ಬಾಲಯ್ಯ ಸಿನೆಮಾದಲ್ಲಿ ತಮನ್ನಾ ಭಾಟಿಯಾ ಐಟಂ ಸಾಂಗ್ ಬಗ್ಗೆ ಸ್ಪಷ್ಟನೆ, ಆಕೆ ಹೇಳಿದ್ದೇನು ಗೊತ್ತಾ?

ಸುಮಾರು ವರ್ಷಗಳಿಂದ ಸೌತ್ ಸಿನಿರಂಗದಲ್ಲಿ ಗ್ಲಾಮರಸ್ ಡ್ಯಾನ್ಸ್ ಮೂಲಕ ಅನೇಕ ಯುವಕರ ಕನಸಿನ ರಾಣಿಯಾದ ತಮನ್ನಾ ಪಡೆದುಕೊಂಡಷ್ಟು ಕ್ರೇಜ್ ಬೇರೆ ಯಾವುದೇ ನಟಿ ಪಡೆದುಕೊಳ್ಳಲಿಲ್ಲ. ತನ್ನ ಗ್ಲಾಮರ್‍ ಮೂಲಕವೇ ಬೆಳ್ಳಿಪೆರದೆಯಲ್ಲಿ ಸಖತ್ ಸದ್ದು ಮಾಡಿದ್ದರು. ಪವನ್ ಕಲ್ಯಾಣ್, ಪ್ರಭಾಸ್, ಮಹೇಶ್ ಬಾಬು, ಎನ್.ಟಿ.ಆರ್‍, ಅಲ್ಲು ಅರ್ಜುನ್, ರಾಮ್ ಚರಣ್ ಸೇರಿದಂತೆ ಅನೇಕ ಸ್ಟಾರ್‍ ಗಳ ಜೊತೆ ನಟಿಸಿ ಫೇಮ್ ದಕ್ಕಿಸಿಕೊಂಡಿದ್ದಾರೆ. ಕೆಲವು ದಿನಗಳಿಂದ ತಮನ್ನಾ ನಂದಮೂರಿ ಬಾಲಕೃಷ್ಣರವರ NBK108 ಸಿನೆಮಾದಲ್ಲಿ ಐಟಂ ಸಾಂಗ್ ಮಾಡಲಿದ್ದಾರೆ ಎಂಬ ಸುದ್ದಿ ಕೇಳಿಬರುತ್ತಿದ್ದು, ಇದೀಗ ಈ ಬಗ್ಗೆ ಆಕೆ ಸ್ಪಷ್ಟನೆ ಕೊಟ್ಟಿದ್ದಾರೆ.

ಸೌತ್ ಸಿನಿರಂಗದಲ್ಲಿ ಮಿಲ್ಕೀ ಬ್ಯೂಟಿ ಎಂದೇ ಖ್ಯಾತಿ ಪಡೆದ ತಮನ್ನಾ ಅನೇಕ ಸಿನೆಮಾಗಳ ಮೂಲಕ ಖ್ಯಾತಿ ಪಡೆದುಕೊಂಡಿದ್ದಾರೆ. ದಶಕಗಳಿಂದ ಆಕೆ ಸಿನಿರಂಗದಲ್ಲಿ ಮುನ್ನುಗ್ಗುತ್ತಾ ಗ್ಲಾಮರಸ್ ಲುಕ್ಸ್ ನೊಂದಿಗೆ ಹಾಗೂ ಅಭಿನಯದೊಂದಿಗೆ ಸಕ್ಸಸ್ ಪುಲ್ ನಟಿಯಾಗಿದ್ದಾರೆ. ಗ್ಲಾಮರಸ್ ರೋಲ್ಸ್ ಗಳಲ್ಲದೇ ವಿಭಿನ್ನ ಪಾತ್ರಗಳನ್ನೂ ಸಹ ಪೋಷಣೆ ಮಾಡುತ್ತಾ ಭಾರಿ ಫಾಲೋಯಿಂಗ್ ಕ್ರೇಜ್ ಪಡೆದುಕೊಂಡಿದ್ದಾರೆ. ಇನ್ನೂ ತಮನ್ನಾ ಈ ಹಿಂದೆ ಅಲ್ಲುಡು ಸೀನು, ಸ್ಪೀಡುನ್ನೋಡು, ಸರಿಲೇರು ನೀಕೆವ್ವರು, ಗಣಿ,ಜೈ ಲವಕುಶ ಸೇರಿದಂತೆ ಕೆಲವೊಂದು ಸಿನೆಮಾಗಳಲ್ಲಿ ಸ್ಪೇಷಲ್ ಸಾಂಗ್ ಗಳ ಮೂಲಕ ಭಾರಿ ಕ್ರೇಜ್ ಪಡೆದುಕೊಂಡಿದ್ದರು. ಈ ಹಾದಿಯಲ್ಲೇ ಕೆಲವು ದಿನಗಳಿಂದ ತಮನ್ನಾ ನಂದಮೂರಿ ಬಾಲಕೃಷ್ಣ ರವರ NBK108 ಸಿನೆಮಾದಲ್ಲಿ ಸ್ಪೇಷಲ್ ಸಾಂಗ್ ಮಾಡಲಿದ್ದಾರೆ. ಅದಕ್ಕಾಗಿ ಭಾರಿ ಸಂಭಾವನೆಯನ್ನು ಸಹ ಡಿಮ್ಯಾಂಡ್ ಮಾಡುತ್ತಿದ್ದಾರೆ ಎಂಬ ಸುದ್ದಿ ಜೋರಾಗಿ ಕೇಳಿಬರುತ್ತಿತ್ತು.

