Film News

ಗರ್ಭಿಣಿಯಾದರೂ ಸಹ ಸಖತ್ ಹಾಟ್ ಆಗಿ ಕಾಣಿಸಿಕೊಂಡ ಇಲಿಯಾನಾ, ಕಾರಿನಲ್ಲಿ ಮೈಂಡ್ ಬ್ಲಾಕ್ ಪೋಸ್ ಕೊಟ್ಟ ಇಲಿಯಾನಾ…..!

ಸೌತ್ ಸಿನಿರಂಗದ ಸ್ಟಾರ್‍ ನಟಿ ಇಲಿಯಾನಾ ಕಡಿಮೆ ಸಮಯದಲ್ಲೇ ಸೆನ್ಷೇಷನ್ ಕ್ರಿಯೇಟ್ ಮಾಡಿದ ನಟಿಯಾಗಿದ್ದಾರೆ. ದೇವದಾಸ್ ಎಂಬ ಸಿನೆಮಾದ ಮೂಲಕ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟ ಈಕೆ ಕಡಿಮೆ ಸಮಯದಲ್ಲೇ ತುಂಬಾ ಕ್ರೇಜ್ ಪಡೆದುಕೊಂಡರು. ಬಳಿಕ ಮಹೇಶ್ ಬಾಬು ಜೊತೆಗೆ ಪೋಕಿರಿ ಸಿನೆಮಾದಲ್ಲಿ ನಟಿಸಿದ್ದರು. ಈ ಸಿನೆಮಾ ಬ್ಲಾಕ್ ಬ್ಲಸ್ಟರ್‍ ಹಿಟ್ ಹೊಡೆದ ಹಿನ್ನೆಲೆಯಲ್ಲಿ ಆಕೆ ಓವರ್‍ ನೈಟ್ ಸ್ಟಾರ್‍ ಆಗಿಬಿಟ್ಟರು. ಇನ್ನೂ ಮದುವೆಗೂ ಮುಂಚೆ ಇಲಿಯಾನಾ ಗರ್ಭಿಣಿಯಾಗಿದ್ದು, ಬ್ಯಾಕ್ ಟು ಬ್ಯಾಕ್ ಪೊಟೋಗಳ ಮೂಲಕ ಸಖತ್ ಸದ್ದು ಮಾಡುತ್ತಿದ್ದಾರೆ.

ನಟಿ ಇಲಿಯಾನಾ ಪೋಕಿರಿ ಸಿನೆಮಾದ ಮೂಲಕ ಟಾಲಿವುಡ್ ನಲ್ಲಿ ಓವರ್‍ ನೈಟ್ ಸ್ಟಾರ್‍ ಆದರು. ಆಕೆ ಸೊಂಟದ ಮೂಲಕ ಅನೇಕ ಯುವಕರ ಕ್ರಷ್ ಆದರು. ಅನೇಕ ಸೂಪರ್‍ ಹಿಟ್ ಸಿನೆಮಾಗಳಲ್ಲಿ ನಟಿಸಿದಂತಹ ಗೋವಾ ಬ್ಯೂಟಿ ಇಲಿಯಾನಾ ಕೆರಿಯರ್‍ ಪೀಕ್ ಲೆವೆಲ್ ನಲ್ಲಿರುವಾಗಲೇ ಆಕೆ ತೆಗೆದುಕೊಂಡ ಕೆಲವು ತಪ್ಪು ನಿರ್ಣಯಗಳ ಕಾರಣದಿಂದ ಆಕೆಯ ಕೆರಿಯರ್‍ ಫೇಡ್ ಔಟ್ ಆಗಿಬಿಟ್ಟಿತ್ತು. ಬಾಲಿವುಡ್ ಸಿನಿಮಾಗಳ ಮೇಲೆ ಕಣ್ಣಿಟ್ಟು ಸ್ಟಾರ್‍ ಆಗಲು ಕನಸುಗಳನ್ನು ಕಂಡರು. ಆದರೆ ಆಕೆ ಬಾಲಿವುಡ್ ನಲ್ಲಿ ನಟಿಸಿದ ಸಿನೆಮಾಗಳು ಮಕಾಡೆ ಮಲಗಿದ ಹಿನ್ನೆಲೆಯಲ್ಲಿ ಹಾಗೂ ಲವ್, ಅಫೈರ್‍ ಹಾಗೂ ಬ್ರೇಕಪ್ ಕಾರಣಗಳಿಂದ ಆಕೆ ಡಿಪ್ರೆಷನ್ ಗೆ ಸಹ ಹೋಗಿದ್ದರು. ಸುಮಾರು ವರ್ಷಗಳ ಬಳಿಕ ಆಕೆ ಮತ್ತೆ ಸಿನೆಮಾಗಳಲ್ಲಿ ಅವಕಾಶಗಳಿಗಾಗಿ ಪ್ರಯತ್ನಗಳನ್ನು ಮಾಡಿದ್ದರು. ಅವಕಾಶ ಸಿಕ್ಕಾಗ ಸಿನೆಮಾಗಳಲ್ಲಿ ನಟಿಸುತ್ತಾ ಕೆರಿಯರ್‍ ಸಾಗಿಸುತ್ತಿದ್ದರು.

