Film News

ತಮ್ಮ ವಿರುದ್ದದ ಡೇಟಿಂಗ್ ರೂಮರ್ ಗಳ ಬಗ್ಗೆ ಕ್ಲಾರಿಟಿ ಕೊಟ್ಟ ಬುಟ್ಟಬೊಮ್ಮ ಪೂಜಾ ಹೆಗ್ಡೆ…..!

ಸಿನಿರಂಗದಲ್ಲಿ ಕಡಿಮೆ ಸಮಯದಲ್ಲೇ ಏನಾದರೂ ಸುದ್ದಿ ಬಂದರೇ ಸಾಕು ಅದು ನಿಜ ಅಥವಾ ಸುಳ್ಳು ಎಂಬುದರ ಬದಲಿಗೆ ಸಿಕ್ಕಾಪಟ್ಟೆ ವೈರಲ್ ಆಗಿಬಿಡುತ್ತದೆ. ಸಿನಿರಂಗದಲ್ಲಿ ಅಂತಹ ರೂಮರ್‍ ಗಳು ಸದಾ ಹರಿದಾಡುತ್ತಲೇ ಇರುತ್ತವೆ. ಸಿನೆಮಾಗಳ ಬಗ್ಗೆ ಮಾತ್ರವಲ್ಲದೇ ಅವರ ವೈಯುಕ್ತಿಕ ವಿಚಾರಗಳ ಬಗ್ಗೆ ಕಡಿಮೆ ಸಮಯದಲ್ಲೇ ವೈರಲ್ ಆಗುತ್ತಿರುತ್ತವೆ. ಈ ಹಾದಿಯಲ್ಲೇ ನಟಿ ಪೂಜಾ ಹೆಗ್ಡೆ ಬಗ್ಗೆ ಸಹ ರೂಮರ್‍ ಒಂದು ಹರಿದಾಡಿದೆ. ಇದೀಗ ಆಕೆ ಈ ರೂಮರ್‍ ಬಗ್ಗೆ ಕ್ಲಾರಿಟಿ ಕೊಟ್ಟಿದ್ದಾರೆ.

ಸ್ಟಾರ್‍ ನಟಿ ಪೂಜಾ ಹೆಗ್ಡೆ ಸದ್ಯ ಸೌತ್ ಅಂಡ್ ನಾರ್ತ್ ನಲ್ಲಿ ಬ್ಯುಸಿಯಾಗಿದ್ದಾರೆ.  ಬಹುಬೇಡಿಕೆ ನಡಿಯಾದ ಹಿನ್ನೆಲೆಯಲ್ಲಿ ಆಕೆಯ ಬಗ್ಗೆ ಆಗಾಗ ರೂಮರ್‍ ಗಳು ಕೇಳಿಬರುತ್ತಲೇ ಇರುತ್ತದೆ. ಈ ಹಿಂದೆ ರಾಧೆಶ್ಯಾಮ್ ಸಿನೆಮಾದ ಶೂಟಿಂಗ್ ವೇಳೆಯಲ್ಲಿ ಪ್ರಭಾಸ್ ಜೊತೆಗೆ ಡೇಟಿಂಗ್ ನಲ್ಲಿದ್ದಾರೆ ಎಂಬ ರೂಮರ್‍ ಕೇಳಿಬಂತು. ಬಳಿಕ ಈ ರೂಮರ್‍ ನಲ್ಲಿ ಯಾವುದೇ ಸತ್ಯಾಂಶ ಇಲ್ಲ ಎಂದು ಆಕೆ ಹೇಳಿದರು. ಬಳಿಕ ಇದೀಗ ಪೂಜಾ ಹೆಗ್ಡೆ ಸಲ್ಮಾನ್ ಖಾನ್ ಜೊತೆಗೆ ಡೇಟಿಂಗ್ ನಲ್ಲಿದ್ದಾರೆ ಎಂಬ ರೂಮರ್‍ ಹರಿದಾಡುತ್ತಿದೆ. ಇದಕ್ಕೆ ಕಾರಣ ಸಲ್ಮಾನ್ ಖಾನ್ ಹಾಗೂ ಪೂಜಾ ಹೆಗ್ಡೆ ಕಿಸಿ ಕ ಭಾಯ್ ಕಿಸಿ ಕ ಜಾನ್ ಎಂಬ ಸಿನೆಮಾದಲ್ಲಿ ನಟಿಸಿದ್ದಾರೆ. ಈ ಸಿನೆಮಾ ಇದೇ ಏ.21 ರಂದು ಬಿಡುಗಡೆಯಾಗಲಿದೆ. ಈ ಸಿನೆಮಾದ ಪ್ರಮೋಷನ್ ಕಾರ್ಯಕ್ರಮಗಳೂ ಸಹ ಭರದಿಂದ ಸಾಗುತ್ತಿದೆ.

