ಮದುವೆ ಮನೆಯಲ್ಲಿ ಊಟ ಬಡಿಸುತ್ತಾ, 50 ರೂಪಾಯಿ ಸಂಪಾದನೆ ಮಾಡುತ್ತಿದ್ದ ಆಕೆ ಇದೀಗ ಸ್ಟಾರ್ ಹಿರೋಯಿನ್, ಆಕೆ ಯಾರು ಗೊತ್ತಾ?

Follow Us :

ಬಣ್ಣದ ಲೋಕದಲ್ಲಿ ಯಾವುದೇ ಬ್ಯಾಕ್ ಗ್ರೌಂಡ್ ಇಲ್ಲದೇ ಅನೇಕ ನಟ-ನಟಿಯರು, ಪೋಷಕ ಕಲಾವಿದರು ಸಕ್ಸಸ್ ಕಂಡುಕೊಂಡಿರುತ್ತಾರೆ. ಅನೆಕರು ದೊಡ್ಡ ದೊಡ್ಡ ಕೆಲಸಗಳನ್ನು ಬಿಟ್ಟಿರುತ್ತಾರೆ, ಮತ್ತೆ ಕೆಲವರು ಸಣ್ಣ ಪುಟ್ಟ ಕೆಲಸಗಳನ್ನು ಮಾಡುತ್ತಾ ಸಿನೆಮಾಗಳಲ್ಲಿ ಅವಕಾಶಗಳನ್ನು ಗಿಟ್ಟಿಸಿಕೊಂಡು ಸಕ್ಸಸ್ ಕಂಡುಕೊಂಡಿರುತ್ತಾರೆ. ಈ ಸಾಲಿನಲ್ಲಿ ಅನೇಕ ನಟಿಯರಿದ್ದಾರೆ. ಮದುವೆ ಸೇರಿದಂತೆ ವಿವಿಧ ಕಾರ್ಯಕ್ರಮಗಳಲ್ಲಿ ಊಟ ಬಡಿಸುತ್ತಾ, ದಿನಕ್ಕೆ 50 ರೂಪಾಯಿ ಸಂಪಾದನೆ ಮಾಡುತ್ತಿದ್ದವಳು ಇದೀಗ ಫೇಮಸ್ ನಟಿಯಾಗಿದ್ದಾರೆ. ಅಷ್ಟಕ್ಕೂ ಆಕೆ ಯಾರು ಎಂಬ ವಿಚಾರಕ್ಕೆ ಬಂದರೇ,

ಬಾಲಿವುಡ್ ನಲ್ಲಿ ಐಟಂ ಬಾಂಬ್ ಎಂದೇ ಕರೆಯಲಾಗುವ ರಾಖಿ ಸಾವಂತ್ ಸಿನೆಮಾಗಳಲ್ಲಿ ಎಂಟ್ರಿ ಕೊಡುವುದಕ್ಕೂ ಮುಂಚೆ ಮದುವೆ ಸೇರಿದಂತೆ ವಿವಿಧ ಕಾರ್ಯಕ್ರಮಗಳಲ್ಲಿ ಊಟ ಬಡಿಸುತ್ತಿದ್ದರಂತೆ. ಊಟ ಬಡಿಸುತ್ತಾ ದಿನಕ್ಕೆ 50 ರೂಪಾಯಿ ಸಂಪಾದನೆ ಮಾಡುತ್ತಿದ್ದರಂತೆ.  ಆಕೆ ಹತ್ತು ವರ್ಷ ವಯಸ್ಸಿನಲ್ಲಿದ್ದಾಗ, ಮದುವೆ ಮನೆಗಳಲ್ಲಿ ರಾಖಿ ಊಟ ಬಡಿಸುತ್ತಿದ್ದರಂತೆ. ರಾಖಿ ಪೋಷಕರಿಗೆ ಸಿನೆಮಾಗಳಲ್ಲಿ ನಟಿಸುವುದು ಇಷ್ಟವಿರಲಿಲ್ಲವಂತೆ. ಆದರೂ ಸಹ ಸಿನಿರಂಗಕ್ಕೆ ಎಂಟ್ರಿ ಕೊಟ್ಟು ಸಕ್ಸಸ್ ಕಂಡುಕೊಂಡರು. ವಿಶೇಷ ಹಾಡುಗಳ ಕಾರಣದಿಂದ ಆಕೆ ತುಂಭಾ ಕ್ರೇಜ್ ಪಡೆದುಕೊಂಡಿದ್ದಾರೆ. ಅಷ್ಟೇಅಲ್ಲದೇ ಆಕೆ ಸದಾ ವಿವಾದಗಳ ಮೂಲಕವೇ ಸುದ್ದಿಯಾಗುತ್ತಿರುತ್ತಾರೆ. ಅನೇಕ ಸ್ಟಾರ್‍  ನಟರ ಬಗ್ಗೆ ಸಹ ಆಕೆ ಕೆಲವೊಂದು ಕಾಮೆಂಟ್ ಗಳನ್ನು ಮಾಡುತ್ತಾ ಫೇಮಸ್ ಆಗಿದ್ದಾರೆ ಎನ್ನಬಹುದಾಗಿದೆ.

