Film News

ಮದುವೆಯಾಗಿ ಆರು ವರ್ಷಗಳ ಬಳಿಕ ತಾಯಿಯಾಗ್ತಾ ಇದ್ದಾರಂತೆ ದೀಪಿಕಾ ಪಡುಕೋಣೆ, ವೈರಲ್ ಆದ ರೂಮರ್…..!

ಬಾಲಿವುಡ್ ಸ್ಟಾರ್‍ ನಟಿ ದೀಪಿಕಾ ಪಡುಕೋಣೆ ಮದುವೆಯಾದ ಬಳಿಕವೂ ಸಹ ಬ್ಯಾಕ್ ಟು ಬ್ಯಾಕ್ ಸಿನೆಮಾಗಳ ಮೂಲಕ ಸಖತ್ ಸದ್ದು ಮಾಡುತ್ತಿದ್ದಾರೆ. ಅದರಲ್ಲೂ ಸಿನೆಮಾಗಳಲ್ಲಿ ಬೋಲ್ಡ್ ಆಗಿಯೇ ನಟಿಸುತ್ತಿದ್ದಾರೆ. ಇದೀಗ ದೀಪಿಕಾ ಸಿನೆಮಾ ವಿಚಾರಗಳ ಜೊತೆಗೆ ಕೆಲವೊಂದು ವೈಯುಕ್ತಿಕ ವಿಚಾರಗಳ ಕಾರಣದಿಂದ ಸಹ ಸುದ್ದಿಯಾಗುತ್ತಿರುತ್ತಾರೆ. ಇದೀಗ ದೀಪಿಕಾ ಪಡುಕೋಣೆ ತಾಯಿಯಾಗಿದ್ದಾರೆ ಎಂಬ ರೂಮರ್‍ ಒಂದು ವೈರಲ್ ಆಗುತ್ತಿದೆ.

ಬಾಲಿವುಡ್ ಸ್ಟಾರ್‍ ನಟಿ ದೀಪಿಕಾ ಪಡುಕೋಣೆ ವಯಸ್ಸಾಗುತ್ತಿದ್ದರೂ. ಸ್ಟಾರ್‍ ನಟರ ಸಿನೆಮಾಗಳಲ್ಲಿ ನಟಿಸುತ್ತಾ ಕೆರಿಯರ್‍ ಸಾಗಿಸುತ್ತಿದ್ದಾರೆ. ಸದ್ಯ ಆಕೆ ಪ್ಯಾನ್ ಇಂಡಿಯಾ ಸ್ಟಾರ್‍ ಪ್ರಭಾಸ್ ಜೊತೆಗೆ ಕಲ್ಕಿ ಸಿನೆಮಾದಲ್ಲಿ ನಟಿಸಿದ್ದು, ಈ ಸಿನೆಮಾ ಶೀಘ್ರದಲ್ಲೆ ತೆರೆಕಾಣಲಿದೆ. ಸದ್ಯ ಆಕೆ ಬಾಲಿವುಡ್ ನಲ್ಲಿ ಸಿಂಗಂ ರಿಟರ್ನ್ ಎಂಬ ಸಿನೆಮಾದಲ್ಲಿ ನಟಿಸುತ್ತಿದ್ದಾರೆ. ಮದುವೆಯಾದ ಬಳಿಕವೂ ಸಹ ದೀಪಿಕಾ ಬೋಲ್ಡ್ ಪಾತ್ರಗಳಲ್ಲೂ ನಟಿಸುತ್ತಿದ್ದಾರೆ. ಬೆಂಗಳೂರಿನಲ್ಲಿ ಹುಟ್ಟಿ ಬೆಳೆದ ದೀಪಿಕಾ ಕನ್ನಡ ಸಿನೆಮಾದ ಮೂಲಕ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟು, ಇದೀಗ ಬಾಲಿವುಡ್ ನಲ್ಲಿ ಸ್ಟಾರ್‍ ನಟಿಯಾಗಿದ್ದಾರೆ. ಇದೀಗ ದೀಪಿಕಾ ಪಡುಕೋಣೆ ಗರ್ಭಿಣಿಯಾಗಿದ್ದಾರೆ ಎಂಬ ಸುದ್ದಿಯೊಂದು ಸಿನಿ ಅಂಗಳದಲ್ಲಿ ಭಾರಿ ವೈರಲ್ ಆಗುತ್ತಿದೆ.

ಇತ್ತೀಚಿಗೆ ನಟಿ ದೀಪಿಕಾ ಪಡುಕೋಣೆ ಅಂತರಾಷ್ಟ್ರೀಯ ಫಿಲಂ ಅವಾರ್ಡ್ ಸಿನೆಮಾಗಲ್ಲಿ ಭಾಗಿಯಾಗಿದ್ದರು. ಈ ವೇಳೆ ಆಕೆ ಸೀರೆಯಲ್ಲಿ ಕಾಣಿಸಿಕೊಂಡಿದ್ದರು. ಸೀರೆಯಲ್ಲಿ ದೀಪಿಕಾ ತುಂಬಾ ಹಾಟ್ ಆಗಿ ಕಾಣಿಸಿಕೊಂಡಿದ್ದಾರೆ. ಆಕೆಯ ಪೊಟೋಗಳು ಸೋಷಿಯಲ್ ಮಿಡಿಯಾದಲ್ಲಿ ತುಂಬಾನೆ ವೈರಲ್ ಆಗಿದೆ. ಆದರೆ ಕೆಲವರು ಈ ಪೊಟೋಗಳಲ್ಲಿ ದೀಪಿಕಾ ಪಡುಕೋಣೆ ಹೊಟ್ಟೆಯನ್ನು ಗಮನಿಸಿದ್ದಾರೆ. ಬೇಬಿ ಬಂಪ್ ಇರುವಂತೆ ಕಾಣಿಸಿಕೊಂಡಿದೆ. ಕೂಡಲೇ ಸೋಷಿಯಲ್ ಮಿಡಿಯಾದಲ್ಲಿ ದೀಪಿಕಾ ಗರ್ಭಿಣಿ ಎಂಬ ರೂಮರ್‍ ಭಾರಿ ಸದ್ದು ಮಾಡಿದೆ. ಈ ಹಿಂದೆ ಸಹ ದೀಪಿಕಾ ಪ್ರಗ್ನೆಟ್ ಆಗಿದ್ದಾರೆ ಎಂಬ ಸುದ್ದಿಗಳೂ ಸಹ ಕೇಳಿಬಂದಿತ್ತು. ಆದರೆ ಎಲ್ಲವೂ ಸುಳ್ಳು ಎಂತಲೂ, ಸದ್ಯ ಮಕ್ಕಳನ್ನು ಪಡೆದುಕೊಳ್ಳುವ ನಿರ್ಧಾರವಿಲ್ಲ ಎಂದು ಹಿಂಟ್ ಕೊಟ್ಟಿದ್ದರು. ಇದೀಗ ಮತ್ತೊಮ್ಮೆ ದೀಪಿಕಾ ಪ್ರಗ್ನೆಟ್ ಎಂಬ ರೂಮರ್‍ ಜೋರಾಗಿ ಹರಿದಾಡುತ್ತಿದ್ದು, ಇದೀಗ ಈ ಬಗ್ಗೆ ದೀಪಿಕಾ ಕ್ಲಾರಿಟಿ ಕೊಡಬೇಕಿದೆ.

Most Popular

To Top