Film News

ಸೀರೆಯಲ್ಲಿ ಸ್ಟನ್ನಿಂಗ್ ಪೋಸ್ ಕೊಟ್ಟ ಬುಟ್ಟಬೊಮ್ಮ ಪೂಜಾ, ಮದುಮಗಳಂತೆ ಪೋಸ್ ಕೊಟ್ಟ ಪೂಜಾ ಹೆಗ್ಡೆ….!

ಸೌತ್ ಅಂಡ್ ನಾರ್ತ್‌ನಲ್ಲೂ ಸಹ ಪುಲ್ ಬ್ಯುಸಿಯಾಗಿ ಕೆರಿಯರ್‍ ಸಾಗಿಸುತ್ತಿರುವ ನಟಿಯರ ಸಾಲಿಗೆ ಪೂಜಾ ಹೆಗ್ಡೆ ಸೇರುತ್ತಾರೆ.  ಕಳೆದ ವರ್ಷ ಆಕೆಗೆ ಬ್ಯಾಕ್ ಟು ಬ್ಯಾಕ್ ಸೋಲುಗಳನ್ನು ಕಂಡರೂ ಸಹ ಆಕೆಗೆ ಅವಕಾಶಗಳು ಮಾತ್ರ ಕಡಿಮೆಯಾಗಲಿಲ್ಲ. ಇನ್ನೂ ಆಕೆ ಸೋಷಿಯಲ್ ಮಿಡಿಯಾದಲ್ಲೂ ಪುಲ್ ಆಕ್ಟೀವ್ ಆಗಿರುತ್ತಾರೆ. ಸೋಷಿಯಲ್ ಮಿಡಿಯಾದಲ್ಲಿ ಸದಾ ವಿವಿಧ ರೀತಿಯ ಪೊಟೋಗಳನ್ನು ಹಂಚಿಕೊಳ್ಳುತ್ತಾ ಫಾಲೋಯಿಂಗ್ ಬೆಳೆಸಿಕೊಳ್ಳುತ್ತಿರುತ್ತಾರೆ. ಇದೀಗ ಸೀರೆಯಲ್ಲಿ ಮದುಮಗಳಂತೆ ಕಾಣಿಸಿಕೊಂಡಿರುವ ಪೊಟೋಗಲು ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿವೆ.

ಸ್ಟಾರ್‍ ನಟಿ ಪೂಜಾ ಹೆಗ್ಡೆ ರವರ ಸಹೋದರನ ಮದುವೆ ಇತ್ತೀಚಿಗಷ್ಟೆ ನಡೆದಿತ್ತು. ಈ ಮದುವೆ ಸಂಭ್ರಮದಲ್ಲಿ ಪೂಜಾ ಹೆಗ್ಡೆ ಸಖತ್ ಎಂಜಾಯ್ ಮಾಡಿದ್ದರು. ಸೀರೆಯಲ್ಲಿ ಆಕೆ ತುಂಬಾ ಮುದ್ದಾಗಿ ಕಾಣಿಸಿಕೊಂಡಿದ್ದಾರೆ. ಇನ್ನೂ ಈ ಸಂಬಂಧ ಕೆಲವೊಂದು ಪೊಟೋಗಳನ್ನು ಆಕೆ ತನ್ನ ಸೋಷಿಯಲ್ ಮಿಡಿಯಾ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಸದ್ಯ ಈ ಪೊಟೋಗಳು ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿವೆ. ಇನ್ನೂ ಪೂಜಾ ಹೆಗ್ಡೆ ಸೀರೆಯಲ್ಲಿ ಮದು ಮಗಳಂತೆ ಕಾಣಿಸಿಕೊಂಡಿದ್ದಾರೆ. ಕೆಂಪು ಬಣ್ಣದ ಸೀರೆಯಲ್ಲಿ ಆಕರ್ಷಣೆಯಾದ ಬಂಗಾರದ ಆಭರಣಗಳನ್ನು ಧರಿಸಿ ಮದುಮಗಳಂತೆ ತಯಾರಾಗಿದ್ದಾರೆ. ಸೊಂಟಕ್ಕೆ ಡಾಬು, ಕತ್ತಿಗೆ ನೆಕ್ಲೇಸ್ ಹಾಕಿಕೊಂಡು ಮತಷ್ಟು ಸುಂದರವಾಗಿ ಕಾಣಿಸಿಕೊಂಡಿದ್ದಾರೆ. ಇನ್ನೂ ಸಂಪ್ರದಾಯಿಕವಾಗಿ ಕಾಣಿಸಿಕೊಂಡ ಪೂಜಾ ಹೆಗ್ಡೆಯನ್ನು ಕಂಡ ಅನೇಕರು ಮಂತ್ರಮುಗ್ದರಾಗುತ್ತಿದ್ದಾರೆ. ಅದರಲ್ಲೂ ಆಕೆ ಆಕರ್ಷಣೆಯುತವಾದ ಸ್ಮೈಲ್ ಮಾತ್ರ ಯುವಕರ ಹೃದಯ ಗಾಯಮಾಡುವಂತಿದೆ ಎನ್ನಬಹುದಾಗಿದೆ. ಮತ್ತೇರಿಸುವ ಲುಕ್ಸ್ ನೀಡುವಂತಿರುವ ಪೊಟೋಗಳು ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿದ್ದು, ಅಭಿಮಾನಿಗಳು ಹಾಟ್ ಕಾಮೆಂಟ್ ಗಳ ಮೂಲಕ ಮೆಚ್ಚುಗೆ ಸೂಚಿಸುತ್ತಿದ್ದಾರೆ.

