ಸುಮಾರು ದಿನಗಳ ಬಳಿಕ ಗ್ಲಾಮರಸ್ ಪೋಸ್ ಕೊಟ್ಟ ರಶ್ಮಿ, ಕ್ರೇಜಿ ಕಾಮೆಂಟ್ ಮಾಡಿದ ಫ್ಯಾನ್ಸ್….!

Follow Us :

ಕಿರುತೆರೆಯಲ್ಲಿ ಸ್ಟಾರ್‍ ನಟಿಯರಂತೆ ಫೇಮಸ್ ಪಡೆದುಕೊಂಡ ಹಾಟ್ ಆಂಕರ್‍ ಕಂ ನಟಿ ರಶ್ಮಿ ಗೌತಮ್ ಕಿರುತೆರೆ ಹಾಗೂ ಬೆಳ್ಳಿತೆರೆಯಲ್ಲೂ ರಂಜಿಸುತ್ತಿದ್ದಾರೆ. ಖ್ಯಾತ ತೆಲುಗು ಕಾಮಿಡಿ ಶೋ ಜರ್ಬದಸ್ತ್ ಮೂಲಕ ಫೇಂ ಪಡೆದುಕೊಂಡ ರಶ್ಮಿ ಕೆಲವೊಂದು ಸಿನೆಮಾಗಳಲ್ಲೂ ಸಹ ನಟಿಸಿದ್ದಾರೆ. ಆದರೆ ಆಕೆ ಮಾತ್ರ ಕಿರುತೆರೆಯಲ್ಲೇ ಭಾರಿ ಫೇಂ ಪಡೆದುಕೊಂಡರು. ಓರ್ವ ನಟಿಯರಿಗಿರುವಷ್ಟು ಫ್ಯಾನ್ ಫಾಲೋಯಿಂಗ್ ಸಹ ರಶ್ಮಿ ಪಡೆದುಕೊಂಡಿದ್ದಾರೆ ಎನ್ನಬಹುದಾಗಿದೆ. ಅದರಲ್ಲೂ ರಶ್ಮಿ ಸೋಷಿಯಲ್ ಮಿಡಿಯಾದ ಮೂಲಕ ಮತಷ್ಟು ಫೇಂ ಪಡೆದುಕೊಂಡಿದ್ದಾರೆ. ಸುಮಾರು ದಿನಗಳ ಬಳಿಕ ಆಕೆ ಗ್ಲಾಮರಸ್ ಪೋಸ್ ಕೊಟ್ಟಿದ್ದಾರೆ.

ನಟಿ ರಶ್ಮಿ ಸುಮಾರು 20 ವರ್ಷಗಳಿಂದ ಸಿನಿರಂಗದಲ್ಲಿ ಸಕ್ರೀಯರಾಗಿದ್ದಾರೆ. ಸುಮಾರು ಹತ್ತು ವರ್ಷಗಳ ಕಾಲ ಆಕೆ ನಟಿಯಾಗಿ ಸಕ್ಸಸ್ ಕಾಣಲು ತುಂಬಾನೆ ಪ್ರಯತ್ನಗಳನ್ನು ಮಾಡಿದ್ದಾರೆ. ಅನೇಕ ಸಿನೆಮಾಗಳಲ್ಲಿ ಸರ್ಪೋಟಿಂಗ್ ರೋಲ್ಸ್ ನಲ್ಲೂ ಕಾಣಿಸಿಕೊಂಡಿದ್ದಾರೆ. ಆದರೆ ಆಕೆ ಅಷ್ಟೊಂದು ಫೇಂ ಪಡೆದುಕೊಳ್ಳಲು ವಿಫಲರಾದರು ಎಂದೇ ಹೇಳಬಹುದಾಗಿದೆ. ಆದರೆ ಆಕೆಗೆ ಬಿಗ್ ಫೇಂ ತಂದುಕೊಟ್ಟಿದ್ದು ಮಾತ್ರ ಜಬರ್ದಸ್ತ್ ಶೋ ಎಂದರೇ ತಪ್ಪಾಗಲಾರದು. 2012 ರಲ್ಲಿ ಆಕೆ ಜಬರ್ದಸ್ತ್ ಶೋಗೆ ಆಂಕರ್‍ ಆಗಿ ಆಯ್ಕೆ ಆದರು. ಈ ಶೋ ಬಳಿಕ ಆಕೆ ತುಂಬಾನೆ ಫೇಮಸ್ ಆಗಿಬಿಟ್ಟರು. ಸ್ಟಾರ್‍ ನಟಿಗಿಂತ ಕಡಿಮೆಯಿಲ್ಲ ಎಂಬಂತೆ ಅಪಾರ ಪ್ರಮಾಣದ ಅಭಿಮಾನಿಗಳನ್ನು ಸಹ ಪಡೆದುಕೊಂಡರು.

ಇನ್ನೂ ರಶ್ಮಿ ಸೋಷಿಯಲ್ ಮಿಡಿಯಾದಲ್ಲಿ ತುಂಬಾನೆ ಆಕ್ಟೀವ್ ಆಗಿರುತ್ತಾರೆ. ಸದಾ ಗ್ಲಾಮರ್‍ ವಿಚಾರದಲ್ಲಿ ಮುಂದೆ ಇರುತ್ತಾರೆ. ಈ ಹಿಂದೆ ಸೋಷಿಯಲ್ ಮಿಡಿಯಾದಲ್ಲಿ ಗ್ಲಾಮರಸ್ ಪೋಸ್ ಗಳ ಮೂಲಕ ಅಭಿಮಾನಿಗಳನ್ನು ರಂಜಿಸುತ್ತಿರುತ್ತಾರೆ. ಓವರ್‍ ಆಗಿಯೇ ಗ್ಲಾಮರ್‍ ಡೋಸ್ ಏರಿಸುತ್ತಾ ಅಭಿಮಾನಿಗಳನ್ನು ರಂಜಿಸುತ್ತಿರುತ್ತಾರೆ. ಒಂದೇ ತರಹ ಔಟ್ ಫಿಟ್ ಹಾಗೂ ಒಂದೇ ತರಹದ ಸ್ಟೈಲ್ ಫಾಲೋ ಮಾಡುತ್ತಿರುತ್ತಾರೆ. ಇದೀಗ ಆಕೆ ಟ್ರೆಂಡಿ ವೇರ್‍ ನಲ್ಲಿ ಹಾಟ್ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ. ಫ್ರಂಟ್ ಸೈಡ್ ಕಟ್ಟಿಂಗ್ ಇರುವಂತಹ ಸ್ಕರ್ಟ್ ನಲ್ಲಿ ಆಟ್ರಾಕ್ಟೀವ್ ಆಗಿ ಕಾಣಿಸಿಕೊಂಡಿದ್ದಾರೆ. ರಶ್ಮಿಯ ಈ ಲೇಟೆಸ್ಟ್ ಲುಕ್ ಎಲ್ಲರನ್ನೂ ಆಕರ್ಷಣೆ ಮಾಡುತ್ತಿವೆ. ಈ ಪೊಟೋಗಳು ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿವೆ. ಅನೇಕರು ಕ್ರೇಜಿ ಕಾಮೆಂಟ್ ಮಾಡುತ್ತಿದ್ದಾರೆ. ಏಜ್ ಬಾರ್‍ ಆಗುತ್ತಿದೆ. ಶೀಘ್ರ ಮದುವೆಯಾಗು ಎಂದು ಕಾಮೆಂಟ್ಸ್ ಮಾಡುವ ಜೊತೆಗೆ ಲೈಕ್ ಗಳು ಹಾಗೂ ಎಮೋಜಿಗಳ ಮೂಲಕ ಪೊಟೋಗಳನ್ನು ಮತ್ತಷ್ಟು ಕಡೆ ವೈರಲ್ ಮಾಡುತ್ತಿದ್ದಾರೆ.

ಇನ್ನೂ ರಶ್ಮಿ ಸಿನೆಮಾಗಳಲ್ಲೂ ಸಹ ಫೇಂ ಪಡೆದುಕೊಳ್ಳಲು ಹರಸಾಹಸ ಪಡುತ್ತಿದ್ದಾರೆ. ಆಕೆ ಕೊನೆಯದಾಗಿ ಬೊಮ್ಮ ಬ್ಲಾಕ್ ಬ್ಲಸ್ಟರ್‍ ಎಂಬ ಸಿನೆಮಾದಲ್ಲಿ ನಾಯಕಿಯಾಗಿ ನಟಿಸಿದ್ದರು. ಈ ಸಿನೆಮಾ ಒಳ್ಳೆಯ ಹೆಸರನ್ನು ತಂದುಕೊಂಡರು ಕಮರ್ಷಿಯಲ್ ಆಗಿ ಪ್ರದರ್ಶನವಾಗಲಿಲ್ಲ. ಇನ್ನೂ ಮೆಗಾಸ್ಟಾರ್‍ ಚಿರಂಜೀವಿ ಅಭಿನಯದ ಭೋಳಾ ಶಂಕರ್‍ ಸಿನೆಮಾದಲ್ಲೂ ಸಹ ರಶ್ಮಿ ಸ್ಪೇಷಲ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು.