News

ತಾಯಿಗೋಸ್ಕರ 2 ಕೋಟಿಗೆ ಕಿಡ್ನಿ ಮಾರಲು ಹೋಗಿ 6 ಲಕ್ಷ ಕಳೆದುಕೊಂಡ ಚಾರ್ಟೆಟ್ ಅಕೌಂಟೆಂಟ್….!

ಮಗನೋರ್ವ ತನ್ನ ತಾಯಿಯನ್ನು ಚೆನ್ನಾಗಿ ನೋಡಿಕೊಳ್ಳುವ ದೃಷ್ಟಿಯಿಂದ ತನ್ನ ಕಿಡ್ನಿಯನ್ನು ಮಾರಲು ಹೋಗಿ 6 ಲಕ್ಷ ಕಳೆದುಕೊಂಡಿದ್ದಾನೆ. ಸಾಲ, ಮನೆಯಲ್ಲಿ ಬಡತನ ಹಾಗೂ ಜೀವನದಲ್ಲಿ ತನ್ನ ತಾಯಿಯನ್ನು ಚೆನ್ನಾಗಿ ನೋಡಿಕೊಳ್ಳಬೇಕೆಂಬ ಉದ್ದೇಶದಿಂದ ಆನ್ ಲೈನ್ ನಲ್ಲಿ ಕಿಡ್ನಿ ದಾನದ ಬಗ್ಗೆ ಜಾಹಿರಾತು ನೋಡಿ ತನ್ನ ಕಿಡ್ನಿ ಮಾರಲು ಮುಂದಾಗಿ ಆರು ಲಕ್ಷ ಕಳೆದುಕೊಂಡಿದ್ದು, ಇದೀಗ ಪೊಲೀಸರ ಮೊರೆ ಹೋಗಿದ್ದಾನೆ.

ಬೆಂಗಳೂರು ಮೂಲದ ಶ್ರೀನಿವಾಸ್ ಎಂಬಾತ ಕಚೇರಿಯೊಂದರಲ್ಲಿ ಚಾರ್ಟೆಟ್ ಅಕೌಂಟೆಂಟ್ ಆಗಿ ಕೆಲಸ ಮಾಡುತ್ತಿದ್ದ. ಆದರೆ ಸಂಬಳ ಸಾಲದೆ ತೀವ್ರ ಸಂಕಷ್ಟ ಎದುರಿಸುತ್ತಿದ್ದ. ಮನೆಯಲ್ಲೂ ಸಹ ಕಷ್ಟ ಎದುರಾಗಿದ್ದ ಹಿನ್ನೆಲೆಯಲ್ಲಿ ಜೀವನ ನಡೆಸಲು ಮೈ ತುಂಬಾ ಸಾಲ ಸಹ ಮಾಡಿಕೊಂಡಿದ್ದು. EMI, ಕ್ರೆಡಿಟ್ ಕಾರ್ಡ್ ಹೀಗೆ ತುಂಬಾ ಸಾಲ ಮಾಡಿಕೊಂಡು ಬೇಸತ್ತು ಹೋಗಿದ್ದ. ಜೊತೆಗೆ ತಾಯಿಯ ಆಯೋಗ್ಯ ಸಹ ನೋಡಿಕೊಳ್ಳಲು ಕಷ್ಟಪಡುತ್ತಿದ್ದ. ಈ ಎಲ್ಲಾ ಕಾರಣಗಳಿಂದ ಜೀವನದ ಮೇಲೆ ಜಿಗುಪ್ಸೆಯಾಗಿದ್ದಾನೆ. ಇದೇ ಸಮಯದಲ್ಲಿ ತನ್ನ ಕಿಡ್ನಿಯನ್ನು ಮಾರಾಟ ಮಾಡಲು ನಿರ್ಧಾರ ಮಾಡಿದ್ದಾನಂತೆ. ಆನ್ ಲೈನ್ ನಲ್ಲಿ ಈ ಕುರಿತು ಹುಡುಕಾಟ ನಡೆಸಿದ್ದಾನೆ. ಈ ವೇಳೆ ಆತನಿಗೆ ಕಿಡ್ನಿ ಬೇಕಾಗಿದೆ ಎಂಬ ಜಾಹಿರಾತೊಂದು ಸಿಕ್ಕಿದೆ.

ಕಿಡ್ನಿ ಕೊಟ್ಟರೇ 2 ಕೋಟಿ ಹಣ ನೀಡುವುದಾಗಿ ಜಾಹಿರಾತನ್ನು ನೋಡಿದ ಶ್ರೀನಿವಾಸ್ ಆ ವೆಬ್ ಸೈಟ್ ನಲ್ಲಿ ನೀಡಲಾಗಿದ್ದು ಇ-ಮೇಲ್ ಗೆ ತಾನು ಕಿಡ್ನಿ ಕೊಡುವುದಾಗಿ ತಿಳಿಸಿದ್ದಾನೆ. ಈ ಸಂದೇಶಕ್ಕೆ ರಿಪ್ಲೆ ಸಹ ಬಂದಿದ್ದು, ಕಿಡ್ನಿ ಕೊಟ್ಟರೇ 2 ಕೋಟಿ ಕೊಡುವುದಾಗಿ ತಿಲಿಸಿದ್ದಾರೆ. ಬಳಿಕ ನಿಮ್ಮ ರಕ್ತದ ಗುಂಪು ಹಾಗೂ ಆರೋಗ್ಯದ ಬಗ್ಗೆ ಮಾಹಿತಿ ಕೇಳಿದ್ದಾರೆ. ಇದಾದ ಬಳಿಕ ಪ್ರೊಸೆಸಿಂಗ್ ಫೀ ಎಂದು ಹಂತ ಹಂತವಾಗಿ ಶ್ರೀನಿವಾಸ್ ನಿಂದ ಆರು ಲಕ್ಷ ಹಣ ಪಾವತಿಸಿಕೊಂಡಿದ್ದಾರೆ. ಬಳಿಕ ಕಿಡ್ನಿ ಪಡೆಯುವ ದಿನಾಂಕ ಹಾಗೂ ಹಣ ವರ್ಗಾವಣೆಯ ಬಗ್ಗೆ ಮುಂದಿನ ದಿನಗಳಲ್ಲಿ ತಿಳಿಸುವುದಾಗಿ ಹೇಳಿದ್ದಾರೆ. ಬಳಿಕ ಅವರಿಂದ ಯಾವುದೇ ಪ್ರತಿಕ್ರಿಯೆ ಬರದ ಹಿನ್ನೆಲೆಯಲ್ಲಿ ಆತ ಹಣ ಕಳೆದುಕೊಂಡಿರುವುದು ಖಚಿತವಾಗಿದೆ. ಕೊನೆಯದಾಗಿ ಆತ ಆರು ಲಕ್ಷ ಕಳೆದುಕೊಂಡ ಬಗ್ಗೆ ದೂರು ನೀಡಿದ್ದು, ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ.

Most Popular

To Top