ಕಾಂತಾರ ಚಾಪ್ಟರ್-1 ಸಿನೆಮಾದಲ್ಲಿ ನಟಿಸಲು ಅವಕಾಶ ಕೊಡಿ ಎಂದ ಸೌತ್ ನಟಿ ಪಾಯಲ್ ರಾಜ್ ಪೂತ್……!

Follow Us :

ದೇಶದಾದ್ಯಂತ ಭಾರಿ ಸಂಚಲನ ಸೃಷ್ಟಿಸಿದ ಕಾಂತಾರ ಸಿನೆಮಾ ಕನ್ನಡ ಸಿನಿರಂಗದತ್ತ ಎಲ್ಲರನ್ನೂ ತಿರುಗಿ ನೋಡುವಂತೆ ಮಾಡಿತ್ತು. ಇದೀಗ ಕಾಂತಾರ ಸಿನೆಮಾದ ಪ್ರೀಕ್ವೆಲ್ ಸೆಟ್ಟೇರಲು ಸಿದ್ದವಾಗುತ್ತಿದೆ. ಕಾಂತಾರ-1 ಸಿನೆಮಾದ ಟೈಟಲ್ ಪೋಸ್ಟರ್‍ ಹಾಗೂ ಟೀಸರ್‍ ರಿಲೀಸ್ ಆದ ಕಡಿಮೆ ಸಮಯದಲ್ಲೇ ಭಾರಿ ಕ್ರೇಜ್ ಪಡೆದುಕೊಂಡಿತ್ತು. ಈ ಸಿನೆಮಾ ಪೋಸ್ಟರ್‍ ಹಾಗೂ ಟೀಸರ್‍ ಎಲ್ಲರನ್ನೂ ಬೆರಗಾಗುವಂತೆ ಮಾಡಿತ್ತು. ಇದೀಗ ಈ ಸಿನೆಮಾದ ಆಡಿಷನ್ಸ್ ಸಹ ನಡೆಯುತ್ತಿದ್ದು, ಹಾಟ್ ಬ್ಯೂಟಿ ಪಾಯಲ್ ಸಿನೆಮಾದಲ್ಲಿ ನಟಿಸೋಕೆ ನನಗೂ ಅವಕಾಶ ಕೊಡಿ ಎಂದು ಕಾಮೆಂಟ್ ಮಾಡಿದ್ದಾರೆ ಎಂಬ ಸುದ್ದಿ ವೈರಲ್ ಆಗುತ್ತಿದೆ.

ಕೆಜಿಎಫ್ ಸಿನೆಮಾದ ಬಳಿಕ ಕನ್ನಡ ಸಿನಿರಂಗದತ್ತ ನೋಡುವಂತೆ ಮಾಡಿದ್ದು ಕಾಂತಾರ ಸಿನೆಮಾ ಎಂದರೇ ತಪ್ಪಾಗಲಾರದು. ಮೊದಲಿಗೆ ರೀಜಿನಲ್ ಸಿನೆಮಾ ಆಗಿ ಕನ್ನಡದಲ್ಲಿ ಬಿಡುಗಡೆಯಾಗಿ ಸೆನ್ಷೇಷನಲ್ ಹಿಟ್ ಪಡೆದುಕೊಂಡಿತ್ತು. ಬಳಿ ಈ ಸಿನೆಮಾ ವಿವಿಧ ಭಾಷೆಗಳಲ್ಲಿ ತೆರೆಕಂಡು ಎಲ್ಲಾ ಭಾಷೆಗಳಲ್ಲೂ ಭಾರಿ ಸಕ್ಸಸ್ ಪಡೆದುಕೊಂಡಿತ್ತು. ಸೂಪರ್‍ ಸ್ಟಾರ್‍ ರಜನಿಕಾಂತ್ ಸೇರಿದಂತೆ ಅನೇಕ ಸ್ಟಾರ್‍ ಗಳು ಈ ಸಿನೆಮಾ ನೋಡಿ ಹಾಡಿಹೊಗಳಿದರು. ಇದೀಗ ಕಾಂತಾರ ಸಿನೆಮಾದ ಕಥೆ ನಡೆಯುವುದಕ್ಕೂ ಮುಂಚೆ ಏನಾಗಿತ್ತು ಎಂಬುದನ್ನು ಕಾಂತಾರಾ ಚಾಪ್ಟರ್‍-1 ರಲ್ಲಿ ತೋರಿಸಲಿದ್ದಾರೆ ಎನ್ನಲಾಗಿದೆ.

