ಬನ್ನಿಗೆ ಸ್ಪೇಷಲ್ ಗಿಫ್ಟ್ ಕಳುಹಿಸಿದ ರಾಮ್ ಚರಣ್, ಟಚ್ ಮಾಡಿದೆ ಎಂದು ಎಮೋಷನಲ್ ಆದ ಅಲ್ಲು ಅರ್ಜುನ್……!

Follow Us :

ಟಾಲಿವುಡ್ ಸಿನಿರಂಗದಲ್ಲಿ ರಾಷ್ಟ್ರೀಯ ಉತ್ತಮ ನಟ ಪ್ರಶಸ್ತಿ ಐಕಾನ್ ಸ್ಟಾರ್‍ ಅಲ್ಲು ಅರ್ಜುನ್ ಪಡೆದುಕೊಂಡಿದ್ದಾರೆ. ತೆಲುಗು ಸಿನಿರಂಗದಲ್ಲಿ ಈ ಖ್ಯಾತಿ ಪಡೆದು ಕೊಂಡ ಮೊದಲ ನಟ ಅಲ್ಲು ಅರ್ಜುನ್ ರವರಾಗಿದ್ದಾರೆ. ಈ ಹಿಂದೆ ಅನೇಕ ದಿಗ್ಗಜರು ತೆಲುಗು ಸಿನಿರಂಗದಲ್ಲಿದ್ದರೂ ಸಹ ಆ ಘನತೆ ಪಡೆದುಕೊಳ್ಳಲು ಸಾಧ್ಯವಾಗಿರಲಿಲ್ಲ. ಆದರೆ ಘನತೆಯನ್ನು ಅಲ್ಲು ಅರ್ಜುನ್ ಸಂಪಾದಿಸಿಕೊಂಡಿದ್ದಾರೆ. ಇದು ತೆಲುಗು ಸಿನಿರಂಗಕ್ಕೆ ದೊಡ್ಡ ಹೆಮ್ಮೆ ಎಂದು ಅಲ್ಲು ಅರ್ಜುನ್ ರವರನ್ನು ಕೊಂಡಾಡುತ್ತಿದ್ದಾರೆ. ಈ ಹಾದಿಯಲ್ಲೇ ರಾಮ್ ಚರಣ್ ಸ್ಪೇಷಲ್ ಗಿಫ್ಟ್ ಮೂಲಕ ಶುಭ ಕೋರಿದ್ದು, ಅಲ್ಲು ಎಮೋಷನಲ್ ಆಗಿ ರಿಯಾಕ್ಟ್ ಆಗಿದ್ದಾರೆ.

ರಾಷ್ಟ್ರೀಯ ಉತ್ತಮ ನಟನಾಗಿ ಅವಾರ್ಡ್ ಪಡೆದುಕೊಂಡ ಅಲ್ಲು ಅರ್ಜುನ್ ರಾಷ್ಟ್ರೀಯ ಮಟ್ಟದಲ್ಲೇ ಹಾಟ್ ಟಾಪಿಕ್ ಆಗಿದ್ದಾರೆ. ಪುಷ್ಪಾ ಸಿನೆಮಾಗಾಗಿ ಅಲ್ಲು ಅರ್ಜುನ್ ಗೆ ಈ ಪ್ರತಿಷ್ಟಿತ ಅವಾರ್ಡ್ ಸಿಕ್ಕಿದೆ. ಈ ಸಿನೆಮಾ ಭಾರಿ ಸದ್ದು ಮಾಡಿದ್ದು ಗೊತ್ತೇ ಇದೆ. ಅನೇಕ ಸಿನೆಮಾಗಳ ರೆಕಾರ್ಡ್ ಸಹ ಬ್ರೇಕ್ ಮಾಡಿದೆ. ಇದೀಗ ಪುಷ್ಪಾ-2 ಸಿನೆಮಾಗಾಗಿ ಇಡೀ ದೇಶವೇ ಅಲ್ಲು ಫ್ಯಾನ್ಸ್ ಸೇರಿದಂತೆ ಸಿನೆಮಾ ರಸಿಕರು ಈಗರ್‍ ಆಗಿ ಕಾಯುತ್ತಿದ್ದಾರೆ. ಇನ್ನೂ ರಾಷ್ಟ್ರೀಯ ಉತ್ತಮ ನಟ ಅವಾರ್ಡ್ ಪಡೆದುಕೊಂಡ ಅಲ್ಲು ಅರ್ಜುನ್ ರವರಿಗೆ ಅಭಿಮಾನಿಗಳ ಜೊತೆಗೆ ಬಹುತೇಕ ಎಲ್ಲಾ ಸ್ಟಾರ್‍ ಗಳು ಶುಭಾಷಯ ಕೋರುತ್ತಿದ್ದಾರೆ. ಆದರೆ ಅಲ್ಲು  ಹಾಗೂ ಮೆಗಾ ಕುಟುಂಬದ ನಡುವೆ ಎಲ್ಲವೂ ಸರಿಯಿಲ್ಲ. ಎರಡೂ ಕುಟುಂಬಗಳ ನಡುವೆ ಕೋಲ್ಡ್ ವಾರ್‍ ನಡೆಯುತ್ತಿದೆ ಎಂಬ ಸುದ್ದಿಗಳು ಕೇಳಿಬರುತ್ತಲೇ ಇದೆ. ಇನ್ನೂ ಅವಾರ್ಡ್ ಪಡೆದುಕೊಂಡ ಅಲ್ಲು ಅರ್ಜುನ್ ರವರಿಗೆ ಎಲ್ಲರೂ ಶುಭಾಷಯ ಕೋರುತ್ತಿದ್ದರೇ ರಾಮ್ ಚರಣ್ ಮಾತ್ರ ಉದಾಸೀನವಾಗಿ ಶುಭಾಷಯ ಕೋರಿದ್ದಾರೆ ಎಂಬ ಮಾತುಗಳು ಕೇಳಿಬಂದವು.

ಇದೀಗ ಈ ರೂಮರ್‍ ಗಳಿಗೆ ಬನ್ನಿ ಪರೋಕ್ಷವಾಗಿ ಉತ್ತರ ನೀಡಿದ್ದಾರೆ. ನ್ಯಾಷನಲ್ ಅವಾರ್ಡ್ ಪಡೆದುಕೊಂಡು ಅಲ್ಲು ಅರ್ಜುನ್ ರವರಿಗೆ ರಾಮ್ ಚರಣ್ ಹಾಗೂ ಉಪಾಸಾನ ಫ್ಲವರ್‍ ಬೊಕೆ ಜೊತೆಗೆ ಸ್ಪೇಷಲ್ ನೋಟ್ ಕಳುಹಿಸಿದ್ದಾರೆ. ಡಿಯರ್‍ ಬನ್ನಿ ಕಂಗ್ರಾಜುಲೇಷನ್ಸ್, ನಾವು ನಿಮ್ಮ ಬಗ್ಗೆ ತುಂಬಾ ಸಂತೋಷವಾಗಿದ್ದೇವೆ. ಅಂತಹ ಘನತೆ ಭವಿಷ್ಯತ್ತಿನಲ್ಲಿ ಮತಷ್ಟು ಪಡೆದುಕೊಳ್ಳಬೇಕು ಎಂದು ಸ್ಪೇಷಲ್ ನೋಟ್ ಬರೆದಿದ್ದಾರೆ. ಇನ್ನೂ ಅದಕ್ಕೆ ಉತ್ತರ ನೀಡಿದ ಬನ್ನಿ ಥಾಂಕ್ಯೂ ಸೋ ಮಚ್, ನೀನು ನನ್ನ ಹೃದಯ ಟಚ್ ಮಾಡಿದ್ದೀಯಾ ಎಂದು ಎಮೋಷನಲ್ ಆಗಿ ರಿಪ್ಲೇ ಕೊಟ್ಟಿದ್ದಾರೆ.

ಆ ಮೂಲಕ ತಮ್ಮ ನಡುವೆ ಯಾವುದೇ ವಿಬೇಧಗಳಿವೆ ಎಂದು ನಿರೂಪಿಸಿದ್ದಾರೆ. ಇನ್ನು ಮುಂದೆಯಾದರು ಅಂತಹ ರೂಮರ್‍  ಗಳನ್ನು ಹುಟ್ಟಿಹಾಕಬೇಡಿ ಎಂದು ಮೆಗಾ ಫ್ಯಾನ್ಸ್ ಅಭಿಪ್ರಾಯಪಡುತ್ತಿದ್ದಾರೆ. ಇನ್ನೂ ಪುಷ್ಪಾ ಸಿನೆಮಾದ ಮೂಲಕ ಅನೇಕ ಅವಾರ್ಡ್‌ಗಳನ್ನು ಪಡೆದುಕೊಂಡ ಅಲ್ಲು ಅರ್ಜುನ್ ಪುಷ್ಪಾ-2 ಸಿನೆಮಾದ ಮೂಲಕ ಮತಷ್ಟು ಕ್ರೇಜ್ ಪಡೆದುಕೊಳ್ಳಲಿದ್ದಾರೆ ಎಂದು ಹೇಳಲಾಗುತ್ತಿದೆ.