ನಟ ಅಂಬರೀಶ್ ರವರು ಬದುಕ್ಕಿದ್ದಾಗ ಜೊತೆಗೆ ಊಟ ಮಾಡಿದ್ದೆವೇ, ಸುಮಲತಾ ರವರೇ ನನಗೆ ಊಟ ಬಡಿಸಿದ್ದಾರೆ ಎಂದ ಹೆಚ್.ಡಿ.ಕೆ….!

Follow Us :

ಕರ್ನಾಟಕ ರಾಜ್ಯದಲ್ಲಿ ಲೋಕಸಭಾ ಚುನಾವಣೆ ರಂಗು ದಿನೇ ದಿನೇ ಏರುತ್ತಲೇ ಇದೆ. ಈ ಬಾರಿ ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿ ಮಾಡಿಕೊಂಡಿದ್ದು, ಮೈತ್ರಿಯಂತೆ ಜೆಡಿಎಸ್ ಪಕ್ಷಕ್ಕೆ ಕೋಲಾರ, ಮಂಡ್ಯ ಹಾಗೂ ಹಾಸನ ಲೋಕಸಭಾ ಕ್ಷೇತ್ರಗಳನ್ನು ನೀಡಲಾಗಿದೆ. ಮಂಡ್ಯ ಕ್ಷೇತ್ರದಲ್ಲಿ ಸಂಸದೆ ಸುಮಲತಾ ಸಹ ಟಿಕೆಟ್ ಆಂಕಾಂಕ್ಷಿಯಾಗಿದ್ದರು. ಆದರೆ ಅವರಿಗೆ ಬಿಜೆಪಿಯಿಂದ ಟಿಕೆಟ್ ಕೈ ತಪ್ಪಿದೆ. ಇದೀಗ ಮಂಡ್ಯದ ಚುನಾವಣೆ ಸಹ ಭಾರಿ ಕುತೂಹಲ ಮೂಡಿಸಿದೆ ಎನ್ನಲಾಗುತ್ತಿದೆ.

ಮಂಡ್ಯ ಲೋಕಸಭಾ ಚುನಾವಣೆಗೆ ಸಂಬಂಧಿಸಿದಂತೆ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಮಾತನಾಡಿದ್ದಾರೆ. ಸಮಯ ಬಂದಾಗ ನಾನು ಸುಮಲತಾ ಅಂಬರೀಶ್ ರವರ ಜೊತೆಗೆ ಮಾತುಕತೆ ನಡೆಸುತ್ತೇನೆ. ಎಲ್ಲವೂ ಸುಗಮವಾಗಿ ನಡೆಯುತ್ತದೆ. ಅವರು ನನಗೆ ಶತ್ರು ಅಲಲ್. ಚುನಾವಣೆ ಅಂತಾ ಬಂದಾಗ ಕೆಲವೊಂದು ವಿಚಾರಗಳಲ್ಲಿ ಭಿನ್ನಾಭಿಪ್ರಾಯಗಳು ಬರುತ್ತಿರುತ್ತವೆ. ಆ ಸಮಯದಲ್ಲಿ ಹಲವಾರು ರೀತಿಯ ಚರ್ಚೆಗಳೂ ಸಹ ಆಗಿರುತ್ತದೆ. ಆದರೆ ಅದು ಈಗ ಅವಶ್ಯಕತೆಯಿಲ್ಲ. ಪುರಾಣಗಳಂತೆ ರಾಮಾಂಜನೇಯ ಯುದ್ದವೇ ನಡೆದು ಹೋಗಿದೆ. ನಮ್ಮಲ್ಲಿ ಯುದ್ದ ಆಗೊಲ್ಲವೇ ಎಂದಿದ್ದಾರೆ.

ನಟ ಅಂಬರೀಶ್ ರವರು ಬದುಕಿದ್ದಾಗ ನಾವಿಬ್ಬರು ಜೊತೆಗೆ ಊಟ ಮಾಡಿದ್ದೇವೆ. ಆ ಸುಮಲತಾ ರವರೇ ಊಟ ಬಡಿಸಿದ್ದಾರೆ ಎಂದು ಆ ದಿನಗಳನ್ನು ಮೆಲುಕು ಹಾಕಿದರು. ರಾಜಕೀಯದಲ್ಲಿ ಸಂಕರ್ಷಗಳು ನಡೆದಿರುತ್ತವೆ. ರಾಮಾಂಜೇಯ ಯುದ್ದವೇ ಆಗಿ ಹೋಗಿದೆ. ನಾವೆಷ್ಟು ಹುಲು ಮಾನವರು. ನಮ್ಮಲ್ಲಿ ಸಹ ಯುದ್ದ ನಡೆದಿರುತ್ತದೆ. ಹಾಗೆಂದ ಮಾತ್ರಕ್ಕೆ ಅದನ್ನೇ ದೊಟ್ಟ ಮಟ್ಟದಲ್ಲಿ ದ್ವೇಷ ಸಾಧಿಸಿಕೊಂಡು ಹೋಗುವ ಅವಶ್ಯಕತೆಯಿಲ್ಲ. ಸಮಯ ಬಂದಾಗ ಸುಮಲತಾ ರವರ ಜೊತೆ ಮಾತನಾಡುತ್ತೇನೆ. ಅವರು ನಮಗೆ ಬೆಂಬಲ ನೀಡುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.