News

ಶಬರಿಮಲೆಯಲ್ಲಿ ಭಾರಿ ಭಕ್ತರ ದಂಡು, ಶಬರಿಮಲೆಯಲ್ಲಿನ ಅವ್ಯವಸ್ಥೆಯ ವಿರುದ್ದ ಸಿಡಿದ ಭಕ್ತರಿಂದ ಪ್ರತಿಭಟನೆ….!

ಕೇರಳದ ಶಬರಿಮಲೆಯಲ್ಲಿ ನೆಲೆಸಿರುವ ಅಯ್ಯಪ್ಪಸ್ವಾಮಿಯ ದರ್ಶನಕ್ಕೆ ಲಕ್ಷಾಂತರ ಭಕ್ತರು ಆಗಮಿಸುತ್ತಿರುತ್ತಾರೆ. ಬುಧವಾರ ಶಬರಿಮಲೆಗೆ ಸಾವಿರಾರು ಸಂಖ್ಯೆಯ ಭಕ್ತರು ಆಗಮಿಸಿದ್ದಾರೆ. ಗಂಟೆ ಗಟ್ಟಲೇ ಸರದಿ ಸಾಲಿನಲ್ಲಿ ನಿಂತ ಪರಿಣಾಮ ಬಾಲಕಿಯೊಬ್ಬಳು ಮೃತಪಟ್ಟಿದ್ದಾರೆ. ಮತ್ತೊಂದು ಅವಘಡದಲ್ಲಿ ಯಾತ್ರಿಕನೊಬ್ಬ ಅಸುನೀಗಿದ ಘಟನೆ ಸಹ ನಡೆದಿದೆ. ಶಬರಿಮಲೆಯಲ್ಲಿ ಅವ್ಯವಸ್ಥೆಯ ವಿರುದ್ದ ಭಕ್ತರು ಪ್ರತಿಭಟನೆ ನಡೆಸಿದ್ದಾರೆ. ಈ ನಡುವೆ ಅಲ್ಲಿನ ಸರ್ಕಾರ ಭಕ್ತರಿಗೆ ಸೂಕ್ತ ವ್ಯವಸ್ಥೆ ಮಾಡಿಕೊಡಲು ಕ್ರಮ ವಹಿಸುವುದಾಗಿ ತಿಳಿಸಿದ್ದಾರೆ.

