Film News

ಆ ಇಬ್ಬರೂ ನಟಿಯರನ್ನೂ ಪ್ರಭಾಸ್ ಶಾಪಿಂಗ್ ಗೆ ಕರೆದುಕೊಂಡು ಹೋಗ್ತಾರಂತೆ, ಆ ನಟಿಯರು ಯಾರು ಗೊತ್ತಾ?

ತೆಲುಗು ಸಿನಿರಂಗದಲ್ಲಿ ಮೋಸ್ಟ್ ಎಲಿಜಿಬಲ್ ಬ್ಯಾಚಿಲರ್‍ ಆಗಿರುವ ಪ್ಯಾನ್ ಇಂಡಿಯಾ ಸ್ಟಾರ್‍ ಪ್ರಭಾಸ್ ಈ ಹಲವು ಸಿನೆಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಪ್ರಭಾಸ್ ಗೆ ವಯಸ್ಸು43 ಆದರೂ ಸಹ ಇನ್ನೂ ಮದುವೆಯಾಗಿಲ್ಲ. ಈ ಹಿಂದೆ ಪ್ರಭಾಸ್ ಹಾಗೂ ಅನುಷ್ಕಾ ಶೆಟ್ಟಿ ಮದುವೆ ನಡೆಯಲಿದೆ ಎಂಬ ರೂಮರ್‍ ಗಳು ಕೇಳಿಬಂತು. ನಟ ಪ್ರಭಾಸ್ ಅನ್ ಸ್ಟಾಪಬಲ್ ವಿತ್ ಎನ್.ಬಿ.ಕೆ-2 ಶೋನಲ್ಲಿ ಭಾಗಿಯಾಗಿದ್ದರು. ಈ ಶೋ ನಲ್ಲಿ ಪ್ರಭಾಸ್ ಅನೇಕ ವಿಚಾರಗಳನ್ನು ಹಂಚಿಕೊಂಡಿದ್ದಾರೆ.

ಇತ್ತಿಚಿಗಷ್ಟೆ ಪ್ರಭಾಸ್ ನಂದಮೂರಿ ಬಾಲಕೃಷ್ಣ ಹೋಸ್ಟ್ ಮಾಡುತ್ತಿರುವ ಅನ್ ಸ್ಟಾಪಬಲ್ ವಿತ್ ಎನ್.ಬಿ.ಕೆ-2 ಶೋನಲ್ಲಿ ಭಾಗಿಯಾಗಿದ್ದರು. ಈ ಶೋ ನಲ್ಲೇ ಪ್ರಭಾಸ್ ತನ್ನ ಮದುವೆ ಬಗ್ಗೆ ಬಾಯ್ಬಿಟ್ಟಿದ್ದರು.  ಶೋ ನಲ್ಲಿ ಬಾಲಕೃಷ್ಣ ಪ್ರಭಾಸ್ ಗೆ ಮದುವೆ ಯಾವಾಗ ಮಾಡಿಕೊಳ್ಳುತ್ತೀರಾ ಎಂದು ಕೇಳಿದ್ದರು. ಅದಕ್ಕೆ ಹಿಂದೆ ಮುಂದೆ ಯೋಚನೆ ಮಾಡದೇ ಸಲ್ಮಾನ್ ಖಾನ್ ಮದುವೆಯಾದ ಬಳಿಕ ಎಂದು ಫನ್ನಿಯಾಗಿ ಉತ್ತರ ನೀಡಿದ್ದರು. ಇದೀಗ ಮತ್ತೊಂದು ವಿಚಾರವೊಂದು ಸೋಷಿಯಲ್ ಮಿಡಿಯಾದಲ್ಲಿ ಹರಿದಾಡುತ್ತಿದೆ. ಇನ್ನೂ ಈ ಶೋನ ಒಂದು ಎಪಿಸೋಡ್ ಬಿಡುಗಡೆಯಾಗಿದ್ದು, ಈ ಸೋ ಸುಮಾರು ನೂರು ಮಿಲಿಯನ್ ಸ್ಟ್ರೀಮಿಂಗ್ ಮಿನಿಟ್ಸ್ ನೊಂದಿಗೆ ಭರ್ಜರಿಯಾಗಿ ಪ್ರದರ್ಶನವಾಗುತ್ತಿದೆ. ಆದರೆ ಇನ್ನೂ ಅನೇಕ ವಿಚಾರಗಳು ಮುಂದಿನ ಎಪಿಸೋಡ್ ನಲ್ಲಿ ತಿಳಿಯಲಿದೆ. ಈ ಎಪಿಸೋಡ್ ಪ್ರೊಮೋ ನ್ಯೂ ಇಯರ್‍ ಟ್ರೀಟ್ ಎಂಬಂತೆ ಆಹಾ ಒಟಿಟಿ ನೀಡಿದೆ.

