I Want to go back, ಎಂದು ಹಾಟ್ ಪೋಸ್ ಕೊಟ್ಟ ರಶ್ಮಿಕಾ, ಪೊಟೋ ತೆಗೆದಿದ್ದು ವಿಜಯ್ ದೇವರಕೊಂಡ ಎಂದ ಫ್ಯಾನ್ಸ್…!

ಬಹುಬೇಡಿಕೆ ನಟಿ ರಶ್ಮಿಕಾ ಮಂದಣ್ಣ ಇತ್ತೀಚಿಗೆ ಮೊದಲಗಿಂತಲೂ ಹೆಚ್ಚು ಸುದ್ದಿಯಲ್ಲಿರುತ್ತಾರೆ, ಆಕೆ ಏನೇ ಪೋಸ್ಟ್ ಹಂಚಿಕೊಂಡರೂ ಸಹ ಅದಕ್ಕೆ ವಿಜಯ್ ದೇವರಕೊಂಡರವರನ್ನು ಲಿಂಕ್ ಮಾಡುತ್ತಿದ್ದಾರೆ. ಈ ಹಾದಿಯಲ್ಲೇ ಆಕೆ ಹೊಸ ವರ್ಷದ ಸಂಭ್ರಮಕ್ಕಾಗಿ ಮಾಲ್ಡೀವ್ಸ್…

ಬಹುಬೇಡಿಕೆ ನಟಿ ರಶ್ಮಿಕಾ ಮಂದಣ್ಣ ಇತ್ತೀಚಿಗೆ ಮೊದಲಗಿಂತಲೂ ಹೆಚ್ಚು ಸುದ್ದಿಯಲ್ಲಿರುತ್ತಾರೆ, ಆಕೆ ಏನೇ ಪೋಸ್ಟ್ ಹಂಚಿಕೊಂಡರೂ ಸಹ ಅದಕ್ಕೆ ವಿಜಯ್ ದೇವರಕೊಂಡರವರನ್ನು ಲಿಂಕ್ ಮಾಡುತ್ತಿದ್ದಾರೆ. ಈ ಹಾದಿಯಲ್ಲೇ ಆಕೆ ಹೊಸ ವರ್ಷದ ಸಂಭ್ರಮಕ್ಕಾಗಿ ಮಾಲ್ಡೀವ್ಸ್ ಗೆ ಹೋಗಿದ್ದ ವಿಚಾರ ತಿಳಿದೇ ಇದೇ. ವಿಜಯ್ ದೇವರಕೊಂಡ ಜೊತೆಗೆ ರಶ್ಮಿಕಾ ಮಾಲ್ಡೀವ್ಸ್ ಗೆ ಹೋಗಿದ್ದಾರೆ ಎಂಬ ಸುದ್ದಿ ಸಹ ಜೋರಾಗಿ ಹರಿದಾಡಿತ್ತು. ಇದೀಗ ಆಕೆ ಮತ್ತೆರಡು ಪೊಟೋಗಳನ್ನು ಹಂಚಿಕೊಂಡಿದ್ದು, ಆ ಪೊಟೋಗಳನ್ನು ತೆಗೆದಿದ್ದು ವಿಜಯ್ ದೇವರಕೊಂಡರವರೇ ಎಂದು ನೆಟ್ಟಿಗರು ಅನುಮಾನ ವ್ಯಕ್ತಪಡಿಸುತ್ತಿದ್ದಾರೆ.