ಇನ್ನೂ ಈ ರೂಮರ್‍ ಬಗ್ಗೆ ತಮನ್ನಾ ರಿಯಾಕ್ಟ್ ಆಗಿದ್ದಾರೆ. ನಿರ್ದೇಶಕ ಅನೀಲ್ ರಾವಿಪೂಡಿ ನಂದಮೂರಿ ಬಾಲಕೃಷ್ಣ ರವರ ಜೊತೆಗೆ ಕೆಲಸ ಮಾಡಲು ನಾನು ಸದಾ ಸಂತೋಷದಿಂದ ಭಾವಿಸುತ್ತೇನೆ. ನನಗೆ ಅವರಿಬ್ಬರ ಬಗ್ಗೆ ತುಂಬಾ ಗೌರವವಿದೆ. ಆದರೆ ಅವರ ಸಿನೆಮಾದಲ್ಲಿ ನಾನು ಒಂದು ಹಾಡಿನಲ್ಲಿ ನಟಿಸುತ್ತಿರುವುದಾಗಿ ಬರುತ್ತಿರುವ ಪ್ರಚಾರದಲ್ಲಿ ಯಾವುದೇ ಸತ್ಯಾಂಶವಿಲ್ಲ. ಆ ಸುದ್ದಿಯನ್ನು ಕೇಳಿ ನನಗೆ ತುಂಬಾ ನೋವುಂಟು ಮಾಡಿದೆ. ಅಂತಹ ಸುದ್ದಿಗಳನ್ನು ಹೇಳುವ ಮೊದಲು ಖಚಿತ ಮಾಹಿತಿ ತಿಳಿದುಕೊಳ್ಳಿ ಎಂದು ಹೇಳಿದ್ದಾರೆ.  ಆ ಮೂಲಕ NBK108 ಸಿನೆಮಾದಲ್ಲಿ ತಮನ್ನಾ ಸ್ಪೇಷಲ್ ಸಾಂಗ್ ಇಲ್ಲ ಎಂದು ಕ್ಲಾರಿಟಿ ಕೊಟ್ಟಿದ್ದಾರೆ. ಇನ್ನೂ NBK108 ಸಿನೆಮಾದಲ್ಲಿ ಕಾಜಲ್ ಅಗರ್ವಾಲ್ ಹಾಗೂ ಶ್ರೀಲೀಲಾ ನಟಿಸುತ್ತಿದ್ದಾರೆ. ದಸರಾ ಹಬ್ಬದ ಅಂಗವಾಗಿ ಈ ಸಿನೆಮಾ ಪ್ರೇಕ್ಷಕರ ಮುಂದೆ ಬರಲಿದೆ ಎನ್ನಲಾಗುತ್ತಿದೆ.

ಇನ್ನೂ ತಮನ್ನಾ ಭಾಟಿಯಾ ಸಹ ಕ್ರೇಜಿ ಸಿನೆಮಾಗಳ ಮೂಲಕ ಮುನ್ನುಗ್ಗುತ್ತಿದ್ದಾರೆ. ಮೆಗಾಸ್ಟಾರ್‍ ಚಿರಂಜೀವಿಯವರ ಜೊತೆಗೆ ಭೋಳಾಶಂಕರ್‍, ತಮಿಳಿನಲ್ಲಿ ಸೂಪರ್‍ ಸ್ಟಾರ್‍ ರಜನಿಕಾಂತ್ ರವರ ಜೊತೆಗೆ ಜೈಲರ್‍ ಸಿನೆಮಾದಲ್ಲಿ ಆಕೆ ಬ್ಯುಸಿಯಾಗಿದ್ದಾರೆ. ಇದರ ಜೊತೆಗೆ ಆಕೆ ಮಲಯಾಳಂನಲ್ಲೂ ಸಹ ನಟಿಸುತ್ತಿದ್ದಾರೆ.