News

ಮುಂದಿನ ತಿಂಗಳಲ್ಲಿ ಉತ್ತಮ ಮಳೆ, ಹವಾಮಾನ ಇಲಾಖೆ ಮುನ್ಸೂಚನೆ…..!

ರಾಜ್ಯದಲ್ಲಿ ಮಳೆಯ ಅಭಾವ ಕಾಡುತ್ತಿದ್ದು, ಈಗಾಗಲೇ ಮೊದಲ ಹಂತದ ಬರಪೀಡಿತ ತಾಲೂಕುಗಳ ಘೋಷಣೆ ಗೆ ವರದಿ ಸಹ ಸಲ್ಲಿಕೆಯಾಗಿದೆ. ಕಳೆದ ಜುಲೈ ಮಾಹೆಯಲ್ಲಿ ಭಾರಿ ಮಳೆಯಾಗಿತ್ತು. ಬೆಂಗಳೂರು ಸೇರಿ ಹಲವು ಜಿಲ್ಲೆಗಳಲ್ಲಿ ಮಳೆಯ ಸಂಕಷ್ಟ ಎದುರಾಗಿತ್ತು. ಅದೇ ಮಾದರಿಯಲ್ಲಿ ಆಗಸ್ಟ್ ಮಾಹೆಯಲ್ಲೂ ಸಹ ಭಾರಿ ಮಳೆಯಾಗುತ್ತದೆ ಎಂದುಕೊಳ್ಳಲಾಗಿತ್ತು. ಆದರೆ ಮಳೆಯ ಕೊರತೆಯಿಂದ ಬರದ ಛಾಯೆ ಮೂಡಿದೆ. ಇದೀಗ ಸೆಪ್ಟೆಂಬರ್‍ ಮಾಹೆಯಲ್ಲಿ ಉತ್ತಮ ಮಳೆಯಾಗುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ.

ರಾಜ್ಯದಾದ್ಯಂತ ಮಳೆಯ ಅಭಾವ ಕಾಡುತ್ತಿದೆ. ಕಳೆದ ಜುಲೈ ಮಾಹೆಯಲ್ಲಿ ಅಗತ್ಯತೆಗೂ ಮೀರಿ ಮಳೆಯಾಗಿತ್ತು. ಆದರೆ ಆಗಸ್ಟ್ ಮಾಹೆಯಲ್ಲಿ ಮಳೆಯ ಅಭಾವ ತುಂಬಾನೆ ಹೆಚ್ಚಾಗಿದೆ. ಇದೀಗ ಸಪ್ಟೆಂಬರ್‍ ಮಾಹೆಯಲ್ಲಿ ಉತ್ತಮ ಮಳೆಯಾಗಲಿದೆಯಂತೆ. ಐದು ದಿನಗಳ ಬಳಿಕ ವರುಣ ಅಬ್ಬರಿಸಲಿದ್ದಾನಂತೆ. ಇನ್ನೂ ಉಡುಪಿ, ಉತ್ತರ ಕನ್ನಡ ಭಾಗದಲ್ಲಿ ನಿನ್ನೆ ಹಾಗೂ ಇಂದೂ ಸಹ ಹಗುರ ಮಳೆಯಾಗಿದೆ. ಇನ್ನೂ ಕರಾವಳಿ ಭಾಗದಲ್ಲಿ ಮಾತ್ರವಲ್ಲದೇ ಕರ್ನಾಟಕಡ ಉತ್ತರ ಒಳನಾಡಿನಲ್ಲೂ ಸಹ ಅಲ್ಲಲ್ಲಿ ಗುಡುಗು ಸಹಿತ ಮಳೆಯಾಗುವ ಸಾಧ್ಯತೆಯಿದೆ ಎನ್ನಲಾಗಿದೆ. ಆದರೆ ದಕ್ಷಿಣ ಕನ್ನಡ ಜಿಲ್ಲೆಯ ಕೆಲವೊಂದು ಪ್ರದೇಶಗಳಲ್ಲಿ ಅಲ್ಪ ಪ್ರಮಾಣದ ಮಳೆಯಾಗುವ ಸಾಧ್ಯತೆಯಿದೆ ಎನ್ನಲಾಗಿದೆ.

ಇನ್ನೂ ಮಳೆಯ ಅಭಾವದಿಂದ ರೈತ ಸಂಕಷ್ಟದ ಪಾಲಾಗಿದ್ದಾನೆ. ಸಾಲ ಮಾಡಿ ಇಟ್ಟಂತಹ ಬೆಳೆ ಇದೀಗ ಒಣಗುತ್ತಿದೆ. ಅಳಿದು ಉಳಿದಂತಹ ಬೆಳೆ ಉಳಿಯಬೇಕಾದರೇ ಈಗಲಾದರೂ ಕೊಂಚ ಮಳೆಯಾಗಬೇಕಿದೆ. ಆ ವರುಣ ದೇವ ಸೆಪ್ಟೆಂಬರ್‍ ಮಾಹೆಯಲ್ಲಾದರೂ ಕರುಣಿಸು ರೈತರು ಬೇಡಿಕೊಳ್ಳುತ್ತಾ ಇದ್ದಾರೆ. ಇನ್ನೂ ಕರ್ನಾಟಕ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ 113 ತಾಲೂಕುಗಳಲ್ಲಿ ತೀವ್ರ ಬರ ಹಾಗೂ ಸಾಧಾರಣಾ ಬರ ಎಂದು ಪಟ್ಟಿ ಸಿದ್ದಪಡಿಸಿದೆ.

Most Popular

To Top