ನೀವು ನೋಡಿದ್ದು ಉಗುರಿನಂಷ್ಟು, ನೋಡಬೇಕಾಗಿರುವುದು ಬೆಟ್ಟದಷ್ಟು ಎಂಬ ಕೊಟೇಷನ್ ಜೊತೆಗೆ ಈ ಪ್ರೋಮೊ ಬಿಡುಗಡೆಯಾಗಿದೆ. ಈ ಪ್ರೊಮೋ ಈಗಾಗಲೇ ಸಖತ್ ಹೈಪ್ ಕ್ರಿಯೇಟ್ ಮಾಡಿದೆ. ಈ ಎಪಿಸೋಡ್ ನಲ್ಲಿ ಪ್ರಭಾಸ್ ಹಾಗೂ ಗೋಪಿಚಂದ್ ರವರಿಗೆ ಅನೇಕ ಪ್ರಶ್ನೆಗಳನ್ನು ಕೇಳಿದ್ದಾರೆ ಬಾಲಕೃಷ್ಣ. ಇಬ್ಬರು ನಟಿಯರ ಪೊಟೊಗಳನ್ನು ತೋರಿಸಿ ಯಾರನ್ನು ಶಾಪಿಂಗ್ ಗೆ ಕರೆದುಕೊಂಡು ಹೋಗುತ್ತೀಯಾ ಎಂದು ಬಾಲಕೃಷ್ಣ ಕೇಳಿದ್ದಾರೆ. ಅದಕ್ಕೆ ಗೋಪಿಚಂದ್ ನನಗೆ ಮದುವೆಯಾಗಿದೆ ಎಂದು ಎಸ್ಕೇಪ್ ಆಗಲು ಪ್ರಯತ್ನಿಸಿದ್ದಾರೆ. ಜೊತೆಗೆ ಅನೇಕ ಪ್ರಶ್ನೆಗಳು ಸಹ ಗೋಪಿಚಂದ್ ರವರಿಗೆ ಕೇಳಿದ್ದಾರೆ. ಈ ವೇಳೆ ಕೆಲವೊಂದು ಪ್ರಶ್ನೆಗಳಿಂದ ತಪ್ಪಿಸಿಕೊಳ್ಳಲು ಗೋಪಿಚಂದ್ ಪ್ರಭಾಸ್ ರವರನ್ನು ಎಳೆದಿದ್ದಾರೆ.

ಬಾಲಕೃಷ್ಣ ಇಬ್ಬರು ನಟಿಯರನ್ನು ತೋರಿಸಿ ಇವರಲ್ಲಿ ಯಾರನ್ನು ಶಾಪಿಂಗ್ ಗೆ ಕರೆದುಕೊಂಡು ಹೋಗುತ್ತೀಯಾ ಎಂದು ಪ್ರಭಾಸ್ ಗೆ ಕೇಳಿದ್ದಾರೆ. ನಯನತಾರಾ ಹಾಗೂ ತಮನ್ನಾ ಪೊಟೋಗಳನ್ನು ತೋರಿಸಿ ಈ ಪ್ರಶ್ನೆಯನ್ನು ಕೇಳಿದ್ದಾರೆ. ಇಬ್ಬರನ್ನೂ ಶಾಪಿಂಗ್ ಗೆ ಕರೆದುಕೊಂಡು ಹೋಗುವುದಾಗಿ ಪ್ರಭಾಸ್ ಉತ್ತರ ನೀಡಿದ್ದಾರೆ. ಇನ್ನೂ ಅನೇಕ ವಿಚಾರಗಳನ್ನು ನಾವು ತಿಳಿಯಲು ಜನವರಿ 6 ರವರೆಗೆ ಕಾಯಬೇಕಿದೆ. ಅಂದೇ ಈ ಎಪಿಸೋಡ್ ಬಿಡುಗಡೆಯಾಗಲಿದೆ.

Most Popular

To Top