ರಣಬೀರ್-ಆಲಿಯಾ ರೊಮ್ಯಾನ್ಸ್ ಕಂಡು ನನಗೆ ಆ ಚಾನ್ಸ್ ಯಾವಾಗ ಎಂದ ವಿಷ್ಣು ಪ್ರಿಯಾ….!

Follow Us :

ತೆಲುಗು ಸಿನಿರಂಗದ ಹಾಟ್ ಆಂಕರ್‍ ಗಳಲ್ಲಿ ವಿಷ್ಣುಪ್ರಿಯಾ ಸಹ ಒಬ್ಬರಾಗಿದ್ದಾರೆ. ಪೋವೆ ಪೋರಾ ಎಂಬ ಶೋ ಮೂಲಕ ಯುವಕರಲ್ಲಿ ಭಾರಿ ಕ್ರೇಜ್ ಪಡೆದುಕೊಂಡ ಈಕೆ ಸದ್ಯ ಸಿನೆಮಾಗಳ ಮೇಲೂ ಸಹ ಪೋಕಸ್ ಇಡುತ್ತಿದ್ದಾರೆ. ಅವಕಾಶಗಳಿಗಾಗಿ ಕಾಯುತ್ತಿದ್ದಾರೆ. ಈ ಹಾದಿಯಲ್ಲೇ ಆಕೆ ಸೋಷಿಯಲ್ ಮಿಡಿಯಾದಲ್ಲಿ ಹಾಟ್ ಅಂಡ್ ಬೋಲ್ಡ್ ಪೊಟೋಶೂಟ್ಸ್ ಮೂಲಕ ಸದ್ದು ಮಾಡುತ್ತಿರುತ್ತಾರೆ. ಇದೀಗ ಆಕೆ ರಣವೀರ್‍ ಹಾಗೂ ಆಲಿಯಾ ರೊಮ್ಯಾನ್ಸ್ ಕಂಡು ನನಗೆ ಅಂತಹ ಚಾನ್ಸ್ ಯಾವಾಗ ಸಿಗುತ್ತೆ ಎಂದು ಕಾಮೆಂಟ್ ಮಾಡಿದ್ದಾರೆ.

ಆಂಕರ್‍ ಕಂ ನಟಿ ವಿಷ್ಣು ಪ್ರಿಯಾ ಸೋಷಿಯಲ್ ಮಿಡಿಯಾದಲ್ಲಿ ಸದಾ ಆಕ್ಟೀವ್ ಆಗಿರುತ್ತಾರೆ. ತನ್ನ ವೈಯುಕ್ತಿಕ ವಿಚಾರಗಳ ಬಗ್ಗೆ ಹಾಗೂ ಹಾಟ್ ಪೊಟೋಗಳನ್ನು ಹಂಚಿಕೊಳ್ಳುತ್ತಾ ಸುದ್ದಿಯಾಗುತ್ತಿರುತ್ತಾರೆ. ಜೊತೆಗೆ ಅನೇಕ ಬಾರಿ ಕೆಲವೊಂದು ಕಾಮೆಂಟ್ ಗಳನ್ನು ಮಾಡುತ್ತಾ ಟ್ರೋಲ್ ಸಹ ಆಗುತ್ತಿರುತ್ತಾರೆ. ಇನ್ನೂ ಈ ಹಿಂದೆ ಟಿವಿ ಶೋಗಳ ಮೂಲಕ ಬ್ಯುಸಿಯಾಗಿದ್ದ ವಿಷ್ಣು ಪ್ರಿಯಾ ಇದೀಗ ಡ್ಯಾನ್ಸ್ ಹಾಗೂ ಮ್ಯೂಜಿಕ್ ವಿಡಿಯೋಗಳ ಮೇಲೆ ಪೋಕಸ್ ಇಟ್ಟಿದ್ದಾರೆ. ಇದೀಗ ಆಕೆ ಬೋಲ್ಡ್ ಕಾಮೆಂಟ್ ಮಾಡುವ ಮೂಲಕ ಹಾಟ್ ಟಾಪಿಕ್ ಆಗಿದ್ದಾರೆ. ಬಾಲಿವುಡ್ ಸ್ಟಾರ್‍ ಜೋಡಿಯಾದ ರಣಬೀರ್‍ ಕಪೂರ್‍ ಹಾಗೂ ಆಲಿಯಾ ಭಟ್ ವಿಡಿಯೋ ಒಂದು ವೈರಲ್ ಆಗಿತ್ತು. ಈ ವಿಡಿಯೋದಲ್ಲಿ ಆಲಿಯಾ ರಣಬೀರ್‍ ಕಾರಿನಲ್ಲಿ ರೊಮ್ಯಾಂಟಿಕ್ ಆಗಿ ಕಾಣಿಸಿಕೊಂಡಿದ್ದಾರೆ. ಈ ವಿಡಿಯೋ ವನ್ನು ವಿಷ್ಣು ಪ್ರಿಯಾ ತನ್ನ ಇನ್ಸ್ಟಾ ಸ್ಟೇಟಸ್ ನಲ್ಲಿ ಹಂಚಿಕೊಂಡು ಬೋಲ್ಡ್ ಕಾಮೆಂಟ್ ಮಾಡಿದ್ದಾರೆ.