ನಟಿ ಪೂಜಾ ಹೆಗ್ಡೆ ದುಬಾರಿ ಬೆಲೆಯ ಸೀರೆಯನ್ನು ಧರಿಸಿ ತನ್ನ ಸಹೋದರ ರಿಷಭ್ ಹೆಗ್ಡೆ ಮದುವೆ ಸಂಭ್ರಮದಲ್ಲಿ ಸಖತ್ ಸದ್ದು ಮಾಡಿದ್ದರು. ನಟಿ ಪೂಜಾ ಹೆಗ್ಡೆ ಎಂತಹುದೇ ಡ್ರೆಸ್ ಧರಿಸಿದರೂ ತುಂಬಾ ಮುದ್ದಾಗಿ ಕಾಣಿಸಿಕೊಳ್ಳುತ್ತಾರೆ. ಇದೀಗ ಸಂಪ್ರದಾಯ ಬಟ್ಟೆಗಳಲ್ಲಿ ಮತಷ್ಟು ಸುಂದರವಾಗಿ ಕಾಣಿಸಿಕೊಂಡಿದ್ದಾರೆ. ಇನ್ನೂ ಈಗಾಗಲೇ ಆಕೆಯ ಸಹೋದರನ ಮದುವೆಯ ಪೊಟೋಗಳನ್ನು ಶೇರ್‍ ಮಾಡಿದ್ದರು. ಇದೀಗ ಪೂಜಾ ಹೆಗ್ಡೆ ಮದುವೆ ಕಾರ್ಯಕ್ರಮಕ್ಕೆ ಸಂಬಂಧಿಸಿದ ಕೆಲವೊಂದು ಪೊಟೋಗಳನ್ನು ಹಂಚಿಕೊಂಡಿದ್ದಾರೆ. ಇನ್ನೂ ಪೂಜಾ ಹೆಗ್ಡೆ ಕಳೆದ ವರ್ಷ ನಟಿಸಿದ ಎಲ್ಲಾ ಸಿನೆಮಾಗಳು ಬಾಕ್ಸ್ ಆಫೀಸ್ ನಲ್ಲಿ ಮಕಾಡೆ ಮಲಗಿತ್ತು. ಈ ವರ್ಷವಾದರೂ ಆಕೆಗೆ ಸಕ್ಸಸ್ ಸಿಗಲಿದೆಯೇ ಎಂದು ಕಾದು ನೋಡಬೇಕಿದೆ.

ಸದ್ಯ ಪೂಜಾ ಹೆಗ್ಡೆ ಬಾಲಿವುಡ್ ನಲ್ಲಿ ಸಲ್ಮಾನ್ ಖಾನ್ ಜೊತೆಗೆ ಕಿಸಿ ಕಿ ಬಾಯ್ ಕಿಸಿ ಕಾ ಜಾನ್ ಎಂಬ ಸಿನೆಮಾದಲ್ಲಿ ನಟಿಸುತ್ತಿದ್ದಾರೆ. ಈ ಸಿನೆಮಾದ ಟೀಸರ್‍ ಸಹ ಕೆಲವು ದಿನಗಳ ಹಿಂದೆಯಷ್ಟೆ ಬಿಡುಗಡೆಯಾಗಿದ್ದು, ಒಳ್ಳೆಯ ಸ್ಪಂದನೆ ಪಡೆದುಕೊಂಡಿದೆ. ಇನ್ನೂ ಟಾಲಿವುಡ್ ನಲ್ಲಿ ಮಹೇಶ್ ಬಾಬು ಹಾಗೂ ತ್ರಿವಿಕ್ರಮ್ ಶ್ರೀನಿವಾಸ್ ಕಾಂಬಿನೇಷನ್ ನಲ್ಲಿ ಮೂಡಿಬರಲಿರುವ SSMB28 ಸಿನೆಮಾದಲ್ಲಿ ಪೂಜಾ ಹೆಗ್ಡೆ ಮಹೇಶ್ ಬಾಬು ಗೆ ಜೋಡಿಯಾಗಿ ನಟಿಸುತ್ತಿದ್ದಾರೆ.

Most Popular

To Top