ಇನ್ನೂ ರಶ್ಮಿಕಾ ತನ್ನ ಸೋಷಿಯಲ್ ಮಿಡಿಯಾ ಖಾತೆಯಲ್ಲಿ ಹಳೆಯ ಪೊಟೋಗಳನ್ನು ಶೇರ್‍ ಮಾಡಿ ಈ ವಾಂಟ್ ಟು ಗೋ ಬ್ಯಾಕ್ ಎಂದು ಎರಡು ಪೊಟೋಗಳನ್ನು ಶೇರ್‍ ಮಾಡಿದ್ದಾರೆ. ಆಕೆ ಯಾವ ಉದ್ದೇಶದಿಂದ ಆ ಕ್ಯಾಪ್ಷನ್ ಹಾಕಿ ಪೊಟೋಗಳನ್ನು ಶೇರ್‍ ಮಾಡಿದ್ದಾರೋ, ಆದರೆ ಅನೇಕರು ತಮ್ಮದೇ ಆದ ವ್ಯಾಖ್ಯಾನಗಳನ್ನು ನೀಡುತ್ತಿದ್ದಾರೆ. ಈ ಪೊಟೋಗಳು ತುಂಬಾನೆ ಗ್ಲಾಮರಸ್ ಆಗಿದೆ. ಒಂದು ಪೊಟೋದಲ್ಲಿ ಆಕೆ ತನ್ನ ಎದೆಯನ್ನು ಕ್ಲೋಜ್ ಆಗಿ ತೋರಿಸಿದ್ದಾರೆ. ಈ ಪೊಟೋದಲ್ಲಿ ಆಕೆ ಕ್ಲೀವೇಜ್ ಮೂಲಕ ಎಲ್ಲರ ಮೈಂಡ್ ಬ್ಲಾಕ್ ಮಾಡುತ್ತಿದ್ದಾರೆ. ಇದೇ ವೇಳೆ ಈ ಪೊಟೋಗಳನ್ನು ತೆಗೆದಿದ್ದು ವಿಜಯ್ ದೇವರಕೊಂಡ ರವರೇ ಎಂದು ರಶ್ಮಿಕಾ ಗೆ ಪ್ರಶ್ನೆಗಳನ್ನು ಸಹ ಕಾಮೆಂಟ್ ಮೂಲಕ ಕೇಳುತ್ತಿದ್ದಾರೆ. ಜೊತೆಗೆ ಮತಷ್ಟು ಕಾಮೆಂಟ್ ಗಳ ಮೂಲಕ ಪೊಟೋಗಳನ್ನು ವೈರಲ್ ಸಹ ಮಾಡುತ್ತಿದ್ದಾರೆ. ಸುಮಾರು ದಿನಗಳಿಂದ ವಿಜಯ್ ದೇವರಕೊಂಡ ಹಾಗೂ ರಶ್ಮಿಕಾ ನಡುವೆ ಪ್ರೇಮಾಯಣ ನಡೆಯುತ್ತಿದೆ ಎಂಬ ರೂಮರ್‍ ಗಳು ಜೊರಾಗಿಯೇ ಹರಿದಾಡುತ್ತಿದೆ. ಯಾವುದೇ ರೀತಿಯ ಅಪೈರ್‍ ನಡೆಯುತ್ತಿಲ್ಲ ಎಂದು ರಶ್ಮಿಕಾ ಈಗಾಗಲೇ ಅನೇಕ ಬಾರಿ ಹೇಳಿದರೂ ಸಹ ರೂಮರ್‍ ಮಾತ್ರ ಹರಿದಾಡುತ್ತಲೇ ಇದೆ.

