Film News

ಇನ್ನೂ ಸಾಕ್ಷಿ ಬೇಕಾ ಎಂಬಂತೆ ಪತಿಯೊಂದಿಗೆ ರೊಮ್ಯಾಂಟಿಕ್ ಪೊಟೋಸ್ ಹಂಚಿಕೊಂಡ ನಯನತಾರಾ, ವಿಚ್ಚೇದನ ರೂಮರ್ ಬ್ರೇಕ್ ಹಾಕಿದ ಜೋಡಿ…..!

ಕೆಲವು ದಿನಗಳಿಂದ ಲೇಡಿ ಸೂಪರ್‍ ಸ್ಟಾರ್‍ ನಯನತಾರಾ ತಮ್ಮ ಪತಿ ವಿಘ್ನೇಶ್ ಶಿವನ್ ರಿಂದ ವಿಚ್ಚೇದನ ಪಡೆದುಕೊಳ್ಳಲಿದ್ದಾರೆ ಎಂಬ ರೂಮರ್‍ ಭಾರಿ ಸದ್ದು ಮಾಡಿತ್ತು. ಇದಕ್ಕೆ ಕಾರಣ ನಯನತಾರಾ ವಿಘ್ನೇಶ್ ರವರನ್ನು ಅನ್ ಫಾಲೋ ಮಾಡಿದ್ದಾರೆ ಎಂತಲೂ, ನಯನತಾರಾ ಕೆಲವೊಂದು ಪೋಸ್ಟ್ ಗಳನ್ನು ಮಾಡಿರುವ ಕಾರಣದಿಂದ ಅವರ ನಡುವೆ ವಿಬೇದಗಳು ಉಂಟಾಗಿದ್ದು, ಅವರು ಬೇರೆಯಾಗಲಿದ್ದಾರೆ ಎಂಬ ರೂಮರ್‍ ಹರಿದಾಡಿತ್ತು. ಇದೀಗ ಈ ಜೋಡಿ ವೆಕೇಷನ್ ನಲ್ಲಿ ಎಂಜಾಯ್ ಮಾಡುತ್ತಿದ್ದು, ಕೆಲವೊಂದು ರೊಮ್ಯಾಂಟಿಕ್ ಪೊಟೋಗಳನ್ನು ಹಂಚಿಕೊಳ್ಳುವ ಮೂಲಕ ರೂಮರ್‍ ಗೆ ಬ್ರೇಕ್ ಹಾಕಿದ್ದಾರೆ.

ಸುಮಾರು ಆರು ವರ್ಷಗಳ ಕಾಲ ಪ್ರೀತಿಸಿ ಮದುವೆಯಾದ ನಯನತಾರಾ ಹಾಗೂ ವಿಘ್ನೇಶ್ ಮದುವೆಯಾದಾಗಿನಿಂದ ಒಂದಲ್ಲ ಒಂದು ವಿವಾದದಲ್ಲಿ ಸಿಲುಕಿಕೊಳ್ಳುತ್ತಿದ್ದಾರೆ. ಮದುವೆಯಾದ ಬಳಿಕ ಈ ಜೋಡಿ ತಿರುಮಲಕ್ಕೆ ಭೇಟಿ ನೀಡಿತ್ತು. ಅಲ್ಲಿ ನಯನತಾರಾ ದೇವಾಲಯದ ಪ್ರಾಂಗಣದಲ್ಲಿ ಚಪ್ಪಲಿ ಧರಿಸಿದ್ದಾರೆ ಎಂಬ ಕಾರಣದಿಂದ ವಿವಾದಕ್ಕೆ ಗುರಿಯಾಗಿದ್ದರು. ಬಳಿಕ ಸೆರಗೋಸಿ ಮೂಲಕ ಅವಳಿ ಗಂಡು ಮಕ್ಕಳನ್ನು ಪಡೆದುಕೊಂಡರು. ಇದರಿಂದಲೂ ವಿವಾದಕ್ಕೆ ಗುರಿಯಾಗಿದ್ದರು. ಇನ್ನೂ ಕಳೆದೆರಡು ದಿನಗಳ ಹಿಂದೆ ನಯನತಾರಾ ತನ್ನ ಪತಿ ವಿಘ್ನೇಶ್ ರನ್ನು ಇನ್ಸ್ಟಾ ಖಾತೆಯಿಂದ ಅನ್ ಫಾಲೋ ಮಾಡಿದ್ದಾರೆ ಎಂದು ಆರಂಭವಾದ ರೂಮರ್‍ ಅವರ ವಿಚ್ಚೇದನಕ್ಕೆ ಸಿದ್ದವಾಗಿದ್ದಾರೆ ಎನ್ನುವವರೆಗೂ ಹೋಯ್ತು. ಅದರ ಜೊತೆಗೆ ನಯನತಾರಾ ಸಹ ಕೆಲವೊಂದು ಪೋಸ್ಟ್ ಗಳನ್ನು ಹಾಕಿದ್ದು, ಈ ರೂಮರ್‍ ಗೆ ಮತಷ್ಟು ಬಲ ಬಂದಿತ್ತು. ಇದೀಗ ಎಲ್ಲವೂ ಸುಳ್ಳು ಎಂಬುದನ್ನು ಸಾಬೀತು ಮಾಡಿದ್ದಾರೆ.