ಬಾಲಿವುಡ್ ಸ್ಟಾರ್‍ ಜೋಡಿ ಆಲಿಯಾ ಹಾಗೂ ರಣಬೀರ್‍ ರವರಿಗೆ ಮದುವೆಯಾಗಿ ಒಂದು ವರ್ಷ ಪೂರ್ಣಗೊಂಡಿದ್ದು, ಅವರಿಬ್ಬರೂ ಒಂದು ಪಾರ್ಟಿಯಲ್ಲಿ ಭಾಗಿಯಾಗಿದ್ದರು. ಪಾರ್ಟಿಯಿಂದ ಹೊರಬರುತ್ತಿದ್ದಾಗ ಅಭಿಮಾನಿಗಳು ಆಕೆಯ ಕಾರನ್ನು ಮುತ್ತಿಕೊಂಡಿದ್ದಾರೆ. ಹೊರಗಿದ್ದ ಅಭಿಮಾನಿಗಳಿಗೆ ರಣಬೀರ್‍ ಕಪೂರ್‍ ಧನ್ಯವಾದಗಳನ್ನು ಹೇಳಿದರು. ಬಳಿಕ ಆಲಿಯಾ ತನ್ನ ಪತಿಗೆ ಪ್ರೀತಿಯಿಂದ ಮುತ್ತಿಟ್ಟಿದ್ದಾರೆ. ಇನ್ನೂ ಈ ವಿಡಿಯೋ ತನ್ನ ಇನ್ಸ್ಟಾ ಖಾತೆಯಲ್ಲಿ ಶೇರ್‍ ಮಾಡಿರುವ ವಿಷ್ಣು ಪ್ರಿಯಾ ದೇವರೇ ಇಂತಹ ಮುತ್ತಿಡುವ ಚಾನ್ಸ್ ನನಗೆ ಯಾವಾಗ ಕೊಡುತ್ತೀಯಾ ಎಂದು ಬೋಲ್ಡ್ ಕಾಮೆಂಟ್ ಮಾಡಿದ್ದಾರೆ. ಇನ್ನೂ ಆಕೆ ಈ ಸ್ಟೋರಿ ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ

ಇನ್ನೂ ಈ ಪೋಸ್‌ಟ್ ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿದ್ದು, ಅಭಿಮಾನಿಗಳೂ ಸಹ ವಿವಿಧ ರೀತಿಯಲ್ಲಿ ಕಾಮೆಂಟ್ ಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಅಷ್ಟೊಂದು ವಿರಹ ತಾಳಲು ಆಗದೇ ಇದ್ದರೇ ಮದುವೆ ಮಾಡಿಕೊ ಎಂದು ಸಲಹೆಗಳನ್ನು ಸೂಚಿಸುತ್ತಿದ್ದಾರೆ. ಇನ್ನೂ ವಿಷ್ಣು ಪ್ರಿಯಾ ಆಗಾಗ ತನ್ನ ಮದುವೆಯ ಬಗ್ಗೆ ಸಹ ಕಾಮೆಂಟ್ ಗಳನ್ನು ಮಾಡುತ್ತಿರುತ್ತಾರೆ. ಇದೀಗ ಆಕೆ ತಾನು ಮುತ್ತಿಡಬೇಕೆಂಬ ಬಯಕೆನ್ನು ಹೊರಹಾಕಿರುವುದು ಸೋಷಿಯಲ್ ಮಿಡಿಯಾದಲ್ಲಿ ಹಾಟ್ ಟಾಪಿಕ್ ಆಗಿದೆ.