆಗೆಡಿಸಿಕೊಳ್ಳದ ತರನ್ನುಮ್ ಪತಿಯ ಮನೆಯಲ್ಲೇ ಇದ್ದಾರೆ. ಆದರೆ ಆಕೆಯ ಅತ್ತೆ ಹಾಗೂ ಕುಟುಂಬದವರು ಮನೆಯಿಂದ ಹೊರಗೆ ಹೋಗುವಂತೆ ಕಿರುಕುಳ ಕೊಡುತ್ತಿದ್ದಾರಂತೆ. ಆದ್ದರಿಂದ ತರನ್ನುಮ್ ಪತಿ ಹಾಗೂ ಆತನ ಕುಟುಂಬಸ್ಥರ ವಿರುದ್ದ ಪೊಲೀಸರ ಮೊರೆ ಹೋಗಿದ್ದಾರೆ.