Film News

SSMB28 ಶೂಟಿಂಗ್ ಸೆಟ್ ನಿಂದ ಪೊಟೋ ಲೀಕ್, ಮಹೇಶ್ ಬಾಬು ಪೂಜಾ ಹೆಗ್ಡೆ ಪೊಟೋ ವೈರಲ್….!

ಸರ್ಕಾರು ವಾರಿ ಪಾಠ ಸಿನೆಮಾದ ಬಳಿಕ ಮಹೇಶ್ ಬಾಬು SSMB28 ಸಿನೆಮಾದಲ್ಲಿ ನಟಿಸುತ್ತಿದ್ದಾರೆ. ತ್ರಿವಿಕ್ರಮ್ ಶ್ರೀನಿವಾಸ್ ಹಾಗೂ ಮಹೇಶ್ ಬಾಬು ಕಾಂಬಿನೇಷನ್ ನಲ್ಲಿ ಈ ಸಿನೆಮಾ ಸೆಟ್ಟೇರಿದೆ. ಈ ಸಿನೆಮಾದಲ್ಲಿ ಮಹೇಶ್ ಬಾಬು ಗೆ ಜೋಡಿಯಾಗಿ ಪೂಜಾ ಹೆಗ್ಡೆ ನಟಿಸುತ್ತಿದ್ದಾರೆ. ಈ ಸಿನೆಮಾದ ಶೂಟಿಂಗ್ ಭರದಿಂದ ಸಾಗುತ್ತಿದ್ದು, ಇದೀಗ ಈ ಸಿನೆಮಾದ ಶೂಟಿಂಗ್ ನಿಂದ ಪೊಟೋ ಒಂದು ಲೀಕ್ ಆಗಿದೆ. ಈ ಪೊಟೋದಲ್ಲಿ ಮಹೇಶ್ ಬಾಬು ಹಾಗೂ ಪೂಜಾ ಹೆಗ್ಡೆ ಕಾಣಿಸಿಕೊಂಡಿದ್ದಾರೆ. ಈ ಪೊಟೋ ಇದೀಗ ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿದೆ.

ತ್ರಿವಿಕ್ರಮ್ ಶ್ರೀನಿವಾಸ್ ಹಾಗೂ ಮಹೇಶ್ ಬಾಬು ಕಾಂಬಿನೇಷನ್ ನಲ್ಲಿ ಈ ಸಿನೆಮಾ ಸೆಟ್ಟೇರಿದ್ದು, ಶೂಟಿಂಗ್ ಕೆಲವೊಂದು ಕಾರಣಗಳಿಂದ ತಡವಾಗಿತ್ತು. ಇದೀಗ ಶೂಟಿಂಗ್ ಸಹ ಭರದಿಂದ ಸಾಗುತ್ತಿದೆ. ಬ್ಯಾಕ್ ಟು ಬ್ಯಾಕ್ ಶೇಡ್ಯೂಲ್ಡ್ ಸಹ ಪೂರ್ಣಗೊಳಿಸುತ್ತಿದ್ದಾರೆ. ಇದೀಗ ಲೇಟೆಸ್ಟ್ ಶೆಡ್ಯೂಲ್ ನಡೆಯುತ್ತಿದ್ದು, ಪೊಟೋ ಒಂದು ಲೀಕ್ ಆಗಿದೆ. ಈಗಾಗಲೇ ಅನೇಕ ಬಾರಿ ಕೆಲವೊಂದು ಪೊಟೋಗಳು ಲೀಕ್ ಆಗಿದ್ದವು. ಮಹೇಶ್ ಬಾಬು ಲುಕ್ಸ್, ಗೆಟಪ್, ಲೊಕೇಷನ್ ಗಳು ಲೀಕ್ ಆಗಿತ್ತು. ಇನ್ನೂ ಇದರಿಂದ ಚಿತ್ರತಂಡ ಶಾಕ್ ಆಗಿತ್ತು. ಇದೀಗ ಮತ್ತೊಮ್ಮೆ ಪೊಟೋ ಒಂದು ಲೀಕ್ ಆಗಿದೆ. ಈ ಪೊಟೋದಲ್ಲಿ ಮಹೇಶ್ ಬಾಬು, ಪೂಜಾ ಹೆಗ್ಡೆ, ತ್ರಿವಿಕ್ರಮ್ ಶ್ರೀನಿವಾಸ್ ಇದ್ದಾರೆ. ಈ ಪೊಟೋ ಇದೀಗ ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ.

