Film News

ವಿಭಿನ್ನವಾದ ಸೀರೆಯಲ್ಲಿ ಮೈಂಡ್ ಬ್ಲಾಕಿಂಗ್ ಲುಕ್ಸ್ ಕೊಟ್ಟ ಹಾಟ್ ಬ್ಯೂಟಿ ಹೆಬ್ಬಾ ಪಟೇಲ್…!

ಮೊದಲನೇ ಸಿನೆಮಾದ ಮೂಲಕವೇ ಅನೇಕರ ಯುವಕರ ಕ್ರಷ್ ಆದ ನಟಿಯರಲ್ಲಿ ಹೆಬ್ಬಾ ಪಟೇಲ್ ಒಬ್ಬರಾಗಿದ್ದಾರೆ. ಕುಮಾರಿ 21F ಸಿನೆಮಾದಲ್ಲಿ ಆಕೆಯ ಬೋಲ್ಡ್ ನೆಸ್ ಹಾಗೂ ಅಭಿನಯಕ್ಕೆ ಯುವಕರು ಫಿದಾ ಆಗಿದ್ದರು. ಬಳಿಕ ಆಕೆ ಸ್ಟಾರ್‍ ನಟಿಯಾಗುತ್ತಾರೆ ಎಂದು ಎಲ್ಲರೂ ಭಾವಿಸಿದ್ದರು. ಆದರೆ ಆಕೆ ಮಾತ್ರ ಸ್ಟಾರ್‍ ಡಮ್ ಗಿಟ್ಟಿಸಿಕೊಳ್ಳುವಲ್ಲಿ ವಿಫಲರಾದರು. ಆದರೆ ಬ್ಯಾಕ್ ಟು ಬ್ಯಾಕ್ ಸಿನೆಮಾ ಅಫರ್‍ ಗಳನ್ನು ಗಿಟ್ಟಿಸಿಕೊಳ್ಳುತ್ತಾ ಸಾಗುತ್ತಿದ್ದಾರೆ. ಜೊತೆಗೆ ಸೋಷಿಯಲ್ ಮಿಡಿಯಾದಲ್ಲೂ ಸಹ ಬ್ಯುಸಿಯಾಗಿದ್ದಾರೆ. ಸೋಷಿಯಲ್ ಮಿಡಿಯಾದಲ್ಲಿ ಹಾಟ್ ಪೊಟೋಗಳ ಮೂಲಕ ಸಖತ್ ಸದ್ದು ಮಾಡುತ್ತಿರುತ್ತಾರೆ.

ಸಿನಿರಂಗದಲ್ಲಿ ಕೆಲವು ನಟಿಯರು ಸ್ಟಾರ್‍ ಡಮ್ ದಕ್ಕಿಸಿಕೊಳ್ಳದೇ ಇದ್ದರು, ಯುವಜನತೆಯಲ್ಲಿ ದೊಡ್ಡ ಕ್ರೇಜ್ ಹೊಂದಿರುತ್ತಾರೆ. ದೊಡ್ಡ ಸಂಖ್ಯೆಯಲ್ಲಿ ಅಭಿಮಾನಿಗಳನ್ನು ಸಹ ಹೊಂದಿರುತ್ತಾರೆ. ಈ ಸಾಲಿಗೆ ಯಂಗ್ ಬ್ಯೂಟಿ ಹೆಬ್ಬಾ ಪಟೇಲ್ ಸಹ ಸೇರಿಕೊಳ್ಳುತ್ತಾರೆ. ಈಕೆ ಸ್ಟಾರ್‍ ನಟಿಯಾಗದೇ ಇದ್ದರೂ ಸಹ ತನ್ನದೇ ಆದ ಫ್ಯಾನ್ ಫಾಲೋಯಿಂಗ್ ಪಡೆದುಕೊಂಡಿದ್ದಾರೆ. ಕುಮಾರಿ 21ಎಫ್ ಸಿನೆಮಾದಲ್ಲಿ ಆಕೆಯ ನಟನೆ ಹಾಗೂ ಗ್ಲಾಮರ್‍ ಪ್ರದರ್ಶನ ಮಾಡಿ ಪುಲ್ ಫೇಮ್ ದಕ್ಕಿಸಿಕೊಂಡರು. ಇನ್ನೂ ಹೆಬ್ಬಾ ಪಟೇಲ್ ಈಡೋರಕಂ, ಆಡೋರಕಂ, ಎಕ್ಕರಿಡಿಕಿ ಪೊತಾವು ಚಿನ್ನವಾಡ ಮೊದಲಾದ ಹಿಟ್ ಸಿನೆಮಾಗಳಲ್ಲಿ ಕಾಣಿಸಿಕೊಂಡಿದ್ದರು. ಇನ್ನೂ ಈಕೆಯ ಗ್ಲಾಮರ್‍ ಗೆ ಅನೇಕ ಯುವಜನತೆಯ ಕನಸಿನ ರಾಣಿಯಾಗಿಬಿಟ್ಟಿದ್ದಾರೆ. ಇನ್ನೂ ಸೋಷಿಯಲ್ ಮಿಡಿಯಾದಲ್ಲಿ ಆಕ್ಟೀವ್ ಆಗಿರುವ ಹೆಬ್ಬಾ ಹಾಟ್ ಪೊಟೋಗಳ ಮೂಲಕ ಎಲ್ಲರ ಗಮನ ಸೆಳೆಯುತ್ತಿದ್ದಾರೆ.

