Film News

ಮಾಲ್ಡೀವ್ಸ್ ನಲ್ಲಿ ಬರ್ತ್ ಡೇ ಪಾರ್ಟಿ ಮಾಡಿಕೊಂಡ ಪೂಜಾ ಹೆಗ್ಡೆ, ವೈರಲ್ ಆದ ಪೊಟೋಸ್, ವಿಡಿಯೋಸ್…..!

ಕಡಿಮೆ ಸಮಯದಲ್ಲೆ ಭಾರಿ ಕ್ರೇಜ್ ಪಡೆದುಕೊಂಡ ನಟಿಯರ ಸಾಲಿನಲ್ಲಿ ಬುಟ್ಟಬೊಮ್ಮ ಎಂದೇ ಕರೆಯಲಾಗುವ ಪೂಜಾ ಹೆಗ್ಡೆ ಸಹ ಒಬ್ಬರಾಗಿದ್ದಾರೆ. ತನ್ನ ಕೆರಿಯರ್‍ ನಲ್ಲಿ ಒಳ್ಳೆಯ ಹಿಟ್ ಸಿನೆಮಾಗಳನ್ನು ಪಡೆದುಕೊಂಡಿದ್ದಾರೆ. ಜೊತೆಗೆ ಸೋಷಿಯಲ್ ಮಿಡಿಯಾದಲ್ಲೂ ಸಹ ಭಾರಿ ಫಾಲೋಯಿಂಗ್ ಪಡೆದುಕೊಂಡಿದ್ದಾರೆ. ಇದೀಗ ಪೂಜಾ ಹೆಗ್ಡೆ ತಮ್ಮ ಹುಟ್ಟುಹಬ್ಬವನ್ನು ಮಾಲ್ಡೀವ್ಸ್ ನಲ್ಲಿ ಆಚರಿಸಿಕೊಂಡಿದ್ದಾರೆ. ಈ ಸಂಬಂಧ ಪೊಟೋಗಳು ಹಾಗೂ ವಿಡಿಯೋಗಳು ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗಿದೆ.

ಸ್ಟಾರ್‍ ನಟಿ ಪೂಜಾ ಹೆಗ್ಡೆ ಕಳೆದ ವರ್ಷದ ವರೆಗೂ ಬ್ಯಾಕ್ ಟು ಬ್ಯಾಕ್ ಸೂಪರ್‍ ಹಿಟ್ ಸಿನೆಮಾಗಳ ಮೂಲಕ ಬ್ಯುಸಿಯಾಗಿದ್ದರು. ಆದರೆ ಆಕೆಗೆ ಕಳೆದ ವರ್ಷ ಮಾತ್ರ ತುಂಬಾನೆ ಕೆಟ್ಟದಾಗಿತ್ತು ಎನ್ನಬಹುದಾಗಿದೆ. ಆಕೆ ಅಭಿನಯದ ಒಂದೂ ಸಿನೆಮಾ ಸಹ ಹಿಟ್ ಆಗಲಿಲ್ಲ. ಆಕೆ ಅಭಿನಯದ ಎಲ್ಲಾ ಸಿನೆಮಾಗಳು ಬಾಕ್ಸ್ ಆಫೀಸ್ ನಲ್ಲಿ ಮಕಾಡೆ ಮಲಗಿತ್ತು. ಜೊತೆಗೆ ಆಕೆ ಒಪ್ಪಿಕೊಂಡ ಕೆಲವೊಂದು ಸಿನೆಮಾಗಳಿಂದಲೂ ಸಹ ಆಕೆ ಹೊರಬರಬೇಕಾಯ್ತು. ಕೆಲವೊಂದು ಕಾರಣಗಳಿಂದ ಸಿನೆಮಾಗಳಿಂದ ದೂರವುಳಿದ ಪೂಜಾ ಇದೀಗ ಮತ್ತೆ ಸಿನೆಮಾಗಳಲ್ಲಿ ನಟಿಸಲು ಮುಂದಾಗುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.