ಇನ್ನೂ ರಾಖಿ ಸಾವಂತ್ ಸದಾ ವಿವಾದಗಳ ಮೂಲಕ ಸುದ್ದಿಯಾಗುತ್ತಿರುತ್ತಾರೆ. ಕಳೆದ ವರ್ಷ ಆಕೆ ತಮ್ಮ ಮದುವೆ ಕಾರಣದಿಂದ ಭಾರಿ ಸುದ್ದಿಯಾಗಿದ್ದರು. ಮೈಸೂರು ಮೂಲದ ಆದಿಲ್ ದುರಾನಿ ಎಂಬಾತನನ್ನು ಮದುವೆಯಾದರು. ಬಳಿಕ ಆತನ ವಿರುದ್ದ ಅನೇಕ ಆರೋಪಗಳನ್ನು ಮಾಡಿದ್ದರು. ಆದಿಲ್ ನನ್ನನ್ನು ಬಳಸಿಕೊಂಡು ಬಾಲಿವುಡ್ ಗೆ ಪ್ರವೇಶಿಸಲು ಪ್ರಯತ್ನಿಸಿದ್ದ, ಆತ ಸುಳ್ಳುಗಾರ, ಆತನಿಗೆ ಬೇರೆ ಯುವತಿಯೊಂದಿಗೆ ಸಂಬಂಧವಿತ್ತು. ನನ್ನ ಬೆತ್ತಲೆ ವಿಡಿಯೋಗಳನ್ನು ತೆಗೆದು ಅವುಗಳನ್ನು ಮಾರಾಟ ಮಾಡಿ ಹಣ ಮಾಡುತ್ತಿದ್ದ ಎಂದು ಆರೋಪಿಸಿ ಆತನನ್ನು ಜೈಲಿಗೆ ಸಹ ಹಾಕಿಸಿದ್ದಳು. ಇದೀಗ ಹೊರಬಂದ ಆದಿಲ್ ಬೇರೊಬ್ಬ ಯುವತಿಯನ್ನು ಮದುವೆಯಾಗಿದ್ದರು. ಕೆಲವು ದಿನಗಳ ಹಿಂದೆಯಷ್ಟೆ ಅಂಬಾನಿ ಪುತ್ರ ಅನಂತ್ ಅಂಬಾನಿ ಹಾಗೂ ರಾಧಿಕಾ ಮಚೆಂಟ್ ಪ್ರೀ ವೆಡ್ಡಿಂಗ್ ಕಾರ್ಯಕ್ರಮ ಸಹ ಅದ್ದೂರಿಯಾಗಿ ನಡೆದಿತ್ತು. ಅನಂತ್ ಅಂಬಾನಿ ತುಂಬಾ ದಪ್ಪವಾಗಿದ್ದಾರೆ. ಅವರನ್ನು ಸಣ್ಣ ಮಾಡಲು ನನ್ನನ್ನು ಖರೀದಿ ಮಾಡಿ ಮುಖೇಶ್ ಅಂಬಾನಿ ಎಂದು ವಿಡಿಯೋ ಮಾಡಿದ್ದರು. ಈ ಕಾರಣದಿಂದಲೂ ಸಹ ಆಕೆ ಸುದ್ದಿಯಾಗಿದ್ದರು.