ಅಂತೂ ಇಂತೂ ತಾನು ಮದುವೆಯಾಗುವ ವ್ಯಕ್ತಿಯನ್ನು ಪರಿಚಯಿಸಿದ ಆಂಕರ್ ರಶ್ಮಿ, ಸುಧೀರ್ ಗೆ ಕೈ ಕೊಟ್ರಾ ರಶ್ಮಿ ಎಂದ ಫ್ಯಾನ್ಸ್……!

Follow Us :

ಟಾಲಿವುಡ್ ನಲ್ಲಿ ಆಂಕರ್‍ ರಶ್ಮಿ ತುಂಬಾನೆ ಫೇಮಸ್ ಆಗಿದ್ದಾರೆ. ಸಿನೆಮಾದ ಬಹುಬೇಡಿಕೆ ನಟಿಯರಂತೆ ಹಾಟ್ ಆಂಕರ್‍ ರಶ್ಮಿ ಸಹ ತುಂಬಾನೆ ಅಭಿಮಾನಿಗಳನ್ನು ಪಡೆದುಕೊಂಡಿದ್ದಾರೆ. ಕೆಲವು ದಿನಗಳಿಂದ ರಶ್ಮಿ ಮದುವೆಯ ಬಗ್ಗೆ ತುಂಬಾನೆ ಸುದ್ದಿಗಳು ಕೇಳಿಬರುತ್ತಲೇ ಇದೆ. ಕೆಲವು ದಿನಗಳ ಹಿಂದೆಯಷ್ಟೆ ಡಿ.31 ರಂದು ತಾನು ಮದುವೆಯಾಗುವ ವ್ಯಕ್ತಿಯನ್ನು ಪರಿಚಯಿಸುವುದಾಗಿ ತಿಳಿಸಿದ್ದರು. ಅನೇಕರು ಸುಧೀರ್‍ ಹಾಗೂ ರಶ್ಮಿ ಮದುವೆಯ ವಿಚಾರ ತಿಳಿಸುತ್ತಾರೆ ಅಂದುಕೊಂಡಿದ್ದರು. ಆದರೆ ಇದೀಗ ರಶ್ಮಿ ತಾನು ಮದುವೆಯಾಗುವ ವ್ಯಕ್ತಿಯನ್ನು ಪರಿಚಯಿಸಿದ್ದು, ಸುಧೀರ್‍ ಗೆ ರಶ್ಮಿ ಕೈ ಕೊಟ್ರಾ ಎಂದು ಅನೇಕರು ಅನುಮಾನ ವ್ಯಕ್ತಪಡಿಸುತ್ತಿದ್ದಾರೆ.

ಜಬರ್ದಸ್ತ್ ಶೋ ಮೂಲಕ ಸುಧೀರ್‍ ಹಾಗೂ ರಶ್ಮಿ ತುಂಬಾನೆ ಫೇಂ ಪಡೆದುಕೊಂಡರು. ಶೋ ನಲ್ಲಿ ಅವರಿಬ್ಬರು ಲವ್ ಕೆಮಿಸ್ಟ್ರಿ ತುಂಬಾನೆ ಚೆನ್ನಾಗಿ ಮೂಡಿಬಂದಿತ್ತು. ನಿಜವಾಗಿಯೂ ಅವರಿಬ್ಬರೂ ಪ್ರೀತಿ ಮಾಡಿಕೊಳ್ಳುತ್ತಿದ್ದಾರಾ ಎನ್ನುವಂತೆ ಭಾಸವಾಗುತ್ತಿತ್ತು. ಅನೇಕ ಬಾರಿ ಇವರಿಬ್ಬರ ಮದುವೆಯ ಬಗ್ಗೆ ಅನೇಕ ಸುದ್ದಿಗಳೂ ಸಹ ಕೇಳಿಬಂದಿತ್ತು. ಕೆಲವು ದಿನಗಳಿಂದ ಹಿಂದೆಯಷ್ಟೆ ರಶ್ಮಿ ಪೆಳ್ಳಿ ಪಾರ್ಟಿ ಎಂಬ ಈವೆಂಟ್ ನಲ್ಲಿ ರಶ್ಮಿ ತಾನು ಮದುವೆಯಾಗುವ ವ್ಯಕ್ತಿಯನ್ನು ಪರಿಚಯಿಸಲಿದ್ದಾರೆ ಎಂಬ ಸುದ್ದಿಯೊಂದು ಕೇಳಿಬಂತು. ಡಿ.31 ರಂದು ರಶ್ಮಿ ತಾನು ಮದುವೆಯಾಗುವ ಹುಡುಗ ಯಾರೆಂದು ತಿಳಿಸಲಿದ್ದಾರೆ ಎಂದು ಹೇಳಲಾಗಿತ್ತು. ಆದರೆ ಈ ಈವೆಂಟ್ ಗಾಗಿ ರಶ್ಮಿ ಗುರುತು ತಿಳಿಯದ ವ್ಯಕ್ತಿಯೊಬ್ಬರನ್ನು ಮದುವೆಯಾಗುತ್ತಿರುವುದಾಗಿ ಪ್ರಕಟಿಸಿದ್ದಾರೆ.

ಇನ್ನೂ ಈವೆಂಟ್ ಗಾಗಿ ಮಾತ್ರವೇ ರಶ್ಮಿ ಗುರುತು ಸಿಗದ ವ್ಯಕ್ತಿಯನ್ನು ಮದುವೆಯಾಗುತ್ತಿದ್ದಾರೆ ಎಂದು ಅನೇಕರು ತಮ್ಮ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. ಸದ್ಯ ರಶ್ಮಿ ಪರಿಚಯಿಸಲಿರುವ ವ್ಯಕ್ತಿ ವಿದೇಶಿಗ ಎನ್ನಲಾಗಿದೆ. ಜೊತೆಗೆ ರಶ್ಮಿ ನಟ ಸುಧೀರ್‍ ರನ್ನು ಮದುವೆಯಾಗಲಿದ್ದಾರೆ ಎಂದು ಅನೇಕರು ಭಾವಿಸಿದ್ದರು. ಇದೀಗ ರಶ್ಮಿ ಬೇರೊಬ್ಬ ಯುವಕನನ್ನು ಪರಿಚಯಿಸುತ್ತಿರುವ ಕಾರಣದಿಂದ ಸುಧೀರ್‍ ಗೆ ರಶ್ಮಿ ಕೈ ಕೊಟ್ರಾ ಎಂಬ ಅನುಮಾನ ಬರುವಂತೆ ಮಾಡಿದ್ದಾರೆ. ಇನ್ನೂ ಇದರ ಸತ್ಯಾಸತ್ಯತೆ ತಿಳಿಯಲು ಡಿ.31ರವರೆಗೂ ಕಾಯಬೇಕಿದೆ. ಇನ್ನೂ ರಶ್ಮಿ ಸಿನೆಮಾಗಳ ಪರವಾಗಿ ಸಕ್ಸಸ್ ಕಂಡುಕೊಳ್ಳಲು ವಿಫಲರಾದರೂ ಸಹ ಕಿರುತೆರೆಯಲ್ಲಿ ಮಾತ್ರ ತುಂಬಾನೆ ಫೇಮಸ್ ಆಗಿದ್ದಾರೆ. ತೆಲುಗು ಕಿರುತೆರೆಯಲ್ಲಿ ಸ್ಟಾರ್‍ ಡಂ ಸಹ ಪಡೆದುಕೊಂಡಿದ್ದಾರೆ ಎನ್ನಬಹುದಾಗಿದೆ.