ಅ.13 ಪೂಜಾ ಹೆಗ್ಡೆ ಯವರ ಹುಟ್ಟುಹಬ್ಬವಾಗಿದೆ. ಇದೀಗ ಆಕೆ 33ನೇ ವಸಂತಕ್ಕೆ ಕಾಲಿಡುತ್ತಿದ್ದಾರೆ. ಈ ಬಾರಿ ತನ್ನ ಹುಟ್ಟುಹಬ್ಬವನ್ನು ಮಾಲ್ಡೀವ್ಸ್ ನಲ್ಲಿ ಆಚರಿಸಿಕೊಂಡಿದ್ದಾರೆ. ಈ ಸಂಬಂಧ ಕೆಲವೊಂದು ಪೊಟೋಗಳನ್ನು ವಿಡಿಯೋಗಳನ್ನು ಆಕೆ ತನ್ನ ಸೋಷಿಯಲ್ ಮಿಡಿಯಾ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಈ ಪೈಕಿ ಸಮುದ್ರದಲ್ಲಿ ಬೆಡ್ ಹಾಕಿಕೊಂಡ ಮಲಗಿಕೊಂಡು ಪೋಸ್ ಕೊಟ್ಟಿದ್ದಾರೆ. ಶಾರ್ಟ್ ಡ್ರೆಸ್ ನಲ್ಲಿ ಥೈಸ್ ಶೋ ಮಾಡುತ್ತಾ, ಬೀಚ್ ನಲ್ಲಿ ಕುಣಿದಾಡುತ್ತಾ ಎಂಜಾಯ್ ಮಾಡುತ್ತಾ ಪುಲ್ ಖುಷಿಯಾಗಿದ್ದಾರೆ. ಈ ಹುಟ್ಟುಹಬ್ಬವನ್ನು ಜೀವನದಲ್ಲಿ ನೆನಪಿನಲ್ಲಿಟ್ಟುಕೊಳ್ಳುವಂತೆ ಮಾಡಿಕೊಂಡಿದ್ದಾರೆ. ಸೆಲ್ಫಿ ಪೋಸ್ ಗಳ ಮೂಲಕ ಕ್ಲೋಜಪ್ ಆಗಿ ದೇಹದ ಮೈಮಾಟ ಪ್ರದರ್ಶನ ಮಾಡಿದ್ದಾರೆ. ಸದ್ಯ ಆಕೆಯ ಪೊಟೋಗಳು ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿದ್ದು, ಅಭಿಮಾನಿಗಳು ಹಾಗೂ ನೆಟ್ಟಿಗರು ಶುಭಾಷಯಗಳನ್ನು ಕೋರುತ್ತಾ ಕಾಮೆಂಟ್ ಗಳನ್ನು ಮಾಡುತ್ತಿದ್ದಾರೆ.

ಇನ್ನೂ ಪೂಜಾ ಹೆಗ್ಡೆ ಮಹೇಶ್ ಬಾಬು ರವರ ಗುಂಟೂರು ಖಾರಂ ಹಾಗೂ ಉಸ್ತಾದ ಭಗತ್ ಸಿಂಗ್ ಸಿನೆಮಾಗಳಿಂದಲೂ ಹೊರಬಂದರು. ಡೇಟ್ಸ್ ಹೊಂದಾಣಿಕೆಯಾಗದ ಕಾರಣದಿಂದ ಆಕೆ ಈ ಸಿನೆಮಾಗಳಿಂದ ಹೊರಬಂದರು ಎನ್ನಲಾಗಿದೆ. ಸದ್ಯ ಆಕೆ ಸಾಯಿಧರಮ್ ತೇಜ್ ಜೊತೆಗೆ ಗಂಜಾ ಶಂಕರ್‍ ಸಿನೆಮಾ ಹಾಗೂ ಹಿಂದಿಯಲ್ಲಿ ಸಿನೆಮಾ ಒಂದರಲ್ಲಿ ನಟಿಸುತ್ತಿದ್ದಾರೆ ಎಂದು ತಿಳಿದುಬಂದಿದೆ.

Most Popular

To Top