Film News

ಖ್ಯಾತ ನಟ ನವಾಜುದ್ದೀನ್ ಸಿದ್ದಿಕಿಯಿಂದ ಪತ್ನಿಗೆ ಚಿತ್ರಹಿಂಸೆಯಂತೆ, ವಾಷ್ ರೂಂ ಗೆ ಹೋಗಲು ಸಹ ಬಿಡುತ್ತಿಲ್ಲವಂತೆ..!

ಬಾಲಿವುಡ್ ನ ವಿಲಕ್ಷಣ ನಟ ನವಾಜುದ್ದೀನ್ ಸಿದ್ದಿಖಿ ಬಗ್ಗೆ ಆತನ ಪತ್ನಿ ಆಲಿಯಾ ಗಂಭೀರ ಆರೋಪಗಳನ್ನು ಮಾಡಿದ್ದಾರೆ. ಇಬ್ಬರ ನಡುವೆ ವಿಬೇಧಗಳು ಬಂದಿದ್ದು, ವಿಚ್ಚೇದನ ಪಡೆದುಕೊಳ್ಳಲು ಸಿದ್ದರಾಗುತ್ತಿದ್ದಾರೆ ಎನ್ನಲಾಗುತ್ತಿದೆ. ಇನ್ನೂ ನವಾಜುದ್ದೀನ್ ವಿರುದ್ದ ಕೌಟುಂಬಿಕ ದೌರ್ಜನ್ಯ ಪ್ರಕರಣ ಸಹ ದಾಖಲಾಗಿದೆ. ಇನ್ನೂ ಈ ಪ್ರಕರಣ ಕೋರ್ಟ್‌ನಲ್ಲಿದೆ. ಇನ್ನೂ ಆಲಿಯಾ ನವಾಜುದ್ದೀನ್ ಬಗ್ಗೆ ಅನೇಕ ಆರೋಪಗಳನ್ನು ಮಾಡುತ್ತಿದ್ದಾರೆ. ಆಕೆಗೆ ಬಚ್ಚಲು ಮನೆಗೆ ಹೋಗಲು ಸಹ ಬಿಡುತ್ತಿಲ್ಲವೆಂದು ಆರೋಪ ಮಾಡಿದ್ದಾರೆ.

ನಟ ನವಾಜುದ್ದೀನ್ ಹಾಗೂ ಆತನ ಪತ್ನಿ ಆಲಿಯಾ ವಿಚ್ಚೇದನಕ್ಕೆ ಮುಂದಾಗಿದ್ದಾರೆ. ಇನ್ನೂ ಪಾಸ್ ಪೋರ್ಟ್ ಸಮಸ್ಯೆಯ ಕಾರಣದಿಂದ ಆಲಿಯಾ ಹಾಗೂ ತನ್ನ ಇಬ್ಬರೂ ಮಕ್ಕಳೊಂದಿಗೆ ನವಾಜುದ್ದೀನ್ ಮನೆಯಲ್ಲೇ ಇದ್ದಾರೆ. ಆದರೆ ನವಾಜುದ್ದೀನ್ ತಾಯಿ ಆಕೆ ಮನೆಯಲ್ಲಿ ಇರಬಾರದು ಎಂದು ಅಭ್ಯಂತರ ವ್ಯಕ್ತಪಡಿಸಿದ್ದಾರೆ. ಈ ಕಾರಣದಿಂದ ಆಲಿಯಾ ಪೊಲೀಸರಿಗೆ ದೂರು ಸಹ ನೀಡಿದ್ದಾರೆ. ಆಕೆಯನ್ನು ಮನೆಯಲ್ಲಿ ತುಂಬಾ ಕಾಡಿಸುತ್ತಿದ್ದಾರೆ. ಕನಿಷ್ಟ ಊಟ ನೀಡುತ್ತಿಲ್ಲ, ಬಚ್ಚಲು ಮನೆಗೆ ಹೋಗಲು ಬಿಡುತ್ತಿಲ್ಲ ಎಂದು ಈ ಬಗ್ಗೆ ತನ್ನ ಪರ ವಕೀಲರೊಂದಿಗೆ ಹೇಳಿಕೆಯೊಂದನ್ನು ಬಿಡುಗಡೆ ಮಾಡಿದ್ದಾರೆ. ಅದರಲ್ಲಿರುವಂತೆ ನನ್ನ ಕಕ್ಷಿದಾರಳಿಗೆ ಆಹಾರ ನೀಡುತ್ತಿಲ್ಲ. ವಾಷ್ ರೂಂ ಗೆ ಹೋಗಲು ಬಿಡುತ್ತಿಲ್ಲ. ಆಕೆಯ ಸುತ್ತಲೂ ಬಾಡಿಗಾರ್ಡ್‌ಗಳನ್ನು ಇಟ್ಟಿದ್ದಾರೆ. ಆಸ್ತಿ ವಿಚಾರಕ್ಕೆ ಬೇಕೆಂದಲೇ ಪೊಲೀಸರಿಗೆ ದೂರು ನೀಡಿದ್ದಾರೆ. ಅರೆಸ್ಟ್ ಮಾಡುತ್ತೇವೆ ಎಂದು ಬೆದರಿಸುತ್ತಿದ್ದಾರೆ. ಆಕೆಯಿರುವಂತಹ ಕೋಣೆಯಲ್ಲಿ ಸಿಸಿ ಕ್ಯಾಮೆರಾ ಸಹ ಅಳವಡಿಸಿದ್ದಾರೆ ಎಂದು ಅನೇಕ ಆರೋಪಗಳನ್ನು ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಕಳೆದ ಎರಡು ವರ್ಷಗಳಿಂದ ನವಾಜುದ್ದೀನ್ ಹಾಗೂ ಆಲಿಯಾ ವಿಚ್ಚೇಧನ ಪಡೆದುಕೊಳ್ಳಲು ಪ್ರಯತ್ನಿಸುತ್ತಿದ್ದಾರೆ. ಈ ಸಮಯದಲ್ಲಿ ಆಲಿಯಾ ಲಾಯರ್‍ ರಿಜ್ವಾನ್ ಸ್ಟೇಟ್ ಮೆಂಟ್ ಇದೀಗ ಸಂಚಲನ ಸೃಷ್ಟಿಸಿದೆ. ಕಳೆದ 2009 ರಲ್ಲಿ ನವಾಜುದ್ದೀನ್ ಹಾಗೂ ಆಲಿಯಾ ಮದುವೆಯಾದರು. ಇವರಿಬ್ಬರಿಗೂ ಷೋರಾ ಎಂಬ ಮಗಳು ಹಾಗೂ ಯಾನಿ ಸಿದ್ದಿಖಿ ಎಂಬ ಮಗ ಇದ್ದಾರೆ. ಇನ್ನೂ 2021 ರಲ್ಲಿ ಆಲಿಯಾ ವಿಚ್ಚೇದನಕ್ಕಾಗಿ ನವಾಜುದ್ದೀನ್ ಗೆ ವಿಚ್ಚೇದನ ನೋಟೀಸ್ ಕಳುಹಿಸಿದ್ದರು. ಇನ್ನೂ ಸುಮಾರು ದಿನಗಳಿಂದ ನವಾಜುದ್ದೀನ್ ಕುಟುಂಬದವರು ನನಗೆ ತುಂಬಾ ಹಿಂಸೆ ನೀಡುತ್ತಿದ್ದಾರೆ ಎಂದು ಆರೋಪ ಮಾಡುತ್ತಿದ್ದು, ಈ ಕಾರಣಗಳಿಂದಲೇ ಬೇರೆಯಾಗುತ್ತಿದ್ದಾರೆ ಎಂದು ಹೇಳಿದ್ದಾರೆ ಆಲಿಯಾ.

Most Popular

To Top