Film News

ನಿರ್ದೇಶಕನೊಂದಿಗೆ ರೊಮ್ಯಾಂಟಿಕ್ ಹಾಡಿನಲ್ಲಿ ಬೋಲ್ಡ್ ಆಗಿ ನಟಿಸಿದ ಸ್ಟಾರ್ ನಟಿ ಶ್ರುತಿ ಹಾಸನ್, ವೈರಲ್ ಆದ ಪೊಟೋಸ್…..!

ಸೌತ್ ಸಿನಿರಂಗದ ಸ್ಟಾರ್‍ ನಟಿ ಶ್ರುತಿ ಹಾಸನ್ ತನ್ನ ಅಭಿನಯದ ಮೂಲಕ ಬಹುಬೇಡಿಕೆ ಸೃಷ್ಟಿಸಿಕೊಂಡು ಭಾರಿ ಆಫರ್‍ ಗಳನ್ನು ಪಡೆದುಕೊಳ್ಳುತ್ತಾ ಸಿನಿರಂಗದಲ್ಲಿ ಪುಲ್ ಬ್ಯುಸಿಯಾಗಿದ್ದಾರೆ. ಕೊನೆಯದಾಗಿ ಶ್ರುತಿ ಹಾಸನ್ ಸಲಾರ್‍ ಸಿನೆಮಾದಲ್ಲಿ ನಟಿಸಿದ್ದರು. ಈ ಸಿನೆಮಾ ಬ್ಲಾಕ್ ಬ್ಲಸ್ಟರ್‍ ಹಿಟ್ ಆಗಿದ್ದು, ಒಳ್ಳೆಯ ಕಲೆಕ್ಷನ್ ಸಹ ಮಾಡಿದೆ. ಇದೀಗ ಆಕೆ ನಿರ್ದೇಶಕರೊಬ್ಬರೊಂದಿಗೆ ಸ್ಪೇಷಲ್ ಹಾಡಿನಲ್ಲಿ ರೊಮ್ಯಾಂಟಿಕ್ ಆಗಿ ನಟಿಸಿದ್ದು, ಆ ಹಾಡಿನ ಪ್ರೊಮೋ ಭಾರಿ ಸದ್ದು ಮಾಡುತ್ತಿದೆ. ಅಷ್ಟಕ್ಕೂ ಆ ನಿರ್ದೇಶಕ ಯಾರು ಎಂಬ ವಿಚಾರಕ್ಕೆ ಬಂದರೇ,

ಸ್ಟಾರ್‍ ನಟಿ ಶ್ರುತಿ ಹಾಸನ್ ಕಳೆದ ವರ್ಷದಿಂದ ಬ್ಯಾಕ್ ಟು ಬ್ಯಾಕ್ ಸಕ್ಸಸ್ ಪಡೆದುಕೊಂಡು ಲಕ್ಕಿ ಹಿರೋಯಿನ್ ಆಗಿದ್ದಾರೆ. ಇದೀಗ ಆಕೆ ಸ್ಪೇಷಲ್ ಹಾಡೊಂದರಲ್ಲಿ ನಟಿಸಿದ್ದಾರೆ. ಈ ಹಾಡಿನಲ್ಲಿ ಆಕೆ ತುಂಬಾ ಬೋಲ್ಡ್ ಆಗಿ ಕಾಣಿಸಿಕೊಂಡಿದ್ದಾರೆ. ಈ ಸ್ಷೇಷಲ್ ಹಾಡಿನಲ್ಲಿ ಸ್ಟಾರ್‍ ನಿರ್ದೇಶಕ ಲೋಕೇಶ್ ಕನಗರಾಜ್ ಹಿರೋ ಆಗಿದ್ದಾರೆ. ಖೈದಿ, ಲಿಯೋ ಸಿನೆಮಾಗಳ ಮೂಲಕ ಯಶಸ್ಸು ಕಂಡ ಲೋಕೇಶ್ ಕನಗರಾಜ್ ರವರು ಸಿನೆಮಾ ಮಾಡುತ್ತಾರೆ ಎಂದರೇ ಸಾಕು ದೊಡ್ಡ ದೊಡ್ಡ ನಿರ್ಮಾಪಕರು ಸಹ ಹಣ ಹೂಡುತ್ತಾರೆ. ಇದೀಗ ಲೋಕೇಶ್ ಕನಗರಾಜ್ ಹಾಗೂ ಶ್ರುತಿ ಹಾಸನ್ ಕಾಂಬಿನೇಷನ್ ನಲ್ಲಿ ಒಂದು ಸ್ಪೇಷಲ್ ಹಾಡು ಬಿಡುಗಡೆಗೆ ಸಿದ್ದವಾಗಿದೆ. ಸದ್ಯ ಈ ಹಾಡಿನ ವಿಡಿಯೋ ಒಂದು ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ.

