News

ಅನಂತ್ ಅಂಬಾನಿಗೆ 100 ರೂಪಾಯಿ ಮುಯ್ಯಿ ಕೊಟ್ಟ ಅಜ್ಜಿ, ಅಹಂಕಾರ ಪಡದೇ ಗೌರವಯುತವಾಗಿ ಸ್ವೀಕರಿಸಿ ಆಗರ್ಭ ಶ್ರೀಮಂತ…..!

ಇಡೀ ವಿಶ್ವವನ್ನೇ ಬೆಚ್ಚಿ ಬೀಳಿಸುವಂತೆ ನಡೆದ ಮದುವೆ ಕಾರ್ಯಕ್ರಮ ಎಂದರೇ ಅದು ಮುಖೇಶ್ ಅಂಬಾನಿಯ ಪುತ್ರ ಅನಂತ್ ಅಂಬಾನಿಯ ಪ್ರೀ ವೆಡ್ಡಿಂಗ್ ಎಂದೇ ಹೇಳಬಹುದು. ಸಾವಿರಾರು ಕೋಟಿಗಳ ವೆಚ್ಚದಲ್ಲಿ ಈ ಮದುವೆ ಕಾರ್ಯಕ್ರಮ ನಡೆದಿತ್ತು. ಈ ಕಾರ್ಯಕ್ರಮ ಮೂರು ದಿನಗಳ ಕಾಲ ನಡೆದಿತ್ತು. ಗುಜರಾತ್ ನ ಜಾಮ್ ನಗರ್‍ ಎಂಬ ಗ್ರಾಮದಲ್ಲಿ ಈ ಕಾರ್ಯಕ್ರಮ ನಡೆದಿದ್ದು, ಇಡೀ ಗ್ರಾಮದ ನಿವಾಸಿಗಳನ್ನು ಕಾರ್ಯಕ್ರಮಕ್ಕೆ ಆಹ್ವಾನ ನೀಡಿದ್ದರು. ಇದೀಗ ಅಜ್ಜಿಯೊಬ್ಬರು ಅನಂತ್ ಅಂಬಾನಿಗೆ 100 ರೂಪಾಯಿ ಮುಯ್ಯಿ ನೀಡಿದ ವಿಡಿಯೋ ಒಂದು ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿದೆ.

ದೇಶದ ಕೋಟ್ಯಾಧೀಶ ಅಂಬಾನಿಯವರ ಪುತ್ರ ಅನಂತ್ ಅಂಬಾನಿಯವರ ಪ್ರೀ ವೆಡ್ಡಿಂಗ್ ಕಾರ್ಯಕ್ರಮ ಅದ್ದೂರಿಯಾಗಿ ನಡೆದಿತ್ತು. ಈ ಸಮಾರಂಭಕ್ಕೆ ಭಾರತ ಮಾತ್ರವಲ್ಲದೇ ವಿದೇಶಗಳಿಂದಲೂ ಅನೇಕ ಸೆಲೆಬ್ರೆಟಿಗಳು, ಶ್ರೀಮಂತರು ಭಾಗವಹಿಸಿದ್ದರು. ಜೊತೆಗೆ ಅನೇಕ ಖ್ಯಾತ ಸಿನೆಮಾ ಸೆಲೆಬ್ರೆಟಿಗಳು, ಕ್ರೀಡಾ ಪಟುಗಳು ಭಾಗವಹಿಸಿ ಕುಣಿದು ಕುಪ್ಪಳಿಸಿದ್ದರು. ಈ ಸಮಾರಂಭಕ್ಕೆ ಆಗಮಿಸಿದಂತಹ ಅನೇಕ ಗಣ್ಯ ಅತಿಥಿಗಳು ತಮ್ಮ ರೇಂಜ್ ಗೆ ತಕ್ಕಂತೆ ದುಬಾರಿ ಉಡುಗೊರೆಗಳನ್ನು ಕೊಟ್ಟಿದ್ದಾರೆ. ಇದೀಗ ಈ ಸಮಾರಂಭಕ್ಕೆ ಬಂದಿದ್ದ ಅಜ್ಜಿಯೊಬ್ಬರು ತಮ್ಮ ಸಾಮರ್ಥ್ಯಕ್ಕೆ ತಕ್ಕ ಉಡುಗೊರೆ ನೀಡಿದ್ದು. ಈ ವಿಡಿಯೋ ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿದೆ.

ಅನಂತ್ ಅಂಬಾನಿ ಹಾಗೂ ರಾಧಿಕಾ ಪ್ರೀ ವೆಡ್ಡಿಂಗ್ ಕಾರ್ಯಕ್ರಮಕ್ಕೆ ಬಂದಿದ್ದ ಅಜ್ಜಿಯೊಬ್ಬರು ವೇದಿಕೆಯ ಮೇಲೆ ಹೋಗಿ ಉಡುಗೊರೆ ಕೊಟ್ಟು ಆರ್ಶಿವಾದ ಮಾಡಿದ್ದಾರೆ. ಆ ಅಜ್ಜಿ ರಾಧಿಕಾ ಮರ್ಚೆಂಟ್ ಗೆ ಹೂಗುಚ್ಚ ನೀಡಿದ್ದಾರೆ.  ಪಕ್ಕದಲ್ಲಿದ್ದ ಅನಂತ್ ಅಂಬಾನಿಗೆ 100 ರೂಪಾಯಿ ನೋಟನ್ನು ಮುಯ್ಯಿಯಾಗಿ ಕೊಟ್ಟಿದ್ದಾರೆ. ಬಳಿಕ ತಲೆಯ ಮೇಲೆ ಕೈ ಇಟ್ಟು ಆಶೀರ್ವಾದ ಮಾಡಿದ್ದಾರೆ. ಆಗರ್ಭ ಶ್ರೀಮಂತನಾಗಿದ್ದ ಅನಂತ್ ಅಂಬಾನಿ ಗರ್ವ ತೋರಿಸದೇ ನಗುತ್ತಾ ಗೌರವ ಪೂರ್ವಕವಾಗಿ ಉಡುಗೊರೆಯನ್ನು ಸ್ವೀಕರಿಸಿದ್ದಾರೆ. ಈ ಸಂಬಂಧ ವಿಡಿಯೋ ಒಂದು ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿದ್ದು, ನೆಟ್ಟಿಗರು ಅನಂತ್ ಅಂಬಾನಿ ಸರಳತೆಗೆ ಮೆಚ್ಚುಗೆ ಸೂಚಿಸುತ್ತಿದ್ದಾರೆ.

Most Popular

To Top