ಕಿಕ್ಕೇರಿಸುವಂತಹ ಗ್ಲಾಮರಸ್ ಪೊಟೋಶೂಟ್ಸ್ ಹಂಚಿಕೊಂಡ ಹೋಮ್ಲಿ ಬ್ಯೂಟಿ ಸ್ನೇಹಾ, ವೈರಲ್ ಆದ ಪೊಟೋಸ್….!

Follow Us :

ತೆಲುಗು ಸಿನಿರಂಗದಲ್ಲಿ ಓವರ್‍ ಗ್ಲಾಮರ್‍ ಶೋ ಮಾಡದೇ ಕ್ರೇಜ್ ಪಡೆದುಕೊಂಡ ನಟಿಯರಲ್ಲಿ ಸ್ನೇಹಾ ಸಹ ಒಬ್ಬರಾಗಿದ್ದಾರೆ. ಪ್ರಿಯಮೈನ ನೀಕು ಎಂಬ ಸಿನೆಮಾದ ಮೂಲಕ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟರು. 2001 ರಲ್ಲಿ ಈ ಸಿನೆಮಾ ಬಿಡುಗಡೆಯಾಗಿದ್ದು, ಒಳ್ಳೆಯ ಕಲೆಕ್ಷನ್ ಮಾಡಿ ಸೂಪರ್‍ ಹಿಟ್ ಆಗಿತ್ತು. ರೊಮ್ಯಾಂಟಿಕ್ ಲವ್ ಸ್ಟೋರಿಯುಳ್ಳ ಈ ಸಿನೆಮಾದ ಬಳಿಕ ಸ್ನೇಹಾಗೆ ಮತಷ್ಟು ಸಿನೆಮಾಗಳ ಆಫರ್‍ ಗಳು ಹರಿದುಬಂದವು. ‌ಇತ್ತಿಚಿಗೆ ಸೋಷಿಯಲ್ ಮಿಡಿಯಾದಲ್ಲೂ ಆಕ್ಟೀವ್ ಆಗಿರುವ ಸ್ನೇಹಾ ಬ್ಯಾಕ್ ಟು ಬ್ಯಾಕ್ ಪೊಟೋಶೂಟ್ಸ್ ಮೂಲಕ ಸಖತ್ ಸದ್ದು ಮಾಡುತ್ತಿದ್ದಾರೆ.

ನಟಿ ಸ್ನೇಹಾ ಸೌತ್ ಸಿನೆಮಾಗಳಲ್ಲಿ ಹೋಮ್ಲಿ ಬ್ಯೂಟಿ ಎಂದೇ ಖ್ಯಾತಿ ಪಡೆದುಕೊಂಡಿದ್ದಾರೆ. ಆಕೆ ಅಭಿನಯದ ಬಹುತೇಕ ಎಲ್ಲಾ ಸಿನೆಮಾಗಳಲ್ಲೂ ಸಂಪ್ರದಾಯಬದ್ದವಾಗಿಯೇ ಕಾಣಿಸಿಕೊಂಡಿದ್ದಾರೆ. ನಾಗಾರ್ಜುನ್, ಬಾಲಕೃಷ್ಣ ರಂತಹ ಸ್ಟಾರ್‍ ನಟರ ಸಿನೆಮಾಗಳಲ್ಲೂ ಸಹ ನಟಿಸಿದ್ದಾರೆ. ಹನುಮಾನ್ ಜಂಕ್ಷನ್, ಶ್ರೀರಾಮದಾಸು, ಸಂಕ್ರಾಂತಿ ಸೇರಿದಂತೆ ಅನೇಕ ಹಿಟ್ ಸಿನೆಮಾಗಳು ಆಕೆಯ ಖಾತೆಯಲ್ಲಿವೆ. ಅದರಲ್ಲೂ ಕಾಲಿವುಡ್ ನಲ್ಲೂ ಸಹ ಅವಕಾಶಗಳನ್ನು ಗಿಟ್ಟಿಸಿಕೊಂಡು ಅಲ್ಲೂ ಸಹ ಬೇಡಿಕೆಯನ್ನು ಹೆಚ್ಚಿಸಿಕೊಂಡಿದ್ದರು. ಇನ್ನೂ ಕಾಲಿವುಡ್ ನಲ್ಲಿ ಮಾತ್ರ ಬೋಲ್ಡ್ ಸೀನ್ ಗಳಲ್ಲಿ ನಟಿಸಿದ್ದರು. ಧನುಷ್ ಅಭಿನಯದ ಧೂಲ್ ಪೇಟ್ ಸಿನೆಮಾದಲ್ಲಿ ಸ್ನೇಹಾ ವೇಶ್ಯೆಯ ಪಾತ್ರದಲ್ಲಿ ಕಾಣಿಸಿಕೊಂಡು ಎಲ್ಲರನ್ನೂ ಶಾಕ್ ಆಗುವಂತೆ ಮಾಡಿದ್ದರು.

ಇನ್ನೂ ನಟಿ ಸ್ನೇಹಾ ಸದ್ಯ ಸೆಕೆಂಡ್ ಇನ್ನಿಂಗ್ಸ್ ಸಹ ಶುರು ಮಾಡಿದ್ದಾರೆ. ಕೆಲವೊಂದು ಕಿರು ತೆರೆ ಶೋಗಳಲ್ಲೂ ಸಹ ಭಾಗಿಯಾಗುತ್ತಿದ್ದಾರೆ. ಅತ್ತ ಸೋಷಿಯಲ್ ಮಿಡಿಯಾದಲ್ಲೂ ಆಕ್ಟಿವ್ ಆಗಿದ್ದು ಆಗಾಗ ಕೆಲವೊಂದು ಪೊಟೋಶೂಟ್ಸ್ ಮೂಲಕ ಸದ್ದು ಮಾಡುತ್ತಿರುತ್ತಾರೆ. ಈ ಹಾದಿಯಲ್ಲೇ ಆಕೆ ಗ್ರೀನ್ ಚೂಡಿದಾರ್‍ ನಲ್ಲಿ ಬೊಂಬೆಯಂತೆ ಕಾಣಿಸಿಕೊಂಡಿದ್ದಾರೆ. ಟ್ರೆಡಿಷನಲ್ ಲುಕ್ಸ್ ನಲ್ಲೂ ಯುವಕರ ಹೃದಯ ಕದಿಯುವಂತಹ ಪೋಸ್ ನೀಡುತ್ತಿದ್ದಾರೆ. ಆಕೆಯ ಗ್ಲಾಮರ್‍ ನೋಡಿದರೇ ಯಂಗ್ ನಟಿಯರನ್ನೂ ಮೀರಿಸುವಂತಿದೆ ಎಂದು ಹೇಳಲಾಗುತ್ತಿದೆ. ಇನ್ನೂ ಸ್ನೇಹಾ ಪೊಟೋಗಳು ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದ್ದು, ಅಭಿಮಾನಿಗಳು ಹಾಗೂ ನೆಟ್ಟಿಗರು ಮೆಚ್ಚುಗೆಯ ಕಾಮೆಂಟ್ ಗಳು ಹಾಗೂ ಲೈಕ್ ಗಳ ಸುರಿಮಳೆಗೈದಿದ್ದಾರೆ.

ಇನ್ನೂ ಕಳೆದ 2012 ರಲ್ಲಿ ನಟ ಪ್ರಸನ್ನ ರವರನ್ನು ಸ್ನೇಹ ಪ್ರೀತಿಸಿ ಮದುವೆಯಾದರು. ಮದುವೆಗೂ ಮುಂಚೆ ಸುಮಾರು ವರ್ಷಗಳ ಕಾಲ ಡೇಟಿಂಗ್ ನಡೆಸಿದ ಈ ಜೋಡಿ ಮದುವೆಯಾದರು. ಇನ್ನೂ ಸ್ನೇಹಾ ಹಾಗೂ ಪ್ರಸನ್ನರವರಿಗೆ ಒಂದು ಹೆಣ್ಣು ಒಂದು ಗಂಡು ಮಗು ಇದೆ. ಕಳೆದ ವರ್ಷ ಪ್ರಸನ್ನ ಹಾಗೂ ಸ್ನೇಹಾ ನಡುವೆ ವಿಭೇದಗಳು ಉಂಟಾಗಿ ಇಬ್ಬರೂ ಬೇರೆಯಾಗಲಿದ್ದಾರೆ ಎಂಬ ರೂಮರ್‍ ಗಳು ಕೇಳಿಬಂದಿದ್ದವು. ಆದರೆ ಆ ಸುದ್ದಿಗಳಲ್ಲಿ ಯಾವುದೇ ಸತ್ಯಾಂಶವಿಲ್ಲ ಎಂದು ಸ್ನೇಹಾ ಕ್ಲಾರಿಟಿ ಕೊಟ್ಟಿದ್ದರು. ಸದ್ಯ ಸ್ನೇಹಾ ಸೆಕೆಂಡ್ ಇನ್ನೀಂಗ್ಸ್ ಶುರು ಮಾಡಿದ್ದು, ಅಕ್ಕ, ಅತ್ತಿಗೆ ಮೊದಲಾದ ಪಾತ್ರಗಳಲ್ಲಿ ನಟಿಸುತ್ತಾ ಕೆರಿಯರ್‍ ಸಾಗಿಸುತ್ತಿದ್ದಾರೆ.