ನಟಿ ಹೆಬ್ಬಾ ಪಟೇಲ್ ಸೋಷಿಯಲ್ ಮಿಡಿಯಾದಲ್ಲಿ ಕೆಲವೊಂದು ಪೊಟೋಗಳು ಹಲ್ ಚಲ್ ಸೃಷ್ಟಿ ಮಾಡುತ್ತಿವೆ. ಆಕೆ ತನ್ನ ಇನ್ಸ್ಟಾಗ್ರಾಂನಲ್ಲಿ ಸ್ಟನ್ನಿಂಗ್ ಪೊಟೋಸ್ ಶೇರ್‍ ಮಾಡಿದ್ದಾರೆ. ವಿಭಿನ್ನವಾದ ಸೀರೆಯಲ್ಲಿ ಮೈಂಡ್ ಬ್ಲೋಯಿಂಗ್ ಪಿಕ್ಸ್ ಹಂಚಿಕೊಂಡಿದ್ದಾರೆ. ಈ ಪೊಟೋಗಳಲ್ಲಿ ಆಕೆಯ ತುಟಿ, ಕಿಲ್ಲಿಂಗ್ ಲುಕ್ಸ್ ಹೈಲೈಟ್ ಆಗುತ್ತಿದೆ. ಹೊಸ ವರ್ಷಕ್ಕೆ ಹೆಬ್ಬಾ ತನ್ನ ಅಭಿಮಾನಿಗಳಿಗೆ ಹಾಟ್ ಪೊಟೋಸ್ ಮೂಲಕ ಶುಭಾಷಯಗಳನ್ನು ಕೋರಿದ್ದಾರೆ. ಇನ್ನೂ ಆಕೆಯ ಈ ಲೇಟೆಸ್ಟ್ ಪೊಟೋಗಳಿಗೆ ಅಭಿಮಾನಿಗಳು ಹಾಟ್ ಕಾಮೆಂಟ್ ಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಅದರಲ್ಲೊಬ್ಬರು ಆಕೆಯ ತುಟಿಯನ್ನು ನೋಡುತ್ತಾ ಹಾಗೇ ಇರಬಹುದು ಎಂದೂ, ಮತ್ತೊಬ್ಬರು ಹೆಬ್ಬಾ ಕಣ್ಣಿನಲ್ಲೇ ಮೈಂಡ್ ಬ್ಲಾಕ್ ಮಾಡುತ್ತಿದ್ದಾರೆ ಎಂದು ವಿವಿಧ ರೀತಿಯ ಕಾಮೆಂಟ್ ಗಳನ್ನು ಹಂಚಿಕೊಳ್ಳುತ್ತಿದ್ದಾರೆ.

ಇನ್ನೂ ಹೆಬ್ಬಾ ಪಟೇಲ್ ಕೆಲವೊಂದು ಸಿನೆಮಾಗಳ ಮೇಲೆ ತುಂಬಾ ನಿರೀಕ್ಷೆಯನ್ನು ಇಟ್ಟುಕೊಂಡಿದ್ದಾರೆ. ಆದರೆ ಆ ಸಿನೆಮಾಗಳು ಸೋತ ಕಾರಣದಿಂದ ಆಕೆಗೆ ಅವಕಾಶಗಳು ಕಡಿಮೆಯಾಯಿತು ಎನ್ನಲಾಗುತ್ತಿದೆ. ಆಕೆ ಕೊನೆಯದಾಗಿ ಒದೆಲಾ ರೈಲ್ವೇ ಸ್ಟೇಷನ್ ಎಂಬ ಸಿನೆಮಾದಲ್ಲಿ ಡಿ ಗ್ಲಾಮರ್‍ ರೋಲ್ ನಲ್ಲಿ ಕಾಣಿಸಿಕೊಂಡಿದ್ದರು. ಇತ್ತೀಚಿಗೆ ಆಕೆ ಐಟಂ ಸಾಂಗ್ಸ್ ಗಳಲ್ಲೂ ಸಹ ನಟಿಸುವ ಮೂಲಕ ಫಾಲೋಯಿಂಗ್ ಬೆಳೆಸಿಕೊಳ್ಳುತ್ತಿದ್ದಾರೆ.

Most Popular

To Top