ಅದ್ದೂರಿಯಾಗಿ ನಡೆದ ರಾಕಿಂಗ್ ಸ್ಟಾರ್ ಯಶ್-ರಾಧಿಕಾ ಪುತ್ರಿ ಐರಾ ಹುಟ್ಟುಹಬ್ಬ, ವೈರಲ್ ಆದ ವಿಡಿಯೋ….!

Follow Us :

ಸ್ಯಾಂಡಲ್ ವುಡ್ ನಲ್ಲಿ ಕ್ಯೂಟ್ ಜೋಡಿ ಎಂದೇ ಕರೆಯಲಾಗುವ ಯಶ್ ಹಾಗೂ ರಾಧಿಕಾ ರವರ ಮುದ್ದಿನ ಮಗಳಾದ ಐರಾ ಹುಟ್ಟುಹಬ್ಬ ಇತ್ತೀಚಿಗಷ್ಟೆ ಅದ್ದೂರಿಯಾಗಿ ಆಚರಿಸಿದ್ದರು. ಐರಾ ಳ ಐದನೇ ವರ್ಷದ ಹುಟ್ಟುಹಬ್ಬ ಡಿ.2 ರಂದು ಅದ್ದೂರಿಯಾಗಿ ಆಚರಿಸಿದ್ದು, ಈ ಸಂಬಂಧ ವಿಡಿಯೋ ಒಂದನ್ನು ರಾಧಿಕಾ ಪಂಡಿತ್ ತಮ್ಮ ಅಧಿಕೃತ ಇನ್ಸ್ಟಾ ಖಾತೆಯಲ್ಲಿ ಹಂಚಿಕೊಂಡಿದ್ದು, ವಿಡಿಯೋ ಸಖತ್ ವೈರಲ್ ಆಗುತ್ತಿದೆ. ಅಭಿಮಾನಿಗಳು ಹಾಗೂ ನೆಟ್ಟಿಗರು ವಿವಿಧ ಕಾಮೆಂಟ್ ಗಳನ್ನು ಹರಿಬಿಡುತ್ತಿದ್ದಾರೆ.

ಕೆಜಿಎಫ್ ಸಿನೆಮಾದ ಮೂಲಕ ವಿಶ್ವದಾದ್ಯಂತ ಕ್ರೇಜ್ ಪಡೆದುಕೊಂಡ ಯಶ್ ಕೆಜಿಎಫ್ ಸಿನೆಮಾದ ಶೂಟಿಂಗ್ ಕಾರಣದಿಂದ ಕುಟುಂಬದೊಂದಿಗೆ ಸಮಯ ಕಳೆಯಲು ಆಗಿರಲಿಲ್ಲ. ಆದರೆ ಕೆಜಿಎಫ್-2 ಸಿನೆಮಾ ತೆರೆಕಂಡ ಬಳಿಕ ಯಶ್ ತಮ್ಮ ಕುಟುಂಬದೊಂದಿಗೆ ಸಮಯ ಕಳೆದಿದ್ದಾರೆ. ಇನ್ನೂ ಯಶ್ ಪತ್ನಿ ರಾಧಿಕಾ ಪಂಡಿತ್ ಮದುವೆಯಾದ ಬಳಿಕ ಸಿನೆಮಾಗಳಿಗೆ ಬೈ ಹೇಳಿ ಕುಟುಂಬ ನಿರ್ವಹಣೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಆಗಾಗ ಸೋಷಿಯಲ್ ಮಿಡಿಯಾದಲ್ಲಿ ಆಕೆ ಮಕ್ಕಳೊಂದಿಗೆ ಪೊಟೋಗಳನ್ನು ವಿಡಿಯೋಗಳನ್ನು ಹಂಚಿಕೊಳ್ಳುತ್ತಾ ಅಭಿಮಾನಿಗಳೊಂದಿಗೆ ಟಚ್ ನಲ್ಲಿರುತ್ತಾರೆ. ಇದೀಗ ತನ್ನ ಮಗಳಾದ ಐರಾ ಹುಟ್ಟುಹಬ್ಬದ ಆಚರಣೆಯ ವಿಡಿಯೋ ಸೋಷಿಯಲ್ ಮಿಡಿಯಾದಲ್ಲಿ ಹಂಚಿಕೊಂಡಿದ್ದಾರೆ.

ನಟಿ ರಾಧಿಕಾ ಪಂಡಿತ್ ತಮ್ಮ ಅಧಿಕೃತ ಇನ್ಸ್ಟಾ ಖಾತೆಯಲ್ಲಿ ಐರಾ ಹುಟ್ಟುಹಬ್ಬದ ಸೆಲೆಬ್ರೆಷನ್ ವಿಡಿಯೋ ಹಂಚಿಕೊಂಡಿದ್ದಾರೆ. ‘2.12.2018, ನನ್ನ ಏಂಜಲ್​​​, ನೀನು ನನ್ನ ಜೀವನದಲ್ಲಿ ಬಂದ ವಿಶೇಷ ದಿನವಿದು. ನೀನು ನನ್ನ ಜೀವನದಲ್ಲಿ ಸಂತೋಷವನ್ನು ತಂದಿದ್ದಿ. ನಿನಗೆ ಐದು ವರ್ಷಗಳಾಯಿತು ಎಂಬುದನ್ನು ನಂಬಲು ಸಾಧ್ಯವಾಗುತ್ತಿಲ್ಲ ಎಂದು ಕಾಮೆಂಟ್ ಮಾಡಿ ವಿಡಿಯೋ ಪೋಸ್ಟ್ ಮಾಡಿದ್ದಾರೆ. ಡಿ.2 ರಂದು ಐರಾ ತಮ್ಮ ಐದನೇ ವರ್ಷದ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ. ಈ ವಿಡಿಯೋ ಇದೀಗ ಸೊಷಿಯಲ್ ಮಿಡಿಯಾದಲ್ಲಿ ಭಾರಿ ಸದ್ದು ಮಾಡುತ್ತಿದೆ. ಇನ್ನೂ ಕಳೆದ ತಿಂಗಳು ಯಥರ್ವ್ ಹುಟ್ಟುಹಬ್ಬವನ್ನು ಸಹ ಅದ್ದೂರಿಯಾಗಿ ಆಚರಣೆ ಮಾಡಿದ್ದರು. ಬೆಂಗಳೂರಿನ ಹೋಟೆಲ್ ಒಂದರಲ್ಲಿ ಈ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದು, ಅಭಿಮಾನಿಗಳು ವಿವಿಧ ರೀತಿಯಲ್ಲಿ ಶುಭಾಷಯಗಳನ್ನು ಹರಿಬಿಡುತ್ತಿದ್ದಾರೆ.