ಇನ್ನೂ ಇತ್ತಿಚಿಗೆ ಇಲಿಯಾನಾ ಗರ್ಭಿಣಿಯಾಗಿದ್ದ ವಿಚಾರವನ್ನು ಹಂಚಿಕೊಂಡಿದ್ದರು. ಈ ವಿಚಾರವನ್ನು ಆಕೆಯೇ ತನ್ನ ಸೋಷಿಯಲ್ ಮಿಡಿಯಾ ಖಾತೆಯಲ್ಲಿ ಹಂಚಿಕೊಂಡಿದ್ದರು. ಈ ವಿಚಾರ ಕೇಳಿದ ಎಲ್ಲರೂ ಶಾಕ್ ಆಗಿದ್ದರು. ಅದಕ್ಕೆ ಕಾರಣ ಇಲಿಯಾನಾ ಇನ್ನೂ ಮದುವೆಯಾಗಿಲ್ಲ. ಮದುವೆಗೂ ಮುಂಚೆಯೇ ಆಕೆ ಗರ್ಭಿಣಿಯಾಗಿದ್ದಾಗಿ ಘೋಷಣೆ ಮಾಡಿದ್ದು ಎಲ್ಲರೂ ಶಾಕ್ ಆಗುವಂತೆ ಮಾಡಿತ್ತು. ಇನ್ನೂ ಇಲಿಯಾನಾ ಗರ್ಭಕ್ಕೆ ಕಾರಣ ಯಾರು. ಒಂದು ವೇಳೆ ನಿಗೂಡವಾಗಿ ಮದುವೆಯಾದರೇ ಎಂಬ ಪ್ರಶ್ನೆಗಳೂ ಸಹ ಎದುರಾಗಿವೆ. ಬಳಿಕ ಆಕೆ ತನ್ನ ಬೇಬಿ ಬಂಪ್ ಪೊಟೋಗಳನ್ನು ಸಹ ಹಂಚಿಕೊಳ್ಳುತ್ತಿದ್ದಾರೆ. ಇದೀಗ ಆಕೆ ಕಾರಿನಲ್ಲಿ ಕುಳಿತು ಮತ್ತೊಮ್ಮೆ ಹಾಟ್ ಪೋಸ್ ಕೊಟ್ಟಿದ್ದಾರೆ. ಈ ಪೊಟೋಗೆ ಆಕೆ ಸನ್ಸ್ ಔಟ್, ಬಂಪ್ಸ್ ಔಟ್ ಎಂಬ ಕ್ಯಾಪ್ಷನ್ ಕೊಟ್ಟಿದ್ದಾರೆ. ಇನ್ನೂ ಆಕೆ ಗರ್ಭಿಣಿಯಾದರೂ ಸಹ ಸಖತ್ ಹಾಟ್ ಆಗಿ ಕಾಣಿಸಿಕೊಂಡಿದ್ದು, ಈ ಪೊಟೋ ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ.

ಇನ್ನೂ ಇಲಿಯಾನಾ ಹಾಗೂ ಕತ್ರಿನಾ ಕೈಫ್ ಸಹೋದರ ಸೆಬಾಸ್ಟಿಯನ್ ಜೊತೆಗೆ ಡೇಟಿಂಗ್ ನಡೆಸುತ್ತಿದ್ದರು ಎಂಬ ಸುದ್ದಿಗಳು ಈ ಹಿಂದೆ ಕೇಳಿಬಂದಿತ್ತು, ಆತನೇ ಇಲಿಯಾನಾ ಗರ್ಭಕ್ಕೆ ಕಾರಣ ಇರಬಹುದೆಂದು ಹೇಳಲಾಗುತ್ತಿದೆ. ಇನ್ನೂ ಇಲಿಯಾನಾ ಈ ಬಗ್ಗೆ ಯಾವಾಗ ಮಾಹಿತಿ ನೀಡುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.

Most Popular

To Top