ಇನ್ನೂ ಕಾಂತಾರಾ-1 ಸಿನೆಮಾದಲ್ಲಿ ನಟಿಸಲು ಹೊಂಬಾಳೆ ಫಿಲಂಸ್ ಅವಕಾಶ ನೀಡಿದೆ. ಈ ಸಂಬಂಧ ಪೋಸ್ಟರ್‍ ಒಂದನ್ನು ಹಂಚಿಕೊಂಡಿದೆ. ಕಲಾವಿದರು ಬೇಕಾಗಿದ್ದಾರೆ ಎಂದು ಹೋಂಬಾಳೆ ಫಿಲಂಸ್ ಪೋಸ್ಟರ್‍ ಹಂಚಿಕೊಂಡಿದೆ. ಈ ಪೋಸ್ಟರ್‍ ನಲ್ಲಿ ಪುರುಷರ ವಯಸ್ಸು 30 ರಿಂದ 60 ವರ್ಷ ಹಾಗೂ ಮಹಿಳೆಯರ ವಯಸ್ಸು 18 ರಿಂದ 60 ವರ್ಷದ ಅಂತರದಲ್ಲಿರಬೇಕು ಎಂದು ಪೋಸ್ಟರ್‍ ನಲ್ಲಿ ಮಾಹಿತಿ ಹಂಚಿಕೊಳ್ಳಲಾಗಿದೆ. ಇನ್ನೂ ಆಸಕ್ತರು ನೊಂದಣಿ ಮಾಡಲು www.kantara.film ಅಂತರ್ಜಾಲ ತಾಣಕ್ಕೆ ಭೇಟಿ ನೀಡಬೇಕು. ಡಿ.14 ರೊಳಗೆ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ. ಈ ಪೋಸ್ಟರ್‍ ನೋಡಿದ ನಟಿ ಪಾಯಲ್ ಆಡಿಷನ್ ಗಾಗಿ ಒಪೆನ್ ಆಗಿಯೇ ನನ್ನನ್ನು ಟ್ರೈ ಮಾಡಿ ಎಂದು ಟ್ವೀಟ್ ಮಾಡಿದ್ದಾರೆ.

ಕಾಂತಾರ ಚಾಪ್ಟರ್‍-1 ಸಿನೆಮಾದಲ್ಲಿ ನಾನು ನಟಿಸಲು ತುಂಬಾ ಆಸಕ್ತಿಯಿಂದ ಇದ್ದೀನಿ. ಪ್ಲೀಸ್ ಈ ಆಡಿಷನ್ ಗಾಗಿ ನನ್ನನ್ನು ಸಹ ಕನ್ಸಿಡರ್‍ ಮಾಡಿ. ನನ್ನ ಪರವಾಗಿ ನಿಮಗೆ ಈ ಸಂದೇಶ ಕಳುಹಿಸುತ್ತಿದ್ದೇನೆ ಎಂದು ಕಾಂತಾರಾ ಆಡಿಷನ್ ಪೋಸ್ಟರ್‍ ಗೆ ರಿಪ್ಲೆ ಕೊಟ್ಟಿದ್ದಾರೆ. ಇನ್ನೂ ಪಾಯಲ್ ಹಂಚಿಕೊಂಡ ಈ ಪೋಸ್ಟ್ ಇದೀಗ ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ. ಆಕೆಯ ಮನವಿಯನ್ನು ರಿಷಭ್ ಶೆಟ್ಟಿ ಪುರಸ್ಕರಿಸುತ್ತಾರಾ ಇಲ್ಲವೇ ಎಂಬುದನ್ನು ಕಾದು ನೋಡಬೇಕಿದೆ.