ಇನ್ನೂ SSMB28 ಚಿತ್ರತಂಡದಿಂದ ಈ ರೀತಿಯ ಲೀಕ್ ಗಳು ನಡೆಯುತ್ತಲೇ ಇದೆ. ಇಂತಹ ಪೊಟೋಗಳ ಲೀಕ್ ಕಾರಣದಿಂದ ಅಭಿಮಾನಿಗಳ ಜೊತೆಗೆ ನೆಟ್ಟಿಗರಿಗೂ ಸಹ ಒಳ್ಳೆಯ ಎನರ್ಜಿ ಬಂದು, ಸಿನೆಮಾದ ಮೇಲೆ ಮತಷ್ಟು ಹೈಪ್ ಕ್ರಿಯೇಟ್ ಆಗುತ್ತದೆ. ಇನ್ನೂ ಲೀಕ್ ಆದ ಪೊಟೋದಲ್ಲಿ ಮಹೇಶ್ ಬಾಬು ಗ್ರೀನ್ ಕಲರ್‍ ಚೆಕ್ಸ್ ಶರ್ಟ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಪೂಜಾ ಹೆಗ್ಡೆ ರೆಡ್ ಲೆಹಂಗಾದಲ್ಲಿ ಬ್ಯೂಟಿಪುಲ್ ಆಗಿ ಪೋಸ್ ಕೊಟ್ಟಿದ್ದಾರೆ. ಅವರ ಜೊತೆಗೆ ತ್ರಿವಿಕ್ರಮ್ ಶ್ರೀನಿವಾಸ್ ಸಹ ಕಾಣಿಸಿಕೊಂಡಿದ್ದಾರೆ. ಇನ್ನೂ ಈಗಾಗಲೇ ಈ ಸಿನೆಮಾದ ಫಸ್ಟ್ ಲುಕ್ ಪೋಸ್ಟರ್‍ ಸಹ ರಿಲೀಸ್ ಆಗಿದ್ದು, ಪೊಟೋ ಸಖತ್ ವೈರಲ್ ಆಗಿತ್ತು. ಇದೀಗ ಬಿಡುಗಡೆಯಾದ ಲೇಟೆಸ್ಟ್ ಪೊಟೋ ಸಿನೆಮಾದ ಮೇಲೆ ಮತಷ್ಟು ಹೈಪ್ ಕ್ರಿಯೇಟ್ ಮಾಡಿದೆ.

ಇನ್ನೂ ಈ ಸಿನೆಮಾದಲ್ಲಿ ಮಹೇಶ್ ಬಾಬು ದ್ವಿಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರಂತೆ. ಇನ್ನೂ ಸುಮಾರು 12 ವರ್ಷಗಳ ಬಳಿಕ ಮಹೇಶ್ ಬಾಬು ತ್ರಿವಿಕ್ರಮ್ ಶ್ರೀನಿವಾಸ್ ಜೊತೆಗೆ ಸಿನೆಮಾ ಮಾಡುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಈ ಸಿನೆಮಾದ ಮೇಲೆ ಭಾರಿ ನಿರೀಕ್ಷೆ ಸಹ ಹುಟ್ಟಿದೆ. ಇದೇ ಜನವರಿ 2024 ಜನವರಿ 13 ರಂದು ಬಿಡುಗಡೆಯಾಗಲಿದೆ.

Most Popular

To Top