ಇನ್ನೂ ಈ ಹಿಂದೆ ರಶ್ಮಿಕಾ ಹಾಗೂ ವಿಜಯ್ ದೇವರಕೊಂಡ ಒಟ್ಟಿಗೆ ವೆಕೇಷನ್ ಗೆ ಹೋಗಿದ್ದರು ಎಂದು ಸಹ ಹೇಳಲಾಗುತ್ತಿದೆ. ಜೊತೆಗೆ ಹೊಸ ವರ್ಷಕ್ಕೆ ಇಬ್ಬರೂ ಮಾಲ್ಡೀವ್ಸ್ ಗೆ ಹೋಗಿದ್ದರು. ಒಂದೇ ಸ್ಥಳದಲ್ಲಿ ಇಬ್ಬರೂ ಪೊಟೋಗಳನ್ನು ಹಂಚಿಕೊಂಡಿದ್ದರು. ಈ ಕಾರಣದಿಂದ ಅವರಿಬ್ಬರು ಜೊತೆಗೆ ವೆಕೇಷನ್ ಗೆ ಹೋಗಿದ್ದಾರೆ ಎಂಬ ಸುದ್ದಿ ಮತಷ್ಟು ಬಲಗೊಂಡಿತ್ತು. ಇನ್ನೂ ಆಕೆಯ ವಿರುದ್ದ ಸದಾ ವಿವಾದಗಳು ಹುಟ್ಟಿಕೊಳ್ಳುತ್ತಲೇ ಇರುತ್ತದೆ. ಕೆಲವು ದಿನಗಳ ಹಿಂದೆ ಕನ್ನಡ ಸಿನೆಮಾರಂಗ ಆಕೆಯನ್ನು ಬ್ಯಾನ್ ಮಾಡಬೇಕೆಂದು ದೊಡ್ಡ ಮಟ್ಟದ ಅಭಿಯಾನ ಸಹ ಶುರುವಾಗಿತ್ತು. ಆಕೆಗೆ ಅನೇಕ ನಟ-ನಟಿಯರು ಸಹ ಬೆಂಬಲ ನೀಡಿದ್ದರು. ರಶ್ಮಿಕಾ ಸಹ ಈ ಬಗ್ಗೆ ಪ್ರತಿಕ್ರಿಯೆ ನೀಡಿ ಅದೆಲ್ಲವೂ ಸುಳ್ಳು ಸುದ್ದಿ ಎಂದು ತಳ್ಳಿಹಾಕಿದರು. ರಶ್ಮಿಕಾ ಏನೆ ಮಾಡಿದರೂ ವಿವಾದಗಳಿಗೆ ಹಾಗೂ ಟ್ರೋಲರ್‍ ಗಳಿಗೆ ಆಗಾಗ ಆಹಾರವಾಗುತ್ತಲೇ ಇರುತ್ತಾರೆ.

ಇನ್ನೂ ರಶ್ಮಿಕಾ ಸದ್ಯ ಸೌತ್ ಅಂಡ್ ನಾರ್ತ್‌ನಲ್ಲೂ ಬ್ಯುಸಿಯಾಗಿದ್ದಾರೆ. ಆಕೆ ಪುಷ್ಪಾ-2, ಯಾನಿಮಲ್, ಮಿಷನ್ ಮಜ್ನು ಸಿನೆಮಾಗಳಲ್ಲಿ ನಟಿಸುತ್ತಿದ್ದಾರೆ.  ಇನ್ನೂ ಆಕೆಗೆ ಬಿಗ್ ಬ್ರೇಕ್ ನೀಡಿದ್ದು ಪುಷ್ಪಾ ಸಿನೆಮಾ. ಇದೀಗ ಪುಷ್ಪಾ-2 ಸಿನೆಮಾದಲ್ಲೂ ಸಹ ರಶ್ಮಿಕಾ ನಟಿಸುತ್ತಿದ್ದು, ಈ ಸಿನೆಮಾದ ಮೇಲೆ ಆಕೆ ತುಂಬಾ ನಿರೀಕ್ಷೆಯನ್ನು ಇಟ್ಟುಕೊಂಡಿದ್ದಾರೆ ಎನ್ನಲಾಗುತ್ತಿದೆ. ಈ ಸಂಕ್ರಾಂತಿ ಹಬ್ಬದಂದು ಆಕೆ ವಾರಿಸು ಎಂಬ ಸಿನೆಮಾದ ಮೂಲಕ ಕಾಣಿಸಿಕೊಂಡಿದ್ದು, ಈ ಸಿನೆಮಾ ಮಿಶ್ರ ಪ್ರತಿಕ್ರಿಯೆ ಪಡೆದುಕೊಂಡಿದೆ.