ನಟಿ ಶ್ರುತಿ ಹಾಸನ್ ಹಾಗೂ ನಿರ್ದೇಶಕ ಲೋಕೇಶ್ ಕನಗರಾಜ್ ರವರ ಕಾಂಬಿನೇಷನ್ ನಲ್ಲಿ ಸ್ಪೇಷಲ್ ವಿಡಿಯೋ ಸಾಂಗ್ ಸಿದ್ದವಾಗಿದೆ. ಈ ಹಾಡಿನಲ್ಲಿ ಲೋಕೇಶ್ ಕನಗರಾಜ್ ಹಿರೋ ಆಗಿದ್ದಾರೆ. ಈ ಹಾಡಿಗೆ ಲೋಕನಾಯಕ ಕಮಲ್ ಹಾಸನ್ ರವರೇ ಸಾಹಿತ್ಯ ಬರೆದಿದ್ದಾರೆ. ಈ ಹಾಡನ್ನು ಶ್ರುತಿ ಹಾಸನ್ ರವರೇ ನಿರ್ದೇಶನ ಮಾಡುತ್ತಿದ್ದಾರೆ. ಇದೀಗ ಈ ಹಾಡಿನ ಪ್ರೊಮೋ ರಿಲೀಸ್ ಆಗಿದೆ. ಪುಲ್ ವಿಡಿಯೋ ಮಾ.25 ರಂದು ರಿಲೀಸ್ ಆಗಲಿದೆ. ಅನೇಕ ಸ್ಟಾರ್‍ ಗಳಿಗೆ ನಟನೆ ಹೇಳಿಕೊಟ್ಟ ನಿರ್ದೇಶಕ ಲೋಕೇಶ್ ಕನಗರಾಜ್ ನಟನಾಗಿದ್ದಾರೆ. ಈ ಕಾರಣಕ್ಕೆ ಅವರು ಇನಿಮೇಲ್ ಹಾಡಿನಲ್ಲಿ ನಾಯಕನಾಗಿದ್ದಾರೆ. ಇದೀಗ ಬಿಡುಗಡೆಯಾದ ಪ್ರೊಮೋದಲ್ಲಿ ಲೋಕೇಶ್ ಹಾಗೂ ಶ್ರುತಿ ತುಂಬಾನೆ ಬೋಲ್ಡ್ ಆಗಿ ಕಾಣಿಸಿಕೊಂಡಿದ್ದಾರೆ.

ಕಳೆದ ಫೆಬ್ರವರಿ ಮಾಹೆಯಲ್ಲಿ ಇವರಿಬ್ಬರ ಕಾಂಬಿನೇಷನ್ ಕುರಿತು ಘೋಷಣೆ ಮಾಡಿದ್ದರು. ಆಗ ಎಲ್ಲರೂ ಒಟ್ಟಾಗಿ ಸಿನೆಮಾ ಮಾಡುತ್ತಾರೆ ಎಂದು ಭಾವಿಸಿದ್ದರು. ಇದೀಗ ಅವರು ಒಂದು ವಿಡಿಯೋ ಸಾಂಗ್ ಮೂಲಕ ಪ್ರೇಕ್ಷಕರ ಮುಂದೆ ಬರಲಿದ್ದಾರೆ. ಈ ಹಾಡಿನ ಪ್ರೊಮೋದಲ್ಲಿ ಇಬ್ಬರೂ ಬೋಲ್ಡ್ ಆಗಿ ಕಾಣಿಸಿಕೊಂಡಿದ್ದು, ಈ ಪೊಟೋಗಳು ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿವೆ.

Most Popular

To Top