ಶಬರಿಮಲೆಯಲ್ಲಿ ಅಯ್ಯಪ್ಪನ ದರ್ಶನಕ್ಕಾಗಿ ಸರತಿ ಸಾಲಿನಲ್ಲಿ ನಿಂತಿದ್ದ 11 ವರ್ಷದ ಬಾಲಕಿ ಕುಸಿದು ಬಿದ್ದು ಮೃತಪಟ್ಟಿದ್ದಾಳೆ. ಆಕೆ ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದಳು. ಭಾರಿ ಜನಸಂಖ್ಯೆ ಜಮಾಯಿಸಿದ್ದ ಕಾರಣದಿಂದ ಅಯ್ಯಪ್ಪನ ದರ್ಶನ ತಡವಾಗಿತ್ತು. ಈ ವೇಳೆ ಸುಸ್ತಾದ ಬಾಲಕಿ ಸ್ಥಳದಲ್ಲೇ ಕುಸಿದು ಬಿದ್ದಿದ್ದಳು. ಕೂಡಲೇ ಬಾಲಕಿಯನ್ನು ಆಸ್ಪತ್ರೆಗೆ ದಾಖಲಿಸಿತ್ತಾದರೂ ಆಕೆ ಉಳಿಯಲಿಲ್ಲ. ಇನ್ನೂ ಬಸ್ ಹತ್ತುವಾಗ ಅವಘಡದಲ್ಲಿ ಭಕ್ತರೊಬ್ಬರು ಮೃತಪಟ್ಟಿದ್ದಾರೆ. ಪೆರುನಾಡಿನ ಕೂನಂಕಾರದಲ್ಲಿ ಭಾರಿ ವಾಹನ ದಟ್ಟಣೆ ಉಂಟಾಗಿ ತಮಿಳುನಾಡು ಮೂಲದ ಪೆರಿಯಸ್ವಾಮಿ (54) ಎಂಬುವವರು ಮೃತಪಟ್ಟಿದ್ದಾರೆ. ಊಟ ಮಾಡಲು ಹೋದ ಪೆರಿಯಸ್ವಾಮಿ ಹೋಗಿದ್ದರು. ಸ್ವಲ್ಪ ಸಮಯದ ಬಳಿಕ ಬಸ್ ಚಲಿಸಲು ಆರಂಭಿಸಿದೆ. ಬಸ್ ಹತ್ತಲು ಬಸ್ ಹಿಂದೆಯೇ ಪೆರಿಯಸ್ವಾಮಿ ಓಡಿದ್ದಾರೆ. ಈ ವೇಳೆ ಆಯತಪ್ಪಿ ರಸ್ತೆ ಮೇಲೆ ಬಿದ್ದ ಪರಿಣಾಮ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಇನ್ನೂ ಲಕ್ಷಾಂತರ ಮಂದಿ ಒಟ್ಟಿಗೆ ಶಬರಿಮಲೆಗೆ ಬಂದಿದ್ದರಿಂದ ಜನದಟ್ಟಣೆ ಹೆಚ್ಚಾಗಿದೆ. ಈ ಕಾರಣದಿಂದ ಭಕ್ತರು ಗಂಟೆ ಗಟ್ಟಲೇ ನಿಂತಲ್ಲೆ ನಿಲ್ಲುವಂತಹ ಸ್ಥಿತಿ ನಿರ್ಮಾಣವಾಗಿತ್ತು. ಈ ಕಾರಣದಿಂದ ಬೇಸತ್ತ ಅಯ್ಯಪ್ಪ ಭಕ್ತರು ಕೇರಳ ಸರ್ಕಾರ ಹಾಗೂ ಅಯ್ಯಪ್ಪಸ್ವಾಮಿ ಆಡಳಿತ ಮಂಡಳಿಯ ವಿರುದ್ದ ಆಕ್ರೋಷ ಹೊರಹಾಕಿದ್ದಾರೆ. ಸೂಕ್ತ ವ್ಯವಸ್ಥೆ ಕಲ್ಪಿಸಿಕೊಡುವಂತೆ ಆಗ್ರಹಿಸಿ ಪಂಬಾ ಎರುಮೆಲಿ ರಸ್ತೆಯನ್ನು ತಡೆದು ಪ್ರತಿಭಟನೆ ನಡೆಸಿದ್ದಾರೆ. ಈ ವೇಳೆ ಕೇರಳ ಸರ್ಕಾರ ಪ್ರತಿಕ್ರಿಯೆ ನೀಡಿ ದರ್ಶನ ಹಾಗೂ ಭಕ್ತರ ದಟ್ಟಣೆಯನ್ನು ತಡೆಯಲು ಕ್ರಮ ವಹಿಸಲಾಗಿದೆ, ನ್ಯಾಯಾಲಯದ ಆದೇಶದ ಮೇರೆಗೆ ಭಕ್ತರ ಸಂಖ್ಯೆಗೂ ನಿರ್ಬಂಧ ಹೇರಲಾಗಿದೆ. ಬಸ್ ಗಳ ಸಂಚಾರವನ್ನು ಸಹ ಹೆಚ್ಚಿಸಲಾಗಿದೆ. ನಿಲಕ್ಕಲ್ ಮತ್ತು ಪಂಪಾದಲ್ಲಿ ಭಕ್ತರು ಎದುರಿಸುತ್ತಿದ್ದ ಸಮಸ್ಯೆಗಳನ್ನು ಸಹ ಬಗೆಹರಿಸಲಾಗಿದೆ. ಚುನಾವಣೆ ಸಮೀಪ ಆಗುತ್ತಿರುವ ಹಿನ್ನೆಲೆಯಲ್ಲಿ ವಿಪಕ್ಷಗಳು ವಿನಾಕಾರಣ ವಿವಾದ ಸೃಷ್ಟಿ ಮಾಡುತ್ತಿವೆ ಸಚಿವ ಕೆ.ರಾಧಾಕೃಷ್ಣನ್ ಹೇಳಿದ್ದಾರೆ.

Most Popular

To Top