ಇನ್ನೂ ಪೂಜಾ ಹಗ್ಡೆ ಈ ಸಿನೆಮಾದ ಶೂಟಿಂಗ್ ಪ್ರಾರಂಭದಲ್ಲೆ ಸಲ್ಮಾನ್ ಖಾನ್ ಜೊತೆಗೆ ಪ್ರೀತಿಗೆ ಬಿದ್ದರಂತೆ. ಹಂತ ಹಂತವಾಗಿ ಇದು ಡೇಟಿಂಗ್ ವರೆಗೂ ಸಾಗಿದ್ದು, ಇಬ್ಬರೂ ಸಹಜೀವನ ನಡೆಸುತ್ತಿದ್ದಾರೆ ಎಂಬ ಸುದ್ದಿಯೊಂದು ಬಾಲಿವುಡ್ ನಲ್ಲಿ ಜೋರಾಗಿ ಪ್ರಚಾರ ಆಗುತ್ತಿದೆ. ಇನ್ನೂ ಪೂಜಾ ಹೆಗ್ಡೆಗೆ 32 ವರ್ಷ, ಸಲ್ಮಾನ್ ಖಾನ್ ಗೆ 57 ವರ್ಷ. ಅವರಿಬ್ಬರ ನಡುವೆ ಭಾರಿ ವಯಸ್ಸಿನ ಅಂತರ ಸಹ ಇದೆ. ಈ ಕಾರಣದಿಂದ ಪೂಜಾ ಅಭಿಮಾನಿಗಳೂ ಸಹ ಹರ್ಟ್ ಆಗುತ್ತಿದ್ದಾರೆ. ಇನ್ನೂ ಈ ಬಗ್ಗೆ ಪೂಜಾ ಹೆಗ್ಡೆ ಸಹ ಫೈರ್‍ ಆಗಿದ್ದಾರೆ. ಇನ್ನೂ ಈ ರೂಮರ್‍ ಬಗ್ಗೆ ಮಾತನಾಡಿದ ಪೂಜಾ ಹೆಗ್ಡೆ ಅದೆಲ್ಲವೂ ನಿರಾಧಾರವಾದ ಕಲ್ಪನೆಗಳು, ನಾನು ಅವರೊಂದಿಗೆ ಸಹಜೀವನ ಮಾಡುತ್ತಿಲ್ಲ. ಎಲ್ಲವೂ ಅವಾಸ್ತವಿಕವಾದ ವಿಚಾರಗಳು. ಸದ್ಯ ನಾನು ಸಂಪೂರ್ಣವಾಗಿ ಸಿನೆಮಾಗಳ ಮೇಲೆ ಪೋಕಸ್ ಇಟ್ಟಿದ್ದೀನಿ ಎಂದು ಹೇಳಿದ್ದಾರೆ. ಆ ಮೂಲಕ ತಮ್ಮ ಬಗ್ಗೆ ಕೇಳಿಬಂದ ರೂಮರ್‍ ಗೆ ಕ್ಲಾರಿಟಿ ಕೊಟ್ಟಿದ್ದಾರೆ.

ಇನ್ನೂ ಪೂಜಾ ಹೆಗ್ಡೆಗೆ ಕಳೆದ ವರ್ಷ ಭಾರಿ ನಿರಾಸೆಯನ್ನೇ ಮೂಡಿಸಿತ್ತು ಎನ್ನಬಹುದಾಗಿದೆ. ಆಕೆ ಅಭಿನಯದ ಎಲ್ಲಾ ಸಿನೆಮಾಗಳೂ ಬಾಕ್ಸ್ ಆಫೀಸ್ ನಲ್ಲಿ ಮಕಾಡೆ ಮಲಗಿದವು. ಆದರೂ ಸಹ ಆಕೆಯ ಕ್ರೇಜ್ ಮಾತ್ರ ಕಡಿಮೆಯಾಗಿಲ್ಲ. ಸದ್ಯ ಆಕೆ ಮಹೇಶ್ ಬಾಬು ರವರ ಜೊತೆಗೆ SSMB28 ಸಿನೆಮಾದಲ್ಲಿ ನಟಿಸುತ್ತಿದ್ದಾರೆ.

Most Popular

To Top