News

ಪ್ರಚಾರ ಆರಂಭಿಸಿದ ಡಾ.ಮಂಜುನಾಥ್, ಧರ್ಮಯುದ್ದದಲ್ಲಿ ನನ್ನನ್ನು ಗೆಲ್ಲಿಸಿ, ಸತ್ಯಕ್ಕೆ ಜಯಸಿಗಬೇಕು ಎಂದ ಬಿಜೆಪಿ ಅಭ್ಯರ್ಥಿ….!

ಕರ್ನಾಟಕದಲ್ಲಿ ಲೋಕಸಭಾ ಚುನಾವಣಾ ಅಖಾಡ ದಿನೇ ದಿನೇ ರಂಗೇರುತ್ತಿದೆ. ಈ ಬಾರಿ ಹೊಸ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ ಬಿಜೆಪಿ ಹೊಸ ಪ್ರಯೋಗಕ್ಕೆ ಮುಂದಾಗಿದೆ ಎನ್ನಲಾಗುತ್ತಿದೆ. ಅಚ್ಚರಿಯ ಅಭ್ಯರ್ಥಿಗಳನ್ನು ಸಹ ಕಣ್ಣಕ್ಕಿಳಿಸಿದೆ. ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರಕ್ಕೆ ಈ ಭಾರಿ ಡಾ.ಮಂಜುನಾಥ್ ಬಿಜೆಪಿ ಮೈತ್ರಿ ಅಭ್ಯರ್ಥಿಯಾಗಿ ಕಣಕ್ಕೆ ಇಳಿದಿದ್ದಾರೆ. ಇದೀಗ ಚುನಾವಣಾ ಪ್ರಚಾರ ಆರಂಭಿಸಿರುವ ಡಾ.ಮಂಜುನಾಥ್ ಕಾರ್ಯಕತರ ಸಭೆ ನಡೆಸಿದ್ದಾರೆ.

ಲೋಕಸಭಾ ಚುನಾವಣೆ 2024 ದಿನೇ ದಿನೇ ರಂಗೇರುತ್ತಿದೆ. ಈ ಬಾರಿ ಬೆಂಗಳೂರು ಗ್ರಾಮಾಂತರ ಕ್ಷೇತ್ರದಿಂದ ಹಾಲಿ ಸಂಸದ ಡಿ.ಕೆ.ಸುರೇಶ್ ರವರ ವಿರುದ್ದ ಡಾ.ಮಂಜುನಾಥ್ ರವರು ಬಿಜೆಪಿ-ಜೆಡಿಎಸ್ ಮೈತ್ರಿ ಅಭ್ಯರ್ಥಿಯಾಗಿ ಕಣಕ್ಕೆ ಇಳಿದಿದ್ದಾರೆ. ಇದೀಗ ಕಾರ್ಯಕರ್ತರ ಸಭೆ ನಡೆಸಿದ ಡಾ.ಮಂಜುನಾಥ್ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದರು. ನಾನು ಬೆಂಗಳೂರು ಗ್ರಾಮಾಂತರ ಕ್ಷೇತ್ರದಿಂದ ಸ್ಪರ್ಧೆ ಮಾಡುತ್ತಿದ್ದೇನೆ. ನಿಮ್ಮೆಲ್ಲರ ಸಹಕಾರ, ಸಲಹೆ ನನಗೆ ಮುಖ್ಯವಾಗಿದೆ. ಇಲ್ಲಿನ ಜನ ತುಂಬಾ ಪ್ರೀತಿ ಮಾಡುತ್ತಾರೆ, ನಾನು ಬಂದಾಗ ಪ್ರೀತಿಯ ಸಂಕೇತವಾದ ಗುಲಾಬಿ ನೀಡಿ ಸ್ವಾಗತಿಸಿದ್ದಾರೆ. ಪ್ರಧಾನಿ ಮೋದಿಯವರು ನಿಸ್ವಾರ್ಥ ಸೇವೆ ಮೂಲಕ ಹೊಸ ಭಾರತ ಕಟ್ಟಲು ಸಂಕಲ್ಪ ಮಾಡಿದ್ದಾರೆ. ಅವರ ಕೆಲಸಕ್ಕೆ ನಾವು ಸಹ ಕೈಜೋಡಿಸಬೇಕಿದೆ ಎಂದರು.

ಪ್ರಧಾನಿ ಮೋದಿಯವರ ನೇತೃತ್ವದ ಸರ್ಕಾರ ಅಭಿವೃದ್ದಿ ಪಥದಲ್ಲಿ ಸಾಗುತ್ತಿದೆ. ರಸ್ತೆ, ರೈಲ್ವೆ, ವಿಮಾನ ಸೇವೆ ಸೇರಿದಂತೆ ಅನೇಕ ಅಭಿವೃದ್ದಿ ಕೆಲಸಗಳನ್ನು ಮಾಡಿದ್ದಾರೆ. ಕೋವಿಡ್ ಸಮಯದಲ್ಲಿ ಮೋದಿಯವರು ಕೈಗೊಂಡ ಕ್ರಮಗಳ ಬಗ್ಗೆ ವಿಶ್ವಸಂಸ್ಥೆ ಸಹ ಹೊಗಳಿದೆ. ಬಿಜೆಪಿ ಹಾಗೂ ಜೆಡಿಎಸ್ ಕಾರ್ಯಕರ್ತರು ನನಗೆ ಪ್ರೇಮಿಗಳ ರೀತಿ ಕಾಣುತ್ತಿದ್ದಾರೆ. ನಾನು ಹೃದ್ರೋಗ ತಜ್ಞನಾಗಿ ಕೆಲಸ ಮಾಡಿದ್ದೇನೆ. ಬಡವರನ್ನು ಕಂಡರೇ ನನಗೆ ತುಂಬಾ ಪ್ರೀತಿ. ಈಗ ನಡೆಯುತ್ತಿರುವುದು ಚುನಾವಣೆಯಲ್ಲ ಧರ್ಮಯುದ್ದ. ಈ ಯುದ್ದದಲ್ಲಿ ನಾವು ಜಯಶೀಲರಾಗಬೇಕು. ಈ ಧರ್ಮಯುದ್ದದಲ್ಲಿ ಸತ್ಯಕ್ಕೆ ಜಯ ಸಿಗಬೇಕು, ಈ ಬಾರಿ ನನ್ನನ್ನು ಗೆಲ್ಲಿಸಿ ಎಂದು ಮನವಿ ಮಾಡಿದ್ದಾರೆ.

Most Popular

To Top