ನಟ ಶರತ್ ಬಾಬು ಕ್ಷೇಮವಾಗಿದ್ದಾರೆ, ಸುಳ್ಳು ಸುದ್ದಿಗಳನ್ನು ನಂಬಬೇಡಿ ಎಂದ ಕುಟುಂಬಸ್ಥರು….!

Follow Us :

ಸೌತ್ ಸಿನಿರಂಗದ ಸೀನಿಯರ್‍ ನಟ ಶರತ್ ಬಾಬು ಕೆಲವು ದಿನಗಳಿಂದ ಅನಾರೋಗ್ಯಕ್ಕೆ ತುತ್ತಾಗಿದ್ದು, ವೆಂಟಿಲೇಟರ್‍ ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂಬ ಸುದ್ದಿ ಬಂದಿತ್ತು. ಇದೀಗ ಅವರು ಮೃತಪಟ್ಟಿದ್ದಾರೆ ಎಂಬ ಸುದ್ದಿ ಕೆಲವೊಂದು ಮಿಡಿಯಾಗಳಲ್ಲಿ ಪ್ರಸಾರವಾಗಿದ್ದು, ಅನೇಕರು ಶಾಕ್ ಆಗಿದ್ದರು. ಈ ಸುದ್ದಿ ಕಡಿಮೆ ಸಮಯದಲ್ಲೇ ವೈರಲ್ ಆಗಿದ್ದು, ಅನೇಕ ಸ್ಟಾರ್‍ ಗಳೂ ಸಹ ಸಂತಾಪ ಸೂಚಿಸಿದ್ದರು. ಇದೀಗ ಅದೆಲ್ಲವೂ ಕೇವಲ ರೂಮರ್‍ ಗಳೆಂದು ಅವರು ಕುಟುಂಬಸ್ಥರು ತಿಳಿಸಿದ ಬಳಿಕೆ ಎಲ್ಲರೂ ನಿರಾಳರಾಗಿದ್ದಾರೆ.

ಸೀನಿಯರ್‍ ನಟ ಶರತ್ ಬಾಬು ಅನಾರೋಗ್ಯದ ಕಾರಣದಿಂದ ಆಸ್ಪತ್ರೆಯಲ್ಲಿ ದಾಖಲಾಗಿದ್ದರು. ಹೈದರಾಬಾದ್ ನ ಎ.ಐ.ಜಿ ಆಸ್ಪತ್ರೆಯಲ್ಲಿ ಟ್ರೀಟ್ ಮೆಂಟ್ ತೆಗೆದುಕೊಳ್ಳುತ್ತಿದ್ದಾರೆ. ಕೆಲವು ದಿನಗಳ ಹಿಂದೆ ಅವರ ಆರೋಗ್ಯ ಹದೆಗಟ್ಟಿದ್ದು ಚೆನೈನಿಂದ ಬೆಂಗಳೂರಿಗೆ, ಬೆಂಗಳೂರಿನಿಂದ ಹೈದರಾಬಾದ್ ಗೆ ಕರೆತರಲಾಗಿತ್ತು. ಬಳಿಕ ಅವರ ಆರೋಗ್ಯ ಮತಷ್ಟು ಕ್ಷೀಣಿಸಿದೆ ಎಂಬ ಮಾಹಿತಿಯನ್ನು ತಿಳಿಸಿದ್ದರು. ಅವರು ಶೀಘ್ರ ಗುಣಮುಖರಾಗಲಿ ಎಂದು ಅಭಿಮಾನಿಗಳೂ ಸೇರಿದಂತೆ ಅನೇಕರು ಪ್ರಾರ್ಥನೆ ಮಾಡಿದರು. ಅಂತಹ ಸಮಯದಲ್ಲಿ ಮತ್ತೊಂದು ರೂಮರ್‍ ಹರಿದಾಡಲು ಶುರುವಾಗಿತ್ತು. ಶರತ್ ಬಾಬು ರವರು ಇನ್ನಿಲ್ಲ ಎಂಬ ಸುದ್ದಿ ಜೋರಾಗಿಯೇ ಹರಿದಾಡಿತ್ತು.

ಇನ್ನೂ ಈ ಸುದ್ದಿ ಸೋಷಿಯಲ್ ಮಿಡಿಯಾದಲ್ಲಿ ಸೋಷಿಯಲ್ ಮಿಡಿಯಾದಲ್ಲಿ ಸಖತ್ ಸದ್ದು ಮಾಡಿದೆ. ಕೆಲವೊಂದು ಮಿಡಿಯಾ ಸಂಸ್ಥೆಗಳೂ ಸಹ ಪ್ರಕಟಿಸಿದೆ. ಇದರಿಂದ ಎಲ್ಲರೂ ಶಾಕ್ ಆಗಿದ್ದರು. ಅನೇಕ ನಟ-ನಟಿಯರೂ ಸಹ ಶರತ್ ಬಾಬು ರವರ ನಿಧನಕ್ಕೆ ಸಂತಾಪ ಸೂಚಿಸಿದ್ದರು. ಈ ಸಂಬಂಧ ಕೆಲವೊಂದು ಪೋಸ್ಟ್ ಗಳನ್ನು ಸಹ ಹಂಚಿಕೊಂಡರು. ಇನ್ನೂ ಈ ರೂಮರ್‍ ವೈರಲ್ ಆಗುತ್ತಿದ್ದಂತೆ ಶರತ್ ಬಾಬು ಸಂಬಂಧಿಕರು ಈ ಬಗ್ಗೆ ರಿಯಾಕ್ಟ್ ಆಗಿದ್ದಾರೆ. ಶರತ್ ಬಾಬು ರವರ ಮರಣದ ಸುದ್ದಿ ಕೇವಲ ರೂಮರ್‍ ಗಳು ಮಾತ್ರ. ಈ ಸುದ್ದಿಗಳನ್ನು ನಂಬಬೇಡಿ ಎಂದು ಮಾಹಿತಿ ನೀಡಿದ್ದಾರೆ. ಇನ್ನೂ ಶರತ್ ಬಾಬು ಕೊಂಚ ಗುಣಮುಖರಾಗಿದ್ದಾರೆ. ಐಸಿಯು ನಿಂದ ರೂಮ್ ಗೆ ಸಹ ಬದಲಿಸಲಾಗಿದೆ. ಶೀಘ್ರದಲ್ಲೇ ಅವರು ಗುಣಮುಖರಾಗಲಿದ್ದಾರೆ ಎಂದು ಶರತ್ ಬಾಬು ಕುಟುಂಬಸ್ಥರು ಮಾಹಿತಿ ಹಂಚಿಕೊಂಡಿದ್ದಾರೆ.

ಶರತ್ ಬಾಬು ಮರಣದ ಬಗ್ಗೆ ಗೊಂದಲದಲ್ಲಿದ್ದ ಅಭಿಮಾನಿಗಳಿಗೆ ಇದೀಗ ಕ್ಲಾರಿಟಿ ದೊರೆತಿದ್ದು, ಅವರು ಶೀಘ್ರ ಗುಣಮುಖರಾಗಲಿ ಎಂದು ಎಲ್ಲರೂ ಪ್ರಾರ್ಥನೆ ಮಾಡುತ್ತಿದ್ದಾರೆ. ಇನ್ನೂ ಶರತ್ ಬಾಬು ಸಿನಿರಂಗದಲ್ಲಿ ಸುಮಾರು 200 ಕ್ಕೂ ಅಧಿಕ ಸಿನೆಮಾಗಳಲ್ಲಿ ನಟಿಸಿ ತನ್ನದೇ ಆದ ಅಭಿಮಾನಿ ಬಳಗ ಸಹ ಪಡೆದುಕೊಂಡಿದ್ದಾರೆ.