ಕಳೆದೆರಡು ದಿನಗಳ ಹಿಂದೆಯಷ್ಟೆ ನಯನತಾರಾ ಹಾಗೂ ತನ್ನ ಪತಿ ಮಕ್ಕಳೊಂದಿಗೆ ವಿದೇಶಕ್ಕೆ ಹಾರಿದ್ದಾರೆ. ರೂಮರ್‍ ಗಳಿಗೆ ಚೆಕ್ ಇಡುತ್ತಾ ವಿದೇಶದಲ್ಲಿ ಸಖತ್ ಎಂಜಾಯ್ ಮಾಡುತ್ತಿದ್ದಾರೆ. ಡಿವೋರ್ಸ್ ಸುದ್ದಿಯೆಲ್ಲಾ ಸುಳ್ಳು ನಾವು ಚೆನ್ನಾಗಿದ್ದೀವಿ ಎಂದು ಹೇಳುವಂತೆ ರೊಮ್ಯಾಂಟಿಕ್ ಆಗಿ ಕಾಣಿಸಿಕೊಂಡಿದ್ದಾರೆ. ಸೌದಿ ಅರೇಬಿಯಾದಲ್ಲಿರುವ ಈ ಜೋಡಿ ಜಾಲಿ ರೈಡ್ ಸಹ ಹೋಗಿದ್ದು, ನಡು ರಾತ್ರಿ ರಸ್ತೆಯಲ್ಲಿ ನಿಂತು ರೊಮ್ಯಾಂಟಿಕ್ ಆಗಿ ಪೊಟೋಗಳಿಗೆ ಪೋಸ್ ಕೊಟ್ಟಿದ್ದಾರೆ. ನಯನತಾರಾ ಕೆನ್ನೆಗೆ ವಿಘ್ನೇಶ್ ಕಿಸ್ ಮಾಡಿದ್ದಾರೆ. ಇದೀಗ ಈ ಪೊಟೋಗಳು ಸೋಷಿಯಲ್ ಮಿಡಿಯಾದಲ್ಲಿ ತುಂಬಾನೆ ವೈರಲ್ ಆಗುತ್ತಿವೆ. ಅಭಿಮಾನಿಗಳು ಹಾಗೂ ನೆಟ್ಟಿಗರು ವಿವಿಧ ರೀತಿಯ ಕಾಮೆಂಟ್ ಗಳನ್ನು ಹರಿಬಿಡುತ್ತಿದ್ದಾರೆ. ಅದರಲ್ಲಿ ಕೆಲವರು ಎಲ್ಲಾ ಚೆನ್ನಾಗಿದ್ದಾಗ ನಯನತಾರಾ ಏಕೆ ಅಂತಹ ಪೋಸ್ಟ್ ಮಾಡಿದ್ದು ಎಂದು ಕಾಮೆಂಟ್ ಮಾಡುತ್ತಿದ್ದಾರೆ.

ಇನ್ನೂ ನಟಿ ನಯನತಾರಾ ಮದುವೆಯಾದ ಬಳಿಕ ಭಾರಿ ಪ್ರಾಜೆಕ್ಟ್ ಗಳಲ್ಲಿ ನಟಿಸುತ್ತಾ ಕೆರಿಯರ್‍ ಸಾಗಿಸುತ್ತಿದ್ದಾರೆ. ಇತ್ತೀಚಿಗೆ ತೆರೆಕಂಡ ಆಕೆ ಜವಾನ್ ಸಿನೆಮಾದ ಮೂಲಕ ಭಾರಿ ಸಕ್ಸಸ್ ಕಂಡುಕೊಂಡರು. ಕೊನೆಯದಾಗಿ ಅಣ್ಣಪೂರ್ಣಿ ಎಂಬ ಸಿನೆಮಾದಲ್ಲಿ ನಟಿಸಿದ್ದು, ಈ ಸಿನೆಮಾ ಸಹ ಕೆಲವೊಂದು ವಿವಾದಗಳಿಗೆ ಕಾರಣವಾಗಿತ್ತು. ಇದೀಗ ಆಕೆ ಮತಷ್ಟು ಸಿನೆಮಾಗಳಲ್ಲಿ ಬ್ಯುಸಿಯಾಗಿದ್ದಾರೆ.

Most Popular

To Top