Film News

ಸಾಯಿ ಪಲ್ಲವಿ ಮೇಕಪ್ ಮಾಡಿಕೊಳ್ಳದೇ ಇರೋದಕ್ಕೆ ಅದೇ ಕಾರಣವಂತೆ, ಆಕೆಗೆ ಆ ಆರೋಗ್ಯ ಸಮಸ್ಯೆಯಂತೆ….!

ಸಿನಿರಂಗದಲ್ಲಿ ಅನೇಕ ನಟಿಯರು ವಿವಿಧ ಆರೋಗ್ಯ ಸಮಸ್ಯೆಗಳ ಕಾರಣದಿಂದ ಬಳಲುತ್ತಿರುತ್ತಾರೆ. ಆದರೆ ಅವರ ಸಮಸ್ಯೆಗಳ ಬಗ್ಗೆ ಯಾರೂ ಸಹ ಹೇಳಿಕೊಳ್ಳುವುದಿಲ್ಲ. ಕೆಲವೊಮ್ಮೆ ನಟಿಯರ ಆರೋಗ್ಯ ಸಮ್ಯೆಯ ಬಗ್ಗೆ ಅನೇಕ ರೂಮರ್‍ ಗಳು ಕೇಳಿಬರುತ್ತಿರುತ್ತದೆ. ಇದೀಗ ನ್ಯಾಚುರಲ್ ಬ್ಯೂಟಿ ಎಂದೇ ಖ್ಯಾತಿ ಪಡೆದುಕೊಂಡ ಸಾಯಿ ಪಲ್ಲವಿ ಸಹ ಅಂತಹ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದಾರಂತೆ. ಆ ಕಾರಣದಿಂದಲೇ ಆಕೆ ಮೇಕಪ್ ಸಹ ಮಾಡಿಕೊಳ್ಳುವುದಿಲ್ಲವಂತೆ. ಈ ರೀತಿಯ ಸುದ್ದಿಯೊಂದು ಇದೀಗ ಸೋಷಿಯಲ್ ಮಿಡಿಯಾದಲ್ಲಿ ಕೇಳಿಬರುತ್ತಿದೆ.

ಸಿನಿರಂಗದ ಹಿರೋಯಿನ್ ಗಳ ಪೈಕಿ ಸಾಯಿ ಪಲ್ಲವಿ ತುಂಬಾನೆ ವಿಭಿನ್ನ ಎಂದು ಹೇಳಬಹುದು. ಬಂದ ಅವಕಾಶಗಳನ್ನು ಒಪ್ಪಿಕೊಳ್ಳದೇ ಹಿರೋಯಿನ್ ಪಾತ್ರಕ್ಕೆ ಹಾಗೂ ನಟನಗೆ ಸ್ಕೋಪ್ ಇರುವಂತಹ ಸಿನೆಮಾಗಳಲ್ಲಿ ಮಾತ್ರ ನಟಿಸುತ್ತಿದ್ದಾರೆ. ಯಾವುದೇ ಸ್ಟಾರ್‍ ನಟನಾದರೂ ಸಹ ನಟನೆಗೆ ಪ್ರಾಧಾನ್ಯತೆಯಿಲ್ಲವಾದರೇ ಆಕೆ ನೇರವಾಗಿಯೇ ಆ ಆಫರ್‍ ಅನ್ನು ರಿಜೆಕ್ಟ್ ಮಾಡುತ್ತಾರೆ. ಈ ಹಿಂದೆ ಪ್ರಿನ್ಸ್ ಮಹೇಶ್ ಬಾಬು ರವರ ಸಿಎನಮಾಗೂ ಸಹ ಆಕೆ ನೋ ಎಂದು ಹೇಳಿದ್ದರೆಂಬ ಸುದ್ದಿ ಸಹ ಕೇಳಿಬಂದಿತ್ತು. ಇದೀಗ ಸಾಯಿ ಪಲ್ಲವಿ ಏತಕ್ಕಾಗಿ ಮೇಕಪ್ ಮಾಡಿಕೊಳ್ಳುವುದಿಲ್ಲ. ಆಕೆಗೆ ಏನಾದರೂ ಆರೋಗ್ಯ ಸಮಸ್ಯೆ ಇದೆಯಾ ಎಂಬ ವಿಚಾರವೊಂದು ಸೋಷಿಯಲ್ ಮಿಡಿಯಾದಲ್ಲಿ ಜೋರಾದ ಚರ್ಚೆ ನಡೆಯುತ್ತಿದೆ.

ಇನ್ನೂ ನಟಿ ಸಾಯಿಪಲ್ಲವಿ ಪ್ರಾರಂಭದಿಂದಲೂ ಮೇಕಪ್ ನಿಂದ ದೂರವೇ ಉಳಿದಿದ್ದಾರೆ. ಆಕೆ ಆ ರೀತಿಯಾಗಿರಲು ಒಂದು ಕಾರಣವಿದೆ ಎನ್ನಲಾಗುತ್ತಿದೆ. ಸಾಯಿ ಪಲ್ಲವಿಗೆ ಕೆಲವು ಚರ್ಮ ಸಮಸ್ಯೆಗಳಿದೆಯಂತೆ. ಮೇಕಪ್ ಉತ್ಪನ್ನಗಳನ್ನು ಬಳಸಿದರೇ ಆಕೆ ಚರ್ಮಕ್ಕೆ ತುಂಬಾ ಹಾನಿಯಾಗಲಿದೆಯಂತೆ. ಜೊತೆಗೆ ಕೆಲವೊಂದು ಸೈಡ್ ಎಫೆಕ್ಟ್ ಸಹ ಆಗುತ್ತದೆಯಂತೆ. ಮೊದಲನೇ ಸಿನೆಮಾದಿಂದಲೇ ಆಕೆ ಮೇಕಪ್ ಇಲ್ಲದೇ ನಟಿಸುತ್ತಿದ್ದಾರೆ. ಆಕೆ ಸಿನೆಮಾಗೆ ಒಪ್ಪಿಗೆ ನೀಡುವುದಕ್ಕೂ ಮುಂಚೆಯೇ ಈ ಕಂಡಿಷನ್ ಹಾಕುತ್ತಾರಂತೆ. ಸದ್ಯ ಈ ರೀತಿಯ ಸುದ್ದಿಯೊಂದು ಸೊಷಿಯಲ್ ಮಿಡಿಯಾದಲ್ಲಿ ಕೇಳಿಬರುತ್ತಿದೆ. ಈ ಸುದ್ದಿಯಲ್ಲಿ ಎಷ್ಟರ ಮಟ್ಟಿಗೆ ಸತ್ಯಾಂಶ ಇದೆ ಎಂಬುದು ಇನ್ನಷ್ಟೆ ತಿಳಿದು ಬರಬೇಕಿದೆ. ಇನ್ನೂ ಈ ಬಗ್ಗೆ ಸಾಯಿ ಪಲ್ಲವಿ ಯಾವ ರೀತಿಯಲ್ಲಿ ರಿಯಾಕ್ಟ್ ಆಗುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.

ಇನ್ನೂ ಸಾಯಿ ಪಲ್ಲವಿ ಮೇಕಪ್ ಲೆಸ್ ಆಗಿ ನಟಿಸಿದರೂ ಸಹ ಆಕೆಗೆ ಭಾರಿ ಫ್ಯಾನ್ ಫಾಲೋಯಿಂಗ್ ಇದೆ. ಸ್ಟಾರ್‍ ನಟರಂತೆ ಆಕೆಗೂ ದೊಡ್ಡ ಮಟ್ಟದ ಅಭಿಮಾನಿ ಸಂಘಟಗಳು ಸಹ ಇದೆ. ಇನ್ನೂ ಆಕೆ ಅಭಿನಯದ ಪಾತ್ರಗಳು ಎಷ್ಟೇ ಕಷ್ಟವಾದರೂ ಸಹ ಪಾತ್ರಕ್ಕೆ ಜೀವ ಕೊಟ್ಟು ನಟಿಸುತ್ತಾರೆ. ಆದರೆ ಇತ್ತೀಚಿಗೆ ಆಕೆ ಸಿನೆಮಾಗಳಲ್ಲಿ ಕಾಣಿಸಿಕೊಳ್ಳುವುದು ಕಡಿಮೆಯಾಗಿದೆ.

Most Popular

To Top