Film News

ಅರ್ಜುನ್ ಕಪೂರ್ ಮಲೈಕಾ ಅರೋರಾ ನಡುವೆ ಬ್ರೇಕಪ್, ಕಪೂರ್ ಕುಟುಂಬದವರನ್ನು ಅನ್ ಫಾಲೋ ಮಾಡಿದ ಬ್ಯೂಟಿ…..!

ಬಾಲಿವುಡ್ ಸಿನಿರಂಗದ ಬೋಲ್ಡ್ ಸೀನಿಯರ್‍ ನಟಿಯರಲ್ಲಿ ಮಲೈಕಾ ಅರೋರಾ ಮೊದಲ ಸ್ಥಾನದಲ್ಲಿರುತ್ತಾರೆ. ಹಾಫ್ ಸೆಂಚುರಿಗೆ ಹತ್ತಿರವಾಗಿದ್ದರೂ ಸಹ ಆಕೆ ಹಾಟ್ ಪೊಟೋಶೂಟ್ಸ್ ಮೂಲಕ ಹದಿಹರೆಯದ ಯುವತಿರಯನ್ನೂ ಸಹ ನಾಚಿಸುವಂತೆ ಮಾಡುತ್ತಿದ್ದಾರೆ. ಅದರಲ್ಲೂ ಮಲೈಕಾ ಹಾಗೂ ಅರ್ಜುನ್ ಕಪೂರ್‍ ರವರ ಡೇಟಿಂಗ್ ಸುದ್ದಿ ಮಾತ್ರ ಸದಾ ಹಾಟ್ ಟಾಪಿಕ್ ಆಗಿರುತ್ತದೆ. 38 ವರ್ಷದ ಅರ್ಜುನ್ ಕಪೂರ್‍ 49 ವರ್ಷದ ಮಲೈಕಾ ಜೊತೆಗೆ ಡೇಟಿಂಗ್ ನಡೆಸುತ್ತಿದ್ದ ವಿಚಾರವಾಗಿ ಅವರಿಬ್ಬರೂ ಸದಾ ಸುದ್ದಿಯಾಗುತ್ತಿದ್ದರು.

ಬಾಲಿವುಡ್ ಹಾಟ್ ಬಾಂಬ್ ಮಲೈಕಾ ವಯಸ್ಸು ಸದ್ಯ 49 ಶೀಘ್ರದಲ್ಲೇ ಆಕೆ ವಯಸ್ಸಿನಲ್ಲಿ ಹಾಫ್ ಸೆಂಚುರಿ ಹೊಡೆಯಲಿದ್ದಾರೆ. ಆಕೆ ತನಗಿಂತ 12 ವರ್ಷ ಚಿಕ್ಕವನಾದ ಅರ್ಜುನ್ ಕಪೂರ್‍ ಜೊತೆಗೆ ಡೇಟಿಂಗ್ ನಲ್ಲಿದ್ದು, ಇಬ್ಬರೂ ಸದ್ಯ ಸಹಜೀವನ ಸಾಗಿಸುತ್ತಿದ್ದರು ಎನ್ನಲಾಗಿತ್ತು.  ಮಲೈಕಾ ತನ್ನ ಮೊದಲ ಪತಿ ಅರ್ಬಾಜ್ ಖಾನ್ ಜೊತೆಗೆ ವಿಚ್ಚೇದನ ಪಡೆದುಕೊಂಡ ಬಳಿಕ ಅರ್ಜುನ್ ಕಪೂರ್‍ ಜೊತೆಗೆ ಬಹಿರಂಗವಾಗಿಯೇ ಸುತ್ತಾಡುತ್ತಿದ್ದರು. ಆದರೆ ಕೆಲವು ದಿನಗಳಿಂದ ಮಲೈಕಾ ಹಾಗೂ ಅರ್ಜುನ್ ಕಪೂರ್‍ ನಡುವೆ ಬ್ರೇಕಪ್ ಆಗಿದೆ ಎಂಬ ವಿಚಾರ ಸೋಷಿಯಲ್ ಮಿಡಿಯಾದಲ್ಲಿ ಹರಿದಾಡಿತ್ತು. ಇದೀಗ ಈ ಸುದ್ದಿ ನಿಜ ಎನ್ನುವಂತಹ ಸುಳಿವು ಸಹ ಸಿಕ್ಕಿದೆ. ಅವರ ವಯಸ್ಸಿನ ಅಂತರದ ಕಾರಣದಿಂದ ಅನೇಕ ಬಾರಿ ಟ್ರೋಲ್ ಆದರೂ ಸಹ ಬ್ರೇಕಪ್ ಆಗದ ಜೋಡಿ ಇದೀಗ ಬ್ರೇಕಪ್ ಮಾಡಿಕೊಂಡಿದ್ದಾರೆ ಎಂದು ಹೇಳಲಾಗಿದೆ.

ಸದ್ಯ ಅರ್ಜುನ್ ಕಪೂರ್‍ ಹಾಗೂ ಮಲೈಕಾ ನಡುವಣ ಬ್ರೇಕಪ್ ನಿಜ ಎನ್ನುವಂತಹ ಸುಳಿವೊಂದು ಸಿಕ್ಕಿದೆ. ಈ ಹಿಂದೆ ಮಲೈಕಾ ಅರ್ಜುನ್ ಕಪೂರ್‍ ರವರ ತಂದೆ ಬೋನಿ ಕಪೂರ್‍, ಅನೀಲ್ ಕಪೂರ್‍, ಜಾನ್ವಿ ಕಪೂರ್‍, ಖುಷಿ ಕಪೂರ್‍ ರವರುಗಳನ್ನು ಸೋಷಿಯಲ್ ಮಿಡಿಯಾದಲ್ಲಿ ಫಾಲೋ ಮಾಡುತ್ತಿದ್ದರು. ಇದೀಗ ಮಲೈಕಾ ಅವರನ್ನೆಲ್ಲಾ ಅನ್ ಫಾಲೋ ಮಾಡಿದ್ದಾರೆ.  ಆದರೆ ಅರ್ಜುನ್ ಕಪೂರ್‍ ಮಾತ್ರ ಆಕೆಯನ್ನು ಫಾಲೋ ಮಾಡುತ್ತಿದ್ದಾರೆ. ಆದರೆ ಅರ್ಜುನ್ ಕಪೂರ್‍ ರವರ ನಡೆ ಸಹ ತುಂಬಾನೆ ಅನುಮಾನ ಮೂಡಿಸಿದೆ. ಕೆಲವು ದಿನಗಳ ಹಿಂದೆಯಷ್ಟೆ ಅರ್ಜುನ್ ಕಪೂರ್‍ ಸಿಂಗಲ್ ಆಗಿಯೇ ಬೈಕ್ ಟ್ರಿಪ್ ಗೆ ಹೋಗಿದ್ದರು. ಸದಾ ಮಲೈಕಾ ಜೊತೆಗೆ ಟ್ರಿಪ್ ಗೆ ಹೋಗುತ್ತಿದ್ದ ಅರ್ಜುನ್ ಒಂಟಿಯಾಗಿ ಟ್ರಿಪ್ ಕೈಗೊಂಡ ಕಾರಣದಿಂದ ಮತಷ್ಟು ಅನುಮಾನಗಳು ಹುಟ್ಟಿಕೊಳ್ಳಲು ಕಾರಣವಾಗಿದೆ.

ಇನ್ನೂ ಸದ್ಯ ಮಲೈಕಾ ಹಾಗೂ ಅರ್ಜುನ್ ಕಪೂರ್‍ ನಡುವಣ ಬ್ರೇಕಪ್ ರೂಮರ್‍ ಸೋಷಿಯಲ್ ಮಿಡಿಯಾದಲ್ಲಿ ಹಾಟ್ ಟಾಪಿಕ್ ಆಗಿ ಹರಿದಾಡುತ್ತಿದೆ. ಅನೇಕರು ಈ ಸುದ್ದಿಯನ್ನು ನಿಜ ಎಂದು ನಂಬುತ್ತಿದ್ದಾರೆ. ಆದರೆ ಮಲೈಕಾ ಫ್ಯಾನ್ಸ್ ಮಾತ್ರ ಅವರಿಬ್ಬರೂ ಬೇರೆಯಾಗಬಾರದು ಒಟ್ಟಿಗೆ ಜೀವನ ಸಾಗಿಸಲಿ ಎಂದು ಕೋರುತ್ತಿದ್ದಾರೆ